ಏರಿಕೆಯ ಆತಂಕದ ಮಧ್ಯವೇ ಮತ್ತಷ್ಟು ಕುಸಿದ ಚಿನ್ನದ ಬೆಲೆ! ಆಭರಣ ಪ್ರಿಯರಲ್ಲಿ ಮೂಡಿತು ಸಂತಸ..

Written BySavita M B
Published: Jun 24, 2025, 09:33 AM IST|Updated: Jun 24, 2025, 10:09 AM IST

Gold Rate Today Karnataka: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಮತ್ತೆ ಕುಸಿದವು. ಇರಾನ್-ಇಸ್ರೇಲ್ ಉದ್ವಿಗ್ನತೆ ಮತ್ತು ಯುಎಸ್ ಡಾಲರ್ ಏರಿಳಿತದಂತಹ ಇತ್ತೀಚಿನ ಜಾಗತಿಕ ಮತ್ತು ಭೌಗೋಳಿಕ ಅಂಶಗಳು ಚಿನ್ನದ ಬೆಲೆಗಳ ಮೇಲೆ ಪರಿಣಾಮ ಬೀರುತ್ತಿವೆ.  

1/6

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿನ ಏರಿಳಿತಗಳ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲಿ ಕಂಡುಬರುತ್ತಿದೆ. ಜೂನ್ 24 ರಂದು ದೇಶದಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1 ಲಕ್ಷ 680 ರೂ.ಗಳಾಗಿದ್ದರೆ, 22 ಕ್ಯಾರೆಟ್ ನ 10 ಗ್ರಾಂ ಬೆಲೆ 92,290 ರೂ.ಗಳಷ್ಟಿದೆ.   

2/6

ಭಾರತದ ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (MCX) ನಲ್ಲಿ ಸೋಮವಾರ ಮಧ್ಯಾಹ್ನ ಚಿನ್ನದ ಬೆಲೆಗಳು ಬಹುತೇಕ ಸ್ಥಿರವಾಗಿದ್ದವು. ಆರಂಭಿಕ ವಹಿವಾಟಿನಲ್ಲಿ ಕೇವಲ 0.06% ರಷ್ಟು ಕುಸಿತದೊಂದಿಗೆ ವಹಿವಾಟು ನಡೆಸುತ್ತಿತ್ತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಗಳು ಒತ್ತಡದಲ್ಲಿದ್ದರೂ, ರೂಪಾಯಿಯ ದುರ್ಬಲತೆಯು ಭಾರತದಲ್ಲಿ ಚಿನ್ನದ ಬೆಲೆಗಳನ್ನು ಬೆಂಬಲಿಸುತ್ತಿದೆ. ಈ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ.    

3/6

ದೆಹಲಿಯಲ್ಲಿ 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 1 ಲಕ್ಷ 830 ರೂ.ಗಳಾಗಿದ್ದರೆ, 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 92,440 ರೂ.ಗಳಾಗಿದೆ. ಮುಂಬೈನಲ್ಲಿ 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 1 ಲಕ್ಷ 680 ರೂ.ಗಳಾಗಿದ್ದರೆ, 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 92,290 ರೂ.ಗಳಲ್ಲೇ ಮುಂದುವರೆದಿದೆ.   

4/6

ಬೆಂಗಳೂರಿನಲ್ಲಿ 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 1,00,680ರೂ. ಗಳಾಗಿದ್ದು, 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 92,290 ರೂ. ನಿಗದಿಯಾಗಿದೆ.. ಹೈದರಾಬಾದ್‌ನಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1 ಲಕ್ಷ 680 ರೂ.ಗಳಾಗಿದ್ದರೆ, 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 92,290 ರೂ.ಗಳಲ್ಲೇ ಮುಂದುವರೆದಿದೆ. ಬೆಳ್ಳಿ ಬೆಲೆಯ ಬಗ್ಗೆ ಹೇಳುವುದಾದರೆ, ಅದು ಕೂಡ ಸ್ವಲ್ಪ ಕಡಿಮೆಯಾಗಿದ್ದು, ಪ್ರಸ್ತುತ ಪ್ರತಿ ಕೆಜಿಗೆ 1 ಲಕ್ಷ 990 ರೂ.ಗಳಷ್ಟಿದೆ.   

5/6

ಇನ್ನು ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಖರೀದಿಸುವಾಗ, ಗುಣಮಟ್ಟದ ಬಗ್ಗೆ ಗಮನ ಹರಿಸುವುದು ಮುಖ್ಯ. ಹಾಲ್‌ಮಾರ್ಕ್ ಪರಿಶೀಲಿಸಿದ ನಂತರವೇ ಚಿನ್ನವನ್ನು ಖರೀದಿಸಿ. ಹಾಲ್‌ಮಾರ್ಕ್ ಮಾಡಿದ ಚಿನ್ನವನ್ನು ಸರ್ಕಾರ ಖಾತರಿಪಡಿಸುತ್ತದೆ ಎಂದು ಹೇಳಬಹುದು.   

6/6

ಭಾರತದಲ್ಲಿ, ಹಾಲ್‌ಮಾರ್ಕ್‌ಗಳನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ನೀಡುತ್ತದೆ. ವಿಭಿನ್ನ ಕ್ಯಾರೆಟ್‌ಗಳು ವಿಭಿನ್ನ ಹಾಲ್‌ಮಾರ್ಕ್ ಸಂಖ್ಯೆಗಳನ್ನು ಹೊಂದಿವೆ. ನೀವು ಅದನ್ನು ನೋಡುವ ಮೂಲಕ ಚಿನ್ನವನ್ನು ಖರೀದಿಸಬಹುದು.