Gold and Silver investment : ವರ್ಷಾಂತ್ಯದಲ್ಲಿ ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡಲು ಯೋಚಿಸುತ್ತಿದ್ದರೆ, ಕೆಲವು ಮುಖ್ಯ ಆರ್ಥಿಕ ವಿಷಯಗಳನ್ನು ತಿಳಿದಿರಲು ತುಂಬಾ ಅಗತ್ಯ. ಸರಿಯಾದ ಮಾಹಿತಿ ಇಲ್ಲದೆ ಮಾಡಿದ ಹೂಡಿಕೆ ಲಾಭ ನೀಡುವುದಿಲ್ಲ, ಬದಲಿಗೆ ನಷ್ಟವನ್ನೇ ಉಂಟುಮಾಡಬಹುದು.
1/5Gold and Silver investment : ವರ್ಷಾಂತ್ಯ ಬಂದಾಗ ಹಲವರು ಚಿನ್ನ ಅಥವಾ ಬೆಳ್ಳಿ ಖರೀದಿ ಮಾಡಲು ಮುಂದಾಗುತ್ತಾರೆ. ಈ ಎರಡು ಲೋಹಗಳು ಭಾರತೀಯ ಕುಟುಂಬಗಳಲ್ಲಿ ಭದ್ರತಾ ಸಂಕೇತಗಳಾಗಿ ಪರಿಗಣಿಸಲಾಗುತ್ತವೆ. ಆದರೆ ಈ ಬಾರಿ ಮಾರುಕಟ್ಟೆ ಪರಿಸ್ಥಿತಿ ಮಿಶ್ರವಾಗಿದೆ. ಚಿನ್ನ ಈ ವರ್ಷ ಸ್ಥಿರವಾಗಿದ್ದರೂ ಬೆಳ್ಳಿ ತುಂಬಾ ಅಸ್ಥಿರವಾಗಿದೆ. ಮೋತಿಲಾಲ್ ಓಸ್ವಾಲ್ ವರದಿ ಪ್ರಕಾರ, ಮಾರುಕಟ್ಟೆ ಯಾವಾಗ ಬೇಕಾದರೂ ಬದಲಾಗುವ ಸಾಧ್ಯತೆ ಇರುವುದರಿಂದ ಖರೀದಿಯಲ್ಲಿ ಎಚ್ಚರಿಕೆ ಅಗತ್ಯ.
2/5ನಿಮ್ಮ ಬಳಿ ಈಗಾಗಲೇ ಚಿನ್ನವಿದ್ದರೆ, ಅದನ್ನು ಮಾರಾಟ ಮಾಡುವ ಅಗತ್ಯವಿಲ್ಲ. ಚಿನ್ನ ತ್ವರಿತ ಲಾಭ ಕೊಡುವ ಲೋಹವಲ್ಲ, ಆದರೆ ಹಣದುಬ್ಬರ ಮತ್ತು ಜಾಗತಿಕ ಉದ್ವಿಗ್ನತೆಯ ಸಮಯದಲ್ಲಿ ಹಣವನ್ನು ರಕ್ಷಿಸುತ್ತದೆ. ಹೊಸದಾಗಿ ಖರೀದಿಸಲು ಬಯಸುವವರು ಒಮ್ಮೆಲೆ ದೊಡ್ಡ ಮೊತ್ತ ಹೂಡದೆ, SIP ಮಾದರಿಯಲ್ಲಿ ನಿಧಾನವಾಗಿ ಖರೀದಿಸುವುದು ಉತ್ತಮ. ಇದು ಬೆಲೆ ಏರಿಳಿತದ ಅಪಾಯವನ್ನು ಕಡಿಮೆ ಮಾಡುತ್ತದೆ.
3/5ಬೆಳ್ಳಿ ಚಿನ್ನಕ್ಕಿಂತ ಕಡಿಮೆ ದರದಲ್ಲಿದ್ದರೂ, ಅದರ ಬೆಲೆ ತುಂಬಾ ಚಂಚಲ. ಕೈಗಾರಿಕಾ ಬೇಡಿಕೆ, ಜಾಗತಿಕ ಪೂರೈಕೆ, ಜಿಯೋಪಾಲಿಟಿಕಲ್ ಘಟನೆಗಳಿಂದ ಬೆಳ್ಳಿ ದರ ದೊಡ್ಡ ಮಟ್ಟದಲ್ಲಿ ಏರಬಹುದು–ಇಳಿಯಬಹುದು. ಅದಕ್ಕಾಗಿ ಹೆಚ್ಚಿನ ಅಪಾಯವನ್ನು ನಿಭಾಯಿಸಬಲ್ಲ ಹೂಡಿಕೆದಾರರು ಮಾತ್ರ ಬೆಳ್ಳಿಯನ್ನು ಖರೀದಿಸುವುದು ಸರಿಯೆಂದು ತಜ್ಞರು ತಿಳಿಸಿದ್ದಾರೆ. ಜಾಸ್ತಿ ಹಣವನ್ನು ಒಂದೇ ಬಾರಿ ಹೂಡಬಾರದು.
4/5ಚಿನ್ನ–ಬೆಳ್ಳಿ ಹೂಡಿಕೆಗಳು ದೈರ್ಯ ನೀಡುವ ಲೋಹಗಳು, ಆದರೆ ಆದಾಯ ಕೊಡಿಸುವವುಗಳಲ್ಲ. ಹೀಗಾಗಿ ಒಟ್ಟು ಹೂಡಿಕೆಯ 10% ಕ್ಕಿಂತ ಹೆಚ್ಚು ಚಿನ್ನ ಅಥವಾ ಬೆಳ್ಳಿಗೆ ಹಾಕಬಾರದು. ಇದು ಹಣದ ಭದ್ರತೆಯನ್ನೂ ಕಾಪಾಡುತ್ತದೆ ಮತ್ತು ಅಪಾಯವನ್ನೂ ನಿಯಂತ್ರಿಸುತ್ತದೆ. ವರ್ಷಾಂತ್ಯದಲ್ಲಿ ಅನೇಕರು ಖರೀದಿಗೆ ಮುಂದಾಗುವ ಕಾರಣ ದರ ಏರಿಳಿತ ಕೂಡಾ ಹೆಚ್ಚು ಇರಬಹುದು.
5/5ಈಗ 22K ಚಿನ್ನ ಪ್ರತಿ ಗ್ರಾಂ ₹11,676 ಮತ್ತು 24K ಚಿನ್ನ ₹12,738 ದಲ್ಲಿ ವಹಿವಾಟು ನಡೆಯುತ್ತಿದೆ. ಬೆಲೆಗಳು ರೂಪಾಯಿ–ಡಾಲರ್ ದರ, ಅಂತರರಾಷ್ಟ್ರೀಯ ಮಾರುಕಟ್ಟೆ ಮತ್ತು ಪೂರೈಕೆ-ಬೇಡಿಕೆ ಆಧರಿಸಿ ಪ್ರತಿದಿನ ಬದಲಾಗುತ್ತವೆ. ಆದ್ದರಿಂದ ಖರೀದಿಸುವ ಮೊದಲು ದೈನಂದಿನ ದರಗಳನ್ನು ಪರಿಶೀಲಿಸುವುದು ಬಹಳ ಮುಖ್ಯ.