ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ..! 8ನೇ ವೇತನ ಆಯೋಗದ ಕುರಿತು ಇಲ್ಲಿದೆ ಮಹತ್ವದ ಅಪ್ಡೇಟ್..!

7ನೇ ವೇತನ ಆಯೋಗದ 10 ವರ್ಷಗಳ ಅವಧಿ ಈ ತಿಂಗಳು ಕೊನೆಗೊಳ್ಳುತ್ತದೆ ಈ ಹಿನ್ನೆಲೆಯಲ್ಲಿ ಈಗ ಹೊಸ ವೇತನ ಆಯೋಗದ ಶಿಫಾರಸುಗಳನ್ನು ಜನವರಿ 1, 2026 ರಿಂದ ಜಾರಿಗೆ ತರುವ ನಿರೀಕ್ಷೆಯಿದೆ. 

1 /5

ಇತ್ತೀಚೆಗೆ ಈ ಕುರಿತು ಪ್ರತಿಕ್ರಿಯಿಸಿರುವ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಯಲ್ಲಿ 8ನೇ ವೇತನ ಆಯೋಗದ ಸಮಯ ಮತ್ತು ನಿಧಿಯನ್ನು ನಂತರ ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.ಆದರೆ ಜನವರಿ 1, 2026 ರಿಂದ ವೇತನ ಆಯೋಗವನ್ನು ಜಾರಿಗೆ ತರಲಾಗುತ್ತದೆಯೇ ಎಂಬುದರ ಕುರಿತು ಅವರು ಸ್ಪಷ್ಟಪಡಿಸಿಲ್ಲ.  

2 /5

ಲೋಕಸಭೆಯ ಚಳಿಗಾಲದ ಅಧಿವೇಶನದ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪಂಕಜ್ ಚೌಧರಿ, 8ನೇ ವೇತನ ಆಯೋಗವನ್ನು ರಚಿಸಲಾಗಿದೆ ಮತ್ತು ಅದರ ಉಲ್ಲೇಖ ನಿಯಮಗಳನ್ನು (ToR) ಸೂಚಿಸಲಾಗಿದೆ.ಆಯೋಗ ರಚನೆಯಾದ ದಿನಾಂಕದಿಂದ 18 ತಿಂಗಳೊಳಗೆ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ಅವರು ತಿಳಿಸಿದ್ದಾರೆ. 

3 /5

ಪ್ರಸ್ತುತ ಸುಮಾರು 50.14 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು ಸುಮಾರು 69 ಲಕ್ಷ ಪಿಂಚಣಿದಾರರು 8 ನೇ ವೇತನ ಆಯೋಗದ ಶಿಫಾರಸುಗಳಿಂದ ನೇರವಾಗಿ ಪರಿಣಾಮ ಬೀರಲಿದೆ ಎಂದು ಹೇಳಿದರು.

4 /5

ಕೇಂದ್ರ ಸರ್ಕಾರವು ಈ ವರ್ಷದ ಜನವರಿಯಲ್ಲಿ 8 ನೇ ವೇತನ ಆಯೋಗವನ್ನು ಘೋಷಿಸಿತು.ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರನ್ನು ಆಯೋಗದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಈ ಆಯೋಗವು 18 ತಿಂಗಳೊಳಗೆ ತನ್ನ ಅಂತಿಮ ವರದಿಯನ್ನು ಸಲ್ಲಿಸಲಿದೆ.

5 /5

ಸಾಮಾನ್ಯವಾಗಿ, ಕೇಂದ್ರ ನೌಕರರಿಗೆ ವೇತನ ಆಯೋಗದ ಶಿಫಾರಸುಗಳನ್ನು ಪ್ರತಿ 10 ವರ್ಷಗಳಿಗೊಮ್ಮೆ ಜಾರಿಗೆ ತರಲಾಗುತ್ತದೆ. ಈ ಪದ್ಧತಿಯನ್ನು ಗಮನಿಸಿದರೆ, 8 ನೇ ವೇತನ ಆಯೋಗದ ಶಿಫಾರಸುಗಳನ್ನು ಜನವರಿ 2026 ರಿಂದ ಜಾರಿಗೆ ತರುವ ಸಾಧ್ಯತೆಯಿದೆ.