ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ..! ವೇತನ ಹೆಚ್ಚಳದ ಕುರಿತು ಮಹತ್ವದ ಘೋಷಣೆ

ಪ್ರಸ್ತುತ ಕೇಂದ್ರ ಸರ್ಕಾರದಲ್ಲಿ 50.14 ಲಕ್ಷ ನೌಕರರು ಮತ್ತು ಸುಮಾರು 69 ಲಕ್ಷ ಪಿಂಚಣಿದಾರರು ಇದ್ದಾರೆ.ಒಟ್ಟಾರೆ 1.19 ಕೋಟಿ ಜನರು 8ನೇ ವೇತನ ಆಯೋಗದ ಫಲಾನುಭವಿಗಳಾಗಲಿದ್ದಾರೆ

1 /6

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ನಿರೀಕ್ಷೆಗೆ ತಣ್ಣೀರು ಎರಚಿದ್ದು, ೮ನೇ ವೇತನ ಆಯೋಗವು 1 ಜನವರಿ 2026 ರಿಂದ ಜಾರಿಯಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ (8 ಡಿಸೆಂಬರ್ 2025) ಸಂಸತ್‌ನಲ್ಲಿ ಸ್ಪಷ್ಟಪಡಿಸಿದೆ.

2 /6

ಲೋಕಸಭೆಯಲ್ಲಿ ನಾಲ್ವರು ಸಂಸದರು ವಿತ್ತ ಸಚಿವಾಲಯದ ರಾಜ್ಯ ಸಚಿವ ಪಂಕಜ್ ಚೌಧರಿ ಅವರನ್ನು 8ನೇ ವೇತನ ಆಯೋಗದ ಬಗ್ಗೆ ಪ್ರಶ್ನಿಸಿದ್ದರು. ಉತ್ತರಿಸಿದ ಸಚಿವರು, ಆಯೋಗದ ರಚನೆ ಪೂರ್ಣಗೊಂಡಿದ್ದು, 3 ನವೆಂಬರ್ 2025ರಂದೇ ಅದರ ನಿಯಮಗಳು ಮತ್ತು ಕಾರ್ಯವ್ಯಾಪ್ತಿ (Terms of Reference) ಅಧಿಕೃತವಾಗಿ ಬಿಡುಗಡೆಯಾಗಿವೆ ಎಂದು ತಿಳಿಸಿದರು.

3 /6

ವರದಿ ಬರುವುದು ಯಾವಾಗ? : ಆಯೋಗಕ್ಕೆ ತನ್ನ ಶಿಫಾರಸುಗಳನ್ನು ಸಲ್ಲಿಸಲು ೧೮ ತಿಂಗಳ ಕಾಲಾವಕಾಶ ನೀಡಲಾಗಿದೆ. ಅಂದರೆ, 2027ರ ಮೇ-ಜೂನ್ ವೇಳೆಗೆ ವರದಿ ಸಲ್ಲಿಕೆಯಾಗಲಿದೆ.

4 /6

1 ಜನವರಿ 2026 ರಿಂದ ಜಾರಿಯಾಗಲಿದೆಯೇ? ಎನ್ನುವ ಪ್ರಶ್ನೆಗೆ ಸಚಿವರು ನೇರವಾಗಿ ನಿರಾಕರಿಸಿದ್ದಾರೆ. “ವೇತನ ಆಯೋಗದ ಜಾರಿ ದಿನಾಂಕವನ್ನು ಸರ್ಕಾರ ನಂತರ ನಿರ್ಧರಿಸಲಿದೆ. ಈಗಿನ್ನೂ ಯಾವುದೇ ದಿನಾಂಕ ಖಚಿತವಾಗಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

5 /6

2026-27ರ ಬಜೆಟ್‌ನಲ್ಲಿ ಹಣ ಕಾಯ್ದಿರಿಸುವರಾ? ಎನ್ನುವ ಪ್ರಶ್ನೆಗೂ ಸಚಿವರು ಸ್ಪಷ್ಟ ಉತ್ತರ ನೀಡಿದ್ದು, “ಆಯೋಗದ ಯಾವ ಶಿಫಾರಸುಗಳನ್ನು ಸರ್ಕಾರ ಅಂಗೀಕರಿಸುತ್ತದೆಯೋ, ಅವುಗಳಿಗೆ ಬೇಕಾದಷ್ಟು ಹಣವನ್ನು ಸೂಕ್ತವಾಗಿ ಮೀಸಲಿಡಲಾಗುವುದು” ಎಂದಿದ್ದಾರೆ. ಅಂದರೆ, ಮುಂದಿನ ಬಜೆಟ್‌ನಲ್ಲಿ 8ನೇ ವೇತನ ಆಯೋಗಕ್ಕೆ ಪ್ರತ್ಯೇಕವಾಗಿ ಹಣ ಕಾಯ್ದಿರಿಸುವ ಸಾಧ್ಯತೆ ಕಡಿಮೆ.

6 /6

ಪ್ರಸ್ತುತ ಕೇಂದ್ರ ಸರ್ಕಾರದಲ್ಲಿ 50.14 ಲಕ್ಷ ನೌಕರರು ಮತ್ತು ಸುಮಾರು 69 ಲಕ್ಷ ಪಿಂಚಣಿದಾರರು ಇದ್ದಾರೆ.ಒಟ್ಟಾರೆ 1.19 ಕೋಟಿ ಜನರು 8ನೇ ವೇತನ ಆಯೋಗದ ಫಲಾನುಭವಿಗಳಾಗಲಿದ್ದಾರೆ.ಡಿಎ ವಿಲೀನ ಮತ್ತು ಫಿಟ್‌ಮೆಂಟ್ ಫ್ಯಾಕ್ಟರ್ ಹೆಚ್ಚಳವಾದರೆ ಸಂಬಳದಲ್ಲಿ ಶೇ.20-30 ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.ಆದರೆ, ಇದೆಲ್ಲವೂ 2027 ರ ನಂತರವೇ ಸಾಧ್ಯವಾಗಲಿದ್ದು, ಕೇಂದ್ರ ನೌಕರರು ಮತ್ತು ಪಿಂಚಣಿದಾರರು ಇನ್ನೂ ಕೆಲವು ತಿಂಗಳು ಕಾಯಬೇಕಿದೆ.