ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಆಭರಣ ಖರೀದಿಗೂ ಮುನ್ನ ಇಂದಿನ ಬೆಲೆ ಎಷ್ಟಿದೆ ತಿಳಿದುಕೊಳ್ಳಿ.
1/8ಚಿನ್ನದ ಬೆಲೆ ಹೀಗೆಯೇ ಮುಂದುವರಿಯುತ್ತದೆ ಎಂದು ಅಂದಾಜಿಸುವುದು ಕಷ್ಟ. ಇತ್ತೀಚಿನ ದಿನಗಳಲ್ಲಿ ಬಂಗಾರದ ಬೆಲೆ ಒಮ್ಮೆ ಮುಗಿಲು ಮುಟ್ಟಿದರೆ ಮತ್ತೊಮ್ಮೆ ದಿಢೀರ್ ಕುಸಿತ ಕಾಣುತ್ತಿದೆ.
2/8ಬಂಗಾರದ ಬೆಲೆಯಲ್ಲಿನ ಏರಿಳಿತದಿಂದಾಗಿ ಆಭರಣ ಖರೀದಿ ಮಾಡುವವರಲ್ಲಿಯೂ ಗೊಂದಲ ಮನೆ ಮಾಡಿದೆ. ಏರಿಕೆ ಎಂದು ಹಿಂದೆ ಸರಿಯುವುದೋ, ಇಳಿಕೆ ಎಂದು ಖರೀದಿಸಿ ಬಿಡುವುದೋ ಎನ್ನುವ ಗೊಂದಲ ಉಂಟಾಗಿದೆ.
3/8ತಜ್ಞರ ಲೆಕ್ಕಾಚಾರದ ಬಂಗಾರದ ಬೆಲೆಯ ಪ್ರವೃತ್ತಿ ಹೀಗೆಯೇ ಮುಂದುವರಿಯುವುದಿಲ್ಲ. ಒಂದು ಹಂತದಲ್ಲಿ ಅದು ಇಳಿಯಲೇ ಬೇಕು. ಆದರೆ ಮಾರುಕಟ್ಟೆ ಬೇರೆಯೇ ಕತೆ ಹೇಳುತ್ತದೆ.
4/8ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಚಿನ್ನವು ಔನ್ಸ್‌ಗೆ ಶೇ. 0.37 ರಷ್ಟು ಇಳಿದಿದ್ದು, 3,384 ಡಾಲರ್‌ಗಳಿಗೆ ತಲುಪಿದ್ದರೆ, ಬೆಳ್ಳಿ ಶೇ. 0.67 ರಷ್ಟು ಇಳಿದು 34.46 ಡಾಲರ್‌ಗಳಿಗೆ ತಲುಪಿದೆ.
5/8ಆದರೆ ಭಾರತದಲ್ಲಿ ಬಂಗಾರದ ಬೆಲೆ ಮತ್ತೆ ಜಿಗಿಯಲು ಪ್ರಾರಂಭಿಸಿದೆ. ಮಂಗಳವಾರ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ ಕಂಡಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ಸುಮಾರು 97,000 ರೂ.ಗೆ ಏರಿಕೆಯಾಗಿದೆ. ಬೆಳ್ಳಿ ಬೆಲೆ ಕೆಜಿಗೆ ಒಂದು ಲಕ್ಷ ರೂಪಾಯಿ ದಾಟಿದೆ.
6/8ಇಂಡಿಯಾ ಬುಲಿಯನ್ ಜ್ಯುವೆಲ್ಲರ್ಸ್ ಅಸೋಸಿಯೇಷನ್ (ಐಬಿಜೆಎ) ಪ್ರಕಾರ, 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 187 ರೂ.ಗಳಷ್ಟು ಏರಿಕೆಯಾಗಿ 96,867 ರೂ.ಗಳಿಗೆ ತಲುಪಿದೆ. 22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 88,730 ರೂ.ಗಳಿಗೆ ಏರಿಕೆಯಾಗಿದ್ದು, 18 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 72,650 ರೂ. ಆಗಿದೆ.
7/8ಎಂಸಿಎಕ್ಸ್‌ನಲ್ಲಿ ಚಿನ್ನದ ಕಾರ್ಯಕ್ಷಮತೆ 10 ಗ್ರಾಂ.ಗೆ 97,700 ರೂ.ಗಳಲ್ಲಿ ಬಹುತೇಕ ಸ್ಥಿರವಾಗಿದೆ. ಯುಎಸ್‌ನಲ್ಲಿ ಪ್ರಮುಖ ಆರ್ಥಿಕ ದತ್ತಾಂಶಕ್ಕಿಂತ ಮುಂಚಿತವಾಗಿ ಚಿನ್ನವು ಏಕೀಕರಣ ಹಂತದಲ್ಲಿದೆ.
8/8ಚಿನ್ನದ ಜೊತೆಗೆ ಬೆಳ್ಳಿಯ ಬೆಲೆಯಲ್ಲಿಯೂ ಭಾರೀ ಏರಿಕೆ ಕಂಡುಬಂದಿದೆ. ಕಳೆದ 24 ಗಂಟೆಗಳಲ್ಲಿ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 2,669 ರೂ.ಗಳಷ್ಟು ಏರಿಕೆಯಾಗಿ 1,00,460 ರೂ.ಗಳಿಗೆ ತಲುಪಿದೆ.