ಅಕ್ಟೋಬರ್ 2 ಅಂದರೆ ಇಂದು ದಸರಾ ಸಂಭ್ರಮ. ಇದರ ಮಾರನೇ ದಿನವಾದ ನಾಳೆ ಶನಿದೇವನು ಮಹತ್ವದ ಸಂಚಾರ ಮಾಡಲಿದ್ದಾನೆ. ಶನಿಯ ಸ್ಥಾನದಲ್ಲಿನ ಈ ಬದಲಾವಣೆಯು ಬಹಳ ಮಹತ್ವದ್ದಾಗಿದೆ.
1/5ನಾಳೆ ಶನಿದೇವ ಪೂರ್ವ ಭಾದ್ರಪದ ನಕ್ಷತ್ರಕ್ಕೆ ಪ್ರವೇಶಿಸುತ್ತಾನೆ. 27 ವರ್ಷಗಳ ನಂತರ ಶನಿ ಪೂರ್ವ ಭಾದ್ರಪದ ನಕ್ಷತ್ರಕ್ಕೆ ಪ್ರವೇಶಿಸುತ್ತಿದ್ದು, ಕೆಲವು ರಾಶಿಯವರ ಭಾಗ್ಯದ ಬಾಗಿಲು ತೆರೆಯಲಿದ್ದಾನೆ.
2/5ಮಿಥುನ ರಾಶಿ : ಶನಿಯ ಈ ನಕ್ಷತ್ರ ಬದಲಾವಣೆಯು ಮಿಥುನ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ತರುತ್ತದೆ. ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ವ್ಯವಹಾರವು ಉತ್ತಮವಾಗಿ ನಡೆಯುತ್ತದೆ. ಹಣಕಾಸಿನ ಸಮಸ್ಯೆ ನೀಗುವುದು.
3/5ಮಕರ ರಾಶಿ : ಮಕರ ರಾಶಿಯ ಅಧಿಪತಿ ಶನಿ. ದಸರಾದ ನಂತರದ ದಿನ ಶನಿಯ ನಕ್ಷತ್ರ ಸಂಚಾರವು ಈ ರಾಶಿಯಲ್ಲಿ ಜನಿಸಿದವರಿಗೆ ಅಪಾರ ಪ್ರಯೋಜನಗಳನ್ನು ತರುತ್ತದೆ. ಅದು ಉದ್ಯೋಗವಾಗಲಿ ಅಥವಾ ವ್ಯವಹಾರವಾಗಲಿ, ಲಾಭ ನಿಮ್ಮದೇ ಆಗಿರುವುದು. ಗೌರವ ಹೆಚ್ಚಾಗುತ್ತದೆ.
4/5ಕುಂಭ ರಾಶಿ : ಶನಿಯ ನಕ್ಷತ್ರ ಬದಲಾವಣೆಯು ಕುಂಭ ರಾಶಿಯವರಿಗೂ ಪ್ರಯೋಜನ ನೀಡುವುದು. ಹೊಸ ಯೋಜನೆಗಳಲ್ಲಿ ಕೆಲಸ ಮಾಡುವಿರಿ. ಕೆಲವು ಪ್ರಮುಖ ಕೆಲಸಗಳ ಜವಾಬ್ದಾರಿ ಹೆಗಲೇರುವುದು. ಆರ್ಥಿಕ ಲಾಭವಾಗುವುದು. ಆದಾಯ ಹೆಚ್ಚಾಗಬಹುದು. ಕುಟುಂಬದಲ್ಲಿ ಸಂತೋಷ ಇರುತ್ತದೆ.
5/5ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ .