ಹಿರಿಯ ನಾಗರಿಕರಿಗೆ ಗುಡ್‌ ನ್ಯೂಸ್;‌ ಈ 5 ವಿಶೇಷ ಸೌಲಭ್ಯ ಘೋಷಿಸಿದ ಭಾರತೀಯ ರೈಲ್ವೆ ಇಲಾಖೆ!!

Indian Railways Facilities: ರೈಲು ನಿಲ್ದಾಣಗಳಲ್ಲಿ ಹಿರಿಯ ನಾಗರಿಕರು ಎದುರಿಸುವ ಸಮಸ್ಯೆಗಳನ್ನ ಕಡಿಮೆ ಮಾಡಲು ಭಾರತೀಯ ರೈಲ್ವೆ ಇಲಾಖೆ ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ. ರೈಲ್ವೆ ನಿಲ್ದಾಣಗಳಲ್ಲಿ ವಯಸ್ಸಾದವರಿಗೆ ಕೆಲವು ವಿಶೇಷ ಸೌಲಭ್ಯಗಳನ್ನು ಘೋಷಿಸಲಾಗಿದೆ. 
 

Indian Railways Facilities For Senior Citizens: ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ಇಲಾಖೆ ಹಲವಾರು ಯೋಜನೆಗಳನ್ನು ರೂಪಿಸಿದೆ. ಪ್ರಮುಖವಾಗಿ ಹಿರಿಯ ನಾಗರಿಕರಿಗೆ ಕೆಲವು ವಿಶೇಷ ಸೌಲಭ್ಯಗಳನ್ನು ನೀಡುತ್ತಿದೆ. ಇದರಿಂದ ಸೀನಿಯರ್‌ ಸಿಟಿಜನ್ಸ್‌ಗಳ ಪ್ರಯಾಣ ಸುಲಭ ಆಗುತ್ತೆ. ಈ ಹಿಂದೆ ಹಿರಿಯ ನಾಗರಿಕರಿಗೆ ಪ್ರತಿ ಟಿಕೆಟ್ ಮೇಲೆ ಶೇ.40- 50ರಷ್ಟು ರಿಯಾಯಿತಿ ನೀಡಲಾಗುತ್ತಿತ್ತು. ಆದರೆ ಕಳೆದ ಕೆಲ ವರ್ಷಗಳಿಂದ ರೈಲ್ವೆ ಇಲಾಖೆ ಟಿಕೆಟ್ ರಿಯಾಯ್ತಿಯನ್ನ ರದ್ದುಗೊಳಿಸಿತ್ತು. ಆದರೆ ಇನ್ನುಳಿದ ಸೌಲಭ್ಯಗಳನ್ನು ಮುಂದುವರೆಸಿಕೊಂಡು ಬರುತ್ತಿದೆ. ಭಾರತೀಯ ರೈಲ್ವೆ ಇಲಾಖೆಯು ವಯಸ್ಸಾದವರಿಗೆ ಕಳೆಗಿನ ಬರ್ತ್‌ನಲ್ಲಿ ಮಲಗಲು, ವ್ಹೀಲ್‌ ಚೇರ್‌, ಬ್ಯಾಟರಿ ಗಾಡಿ ಮತ್ತು ಸ್ಪೆಷಲ್ ಟಿಕೆಟ್ ಕೌಂಟರ್‌ನಂತಹ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ಆದರೆ ಟಿಕೆಟ್ ರಿಯಾಯಿತಿಯನ್ನ ಸದ್ಯಕ್ಕೆ ನಿಲ್ಲಿಸಲಾಗಿದೆ. ಇದನ್ನು ಮತ್ತೆ ಪ್ರಾರಂಭಿಸುವ ಯಾವುದೇ ಯೋಚನೆ ಇಲ್ಲ. ಪ್ರಯಾಣಿಸುವಾಗ ವಯಸ್ಸಾದವರಿಗೆ ಯಾವುದೇ ತೊಂದರೆ ಆಗದಿರಲಿ ಅಂತಾ ರೈಲ್ವೆ ಇಲಾಖೆ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ಅವುಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

1 /6

60 ವರ್ಷ ದಾಟಿದ ಗಂಡಸರಿಗೆ ಮತ್ತೆ 58 ವರ್ಷ ದಾಟಿದ ಹೆಂಗಸರಿಗೆ ರೈಲಿನಲ್ಲಿ ಹತ್ತಲು ಮತ್ತು ಇಳಿಯಲು ಕಷ್ಟವಾಗದಿರುವಂತೆ ರೈಲ್ವೆ ಇಲಾಖೆಯು ಲೋವರ್‌ ಬರ್ತ್‌ ಫೆಸಿಲಿಟಿ ನೀಡುತ್ತಿದೆ. ಈ ಸೌಲಭ್ಯ ಸ್ಲೀಪರ್‌, AC 3 ಟೈಯರ್ ಮತ್ತೆ AC 2 ಟೈಯರ್ ಬೋಗಿಗಳಲ್ಲಿ ದೊರೆಯುತ್ತದೆ. ರೈಲು ಹೊರಟ ಮೇಲೆ ಕೆಳಗಿನ ಸೀಟುಗಳು ಖಾಲಿ ಇದ್ದರೆ ಅವು ಹಿರಿಯ ನಾಗರಿಕರಿಗೆ ಸಿಗುತ್ತವೆ.

