Today Silver Price: ಚಿನ್ನದ ಬೆಲೆಗಳು ಸಾಮಾನ್ಯ ಜನರಿಗೆ ಕೈಗೆಟುಕದಂತಹ ಮಟ್ಟಕ್ಕೆ ಏರುತ್ತಿವೆ. ಮತ್ತೊಂದೆಡೆ ಬೆಳ್ಳಿ ಬೆಲೆಗಳು ಸಹ ದಾಖಲೆ ಸೃಷ್ಟಿಸುತ್ತಿವೆ. ಇತ್ತೀಚಿನ ಬೆಳ್ಳಿ ಬೆಲೆ 13 ವರ್ಷಗಳ ದಾಖಲೆಯನ್ನು ಮುರಿದಿದೆ. ಹೆಚ್ಚಿದ ದೇಶೀಯ ಬೇಡಿಕೆ ಮತ್ತು ಜಾಗತಿಕ ಪ್ರಭಾವಗಳಿಂದ ಬೆಳ್ಳಿ ಬೆಲೆಗಳು ಏರಿಕೆಯಾಗಿವೆ ಎಂದು ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.
Today Gold and Silver Price: ಸ್ಥಳೀಯ ಆಭರಣ ತಯಾರಕರು ಮತ್ತು ದಾಸ್ತಾನುದಾರರು ಖರೀದಿ ಭರಾಟೆಯಿಂದ ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ಬೆಳ್ಳಿಯ ಬೆಲೆ 4,539 ಸಾವಿರ ರೂಪಾಯಿನಷ್ಟು ಏರಿಕೆಯಾಗಿ ಕೆಜಿಗೆ 1,08,639 ರೂ.ಗಳ ಹೊಸ ದಾಖಲೆ ಬರೆದಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ
ದೇಶೀಯ ಬೆಳ್ಳಿ ಬೆಲೆಗಳು ಹೊಸ ದಾಖಲೆಗಳನ್ನು ಸೃಷ್ಟಿಸಿವೆ. MCXನಲ್ಲಿ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 108,639 ರೂಪಾಯಿ ತಲುಪಿದೆ. ಅಂತಾರಾಷ್ಟ್ರೀಯ ಬೆಲೆ ಪ್ರತಿ ಔನ್ಸ್‌ಗೆ $34.90ರಷ್ಟಿದೆ. 2025ರಲ್ಲಿ ಹೂಡಿಕೆದಾರರಿಗೆ ಬೆಳ್ಳಿ ಅತ್ಯಂತ ಉತ್ತಮ ಆಸ್ತಿಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಭಾರತದಲ್ಲಿ MCXನಲ್ಲಿ ಪ್ರತಿ ಕೆಜಿಗೆ ಅದರ ಬೆಲೆ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. 2012ರ ನಂತರದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದು ಅತ್ಯಧಿಕ ಮಟ್ಟವಾಗಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ರಾಷ್ಟ್ರ ರಾಜಧಾನಿಯಲ್ಲಿ ಬೆಳ್ಳಿ ಬೆಲೆ ಪ್ರತಿ ಕೆಜಿಗೆ 4,539 ರೂಪಾಯಿಗಳಷ್ಟು ಏರಿಕೆಯಾಗಿ 1,07,100 ರೂ.ಗಳಿಗೆ ತಲುಪಿದ್ದು, ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ಬೆಳ್ಳಿ ಬೆಲೆಯಲ್ಲಿ ಇದು ಸತತ ಎರಡನೇ ದಿನವೂ ತೀವ್ರ ಏರಿಕೆಯಾಗಿದೆ. ಗುರುವಾರ ಸ್ಥಳೀಯ ಮಾರುಕಟ್ಟೆಗಳಲ್ಲಿ ಬೆಳ್ಳಿ ಪ್ರತಿ ಕೆಜಿಗೆ 2,000 ರೂ.ಗಳಷ್ಟು ಏರಿಕೆಯಾಗಿ 1,04,100 ರೂ.ಗಳಿಗೆ ತಲುಪಿದ್ದು (ಎಲ್ಲಾ ತೆರಿಗೆಗಳನ್ನು ಒಳಗೊಂಡಂತೆ) ಹೊಸ ಗರಿಷ್ಠ ಮಟ್ಟವನ್ನು ತಲುಪಿತ್ತು. ಕಳೆದ ವರ್ಷ ಡಿಸೆಂಬರ್ 31ರಿಂದ ಈ ವರ್ಷ ಇಲ್ಲಿಯವರೆಗೆ ಬೆಳ್ಳಿ ಪ್ರತಿ ಕೆಜಿಗೆ 17,400 ರೂ.ಗಳಷ್ಟು ಅಥವಾ ಶೇ.19.4ರಷ್ಟು ಏರಿಕೆಯಾಗಿದೆ.
ಅಖಿಲ ಭಾರತ ಸರಾಫಾ ಸಂಘದ ಪ್ರಕಾರ, ಶುಕ್ರವಾರ 99.9 ಮತ್ತು 99.5 ಪ್ರತಿಶತ ಶುದ್ಧತೆಯ ಚಿನ್ನವು 10 ಗ್ರಾಂಗೆ 99,690 ಮತ್ತು 99,100 ರೂ.ಗಳಲ್ಲಿ (ಎಲ್ಲಾ ತೆರಿಗೆಗಳನ್ನು ಒಳಗೊಂಡಂತೆ) ಸ್ಥಿರವಾಗಿದೆ. ದೇಶೀಯ ಬೇಡಿಕೆ ಮತ್ತು ಜಾಗತಿಕ ಪ್ರಭಾವಗಳಿಂದ ಬೆಳ್ಳಿ ಬೆಲೆ ಏರಿಕೆಯಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
MCXನಲ್ಲಿ ಆಗಸ್ಟ್‌ನಲ್ಲಿ ವಿತರಿಸಲಾದ ಚಿನ್ನದ ಬೆಲೆ 10 ಗ್ರಾಂಗೆ 44 ರೂ.ಗಳಷ್ಟು ಇಳಿದು 97,830 ರೂ.ಗಳಿಗೆ ತಲುಪಿದೆ. ವಿದೇಶಿ ಮಾರುಕಟ್ಟೆಗಳಲ್ಲಿ ಸ್ಪಾಟ್ ಚಿನ್ನದ ಬೆಲೆ ಶೇ.0.22ರಷ್ಟು ಹೆಚ್ಚಾಗಿ ಔನ್ಸ್‌ಗೆ $3,360.05ಕ್ಕೆ ತಲುಪಿದೆ. ಜುಲೈನಲ್ಲಿ ಅತಿಹೆಚ್ಚು ವಹಿವಾಟು ನಡೆಸಲಾದ ಬೆಳ್ಳಿ contract 1,622 ರೂ.ಗಳಷ್ಟು ಏರಿಕೆಯಾಗಿ ಪ್ರತಿ ಕೆಜಿಗೆ 1,06,065 ರೂ.ಗಳ ಹೊಸ ಗರಿಷ್ಠ ಮಟ್ಟವನ್ನು ತಲುಪಿದೆ.
ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (MCX)ನಲ್ಲಿ ಸೆಪ್ಟೆಂಬರ್ ತಿಂಗಳ contract ಬೆಲೆ 1,650 ರೂ.ಗಳಷ್ಟು ಏರಿಕೆಯಾಗಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ಪ್ರತಿ ಕೆಜಿಗೆ 1,07,130 ರೂ.ಗಳನ್ನು ತಲುಪಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಸ್ಪಾಟ್ ಬೆಳ್ಳಿ ಬೆಲೆಗಳು ಶೇ.1.63ರಷ್ಟು ಏರಿಕೆಯಾಗಿ ಪ್ರತಿ ಔನ್ಸ್‌ಗೆ $36.23ಕ್ಕೆ ತಲುಪಿದೆ. ಇತ್ತೀಚಿನ ದಿನಗಳಲ್ಲಿ ಬೆಳ್ಳಿ ಬೆಲೆಗಳು ನಿರಂತರ ಏರಿಕೆಯ ಪ್ರವೃತ್ತಿಯನ್ನು ಕಾಣುತ್ತಿವೆ.
ಅಮೆರಿಕದಲ್ಲಿ ಹೆಚ್ಚುತ್ತಿರುವ ಆರ್ಥಿಕ ಬಿಕ್ಕಟ್ಟು ಮತ್ತು ಪ್ರಪಂಚದಾದ್ಯಂತ ಹೆಚ್ಚುತ್ತಿರುವ ರಾಜಕೀಯ ಉದ್ವಿಗ್ನತೆಗಳು, ಡಾಲರ್ ದುರ್ಬಲಗೊಳ್ಳುವುದರ ಜೊತೆಗೆ ಬೆಳ್ಳಿಯ ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿವೆ. ಇದರ ಜೊತೆಗೆ ವಿದ್ಯುತ್ ವಾಹನಗಳು ಮತ್ತು ಸೌರಶಕ್ತಿ ವಲಯಗಳಿಂದ ಹೆಚ್ಚುತ್ತಿರುವ ಕೈಗಾರಿಕಾ ಬೇಡಿಕೆಯೂ ಸಹ ಒಂದು ಕಾರಣವಾಗಿದೆ. ಈ ಏರಿಕೆ ಮುಂದುವರೆದಿದೆ ಎಂದು ತಜ್ಞರು ಹೇಳಿದ್ದಾರೆ.
ಅಮೆರಿಕ-ಚೀನಾ ವ್ಯಾಪಾರ ಸಂಬಂಧದ ಸುತ್ತಲಿನ ವ್ಯಾಪಾರ ಅನಿಶ್ಚಿತತೆಗಳಿಂದ ಮಾರುಕಟ್ಟೆಯ ಏರಿಳಿತಗಳು ಹೆಚ್ಚುತ್ತಲೇ ಇರುತ್ತವೆ ಎಂದು ಕೆಡಿಯಾ ಅಡ್ವೈಸರಿಯಲ್ಲಿ ಹಿರಿಯ ಸಂಶೋಧನಾ ವಿಶ್ಲೇಷಕ ಅಮಿತ್ ಗುಪ್ತಾ ಹೇಳುತ್ತಾರೆ. ಈ ಬೆಳವಣಿಗೆಗಳ ಮಧ್ಯೆ ಬೆಳ್ಳಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹಣಕಾಸು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ವರ್ಷದ ಅಂತ್ಯದ ವೇಳೆಗೆ ಒಂದು ಕೆಜಿ ಬೆಳ್ಳಿ 1,30,000 ರೂ. ತಲುಪುವ ಸಾಧ್ಯತೆಯಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.