ಗದಗ ಜಿಲ್ಲೆಯ ಐತಿಹಾಸಿಕ ಗ್ರಾಮ ಲಕ್ಕುಂಡಿಯಲ್ಲಿ ಚಿನ್ನದ ನಿಧಿ ಪತ್ತೆ

Published: Jan 10, 2026, 07:55 PM IST|Updated: Jan 10, 2026, 07:55 PM IST

ಗದಗ ಜಿಲ್ಲೆಯ ಐತಿಹಾಸಿಕ ಸ್ಥಳವಾಗಿರುವ ಲಕ್ಕುಂಡಿ ಗ್ರಾಮದಲ್ಲಿ ಮನೆ ನಿರ್ಮಾಣದ ವೇಳೆ ಚಿನ್ನದ ಆಭರಣಗಳಿಂದ ತುಂಬಿದ ಚೆಂಬು ಪತ್ತೆಯಾಗಿದೆ

1/6

ಗದಗ ಜಿಲ್ಲೆಯ ಐತಿಹಾಸಿಕ ಸ್ಥಳವಾಗಿರುವ ಲಕ್ಕುಂಡಿ ಗ್ರಾಮದಲ್ಲಿ ಮನೆ ನಿರ್ಮಾಣದ ವೇಳೆ ಚಿನ್ನದ ಆಭರಣಗಳಿಂದ ತುಂಬಿದ ಚೆಂಬು ಪತ್ತೆಯಾಗಿದೆ

2/6

ಕಲ್ಯಾಣ ಚಾಲುಕ್ಯರ ಕಾಲದ ವಾಸ್ತುಶಿಲ್ಪಕ್ಕೆ ಹೆಸರಾದ ಈ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ 101 ಬಾವಿ 101 ದೇಗುಲಗಳಿದ್ದವು ಎನ್ನುವ ಮಾತಿದೆ

3/6

ಸ್ಥಳೀಯ ನಿವಾಸಿ ಕಸ್ತೂರೆವ್ವ ರಿತ್ತಿ ಅವರ ಮನೆಯ ಅಡಿಪಾಯ ಕೆಲಸದ ವೇಳೆ ಈ ಚೆಂಬು ಪತ್ತೆಯಾಗಿದೆ.ಆರಂಭದಲ್ಲಿ ಇದನ್ನು ಸಾಮಾನ್ಯ ಚೆಂಬು ಎಂದು ಪರಿಗಣಿಸಲಾಗಿತ್ತು.ಆದರೆ ಇದನ್ನು ಪರೀಕ್ಷಿಸಿದಾಗ ಅದರೊಳಗೆ ಹಲವು ಚಿನ್ನದ ಆಭರಣಗಳು ಇರುವುದು ತಿಳಿದುಬಂದಿದೆ. ಚೈನ್, ಬಳೆಗಳು ಹಾಗೂ ಉಂಗುರಗಳಂತಹ ಆಭರಣಗಳು ಚೆಂಬಿನಲ್ಲಿ ಇರುವುದು ಕಂಡು ಬಂದಿದೆ.

 

4/6

ಪಕ್ಕದಲ್ಲಿರುವ ಪುರಾತನ ಲಕ್ಷ್ಮೀ ದೇವಸ್ಥಾನದೊಂದಿಗೆ ಈ ಆಭರಣಗಳ ನಂಟು ಇದೆಯೇ ಎನ್ನುವ ಚರ್ಚೆ ಶುರುವಾಗಿದೆ. ಈ ಸುದ್ದಿ ತಿಳಿದ ನಂತರ  ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ

5/6

11ನೇ ಮತ್ತು 12ನೇ ಶತಮಾನದ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಿತವಾದ ಹಲವು ದೇವಸ್ಥಾನಗಳು ಇಲ್ಲಿವೆ.ಈಗ ಇಲ್ಲಿ ಚಿನ್ನದ ಆಭರಣಗಳು ಪತ್ತೆಯಾಗಿರುವುದು ಈ ಗ್ರಾಮದ ಐತಿಹಾಸಿಕ ಮಹತ್ವವನ್ನು ಸಾರುತ್ತದೆ.

 

6/6

ಈಗ ಚಿನ್ನದ ಆಭರಣಗಳು ಸಿಕ್ಕಿರುವುದರಿಂದ ತಜ್ಞರು ಇದರ ಐತಿಹಾಸಿಕ ಮಹತ್ಬವನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಮುಂದಾಗಿದ್ದಾರೆ