2 /6

ರೈಲು ನಿಲ್ದಾಣಗಳಲ್ಲಿ ಹಿರಿಯ ನಾಗರಿಕರಿಗೆ ಉಚಿತ ವ್ಹೀಲ್‌ ಚೇರ್‌ಗಳು ಸಿಗುತ್ತವೆ. ನಡೆಯಲು ಕಷ್ಟಪಡುವ ವಯಸ್ಸಾದವರಿಗೆ ಈ ಸೌಲಭ್ಯ ಸಹಕಾರಿಯಾಗಲಿದೆ. ವ್ಹೀಲ್‌ ಚೇರ್ ಜೊತೆಗೆ ಸಹಾಯ ಮಾಡಲು ಪೋರ್ಟರ್‌ಗಳು ಸಹ ಇರುತ್ತಾರೆ.

3 /6

ವಯಸ್ಸಾದವರು ಮತ್ತೆ ಅಂಗವಿಕಲ ಪ್ರಯಾಣಿಕರಿಗಾಗಿ ರೈಲು ನಿಲ್ದಾಣಗಳಲ್ಲಿ ಸಪರೇಟ್ ಟಿಕೆಟ್ ಬುಕ್ಕಿಂಗ್ ಕೌಂಟರ್‌ಗಳನ್ನು ಮಾಡಲಾಗಿದೆ. ಇದು ಉದ್ದುದ್ದ ಕ್ಯೂನಲ್ಲಿ ನಿಲ್ಲೋದನ್ನು ತಪ್ಪಿಸುತ್ತದೆ. ಹಿರಿಯ ನಾಗರಿಕರು ಬೇಗನೇ ಟಿಕೆಟ್ ತೆಗೆದುಕೊಳ್ಳಲು ಈ ಸೌಲಭ್ಯ ಸಹಕಾರಿಯಾಗಲಿದೆ.

4 /6

ದೊಡ್ಡ ರೈಲು ನಿಲ್ದಾಣಗಳಲ್ಲಿ ಬ್ಯಾಟರಿ ಗಾಡಿಗಳು ಉಚಿತವಾಗಿ ಸಿಗುತ್ತವೆ. ವಯಸ್ಸಾದವರು ಮತ್ತೆ ಅಂಗವಿಕಲರು ಜಾಸ್ತಿ ದೂರ ನಡೆಯುವ ಅವಶ್ಯಕತೆ ಇಲ್ಲದಿರುವ ರೀತಿ ಪ್ಲಾಟ್‌ಫಾರ್ಮ್‌ಗೆ ಕರೆದುಕೊಂಡು ಹೋಗಲು ಈ ಸೌಲಭ್ಯ ಬಳಕೆಯಾಗಲಿದೆ. 

5 /6

ಮುಂಬೈ, ದೆಹಲಿ, ಕೋಲ್ಕತ್ತಾ ಮತ್ತೆ ಚೆನ್ನೈನಂತಹ ನಗರಗಳ ಲೋಕಲ್ ರೈಲುಗಳಲ್ಲಿ ಹಿರಿಯ ನಾಗರಿಕರಿಗೆ ಸ್ಪೆಷಲ್ ಸೀಟುಗಳನ್ನು ಮೀಸಲಿರುತ್ತವೆ. ಇದು ಪ್ರಯಾಣದ ವೇಳೆ ವಯಸ್ಸಾದವರಿಗೆ ಕಂಫರ್ಟಬಲ್ ಸೀಟು ಸಿಗುವ ಸೌಲಭ್ಯವಾಗಿರುತ್ತದೆ. 

6 /6

ಈ ಮೊದಲು 60 ವರ್ಷ ದಾಟಿದ ಗಂಡಸರಿಗೆ 40% ಮತ್ತೆ 58 ವರ್ಷ ದಾಟಿದ ಹೆಂಗಸರಿಗೆ 50% ರಿಯಾಯಿತಿ ಇತ್ತು. ಆದರೆ ಈ ರಿಯಾಯಿತಿಯನ್ನು 2020ರಲ್ಲಿ ಕೊರೊನಾ ಸಾಂಕ್ರಾಮಿಕದ ವೇಳೆ ನಿಲ್ಲಿಸಲಾಗಿತ್ತು. ಈ ಸೌಲಭ್ಯ ಇಂದಿನವರೆಗೂ ಶುರುವಾಗಿಲ್ಲ. ಹಲವಾರು ಹಿರಿಯ ನಾಗರಿಕರು ಮತ್ತೆ ಜನಸಾಮಾನ್ಯರು ಈ ಯೋಜನೆಯನ್ನ ಮತ್ತೆ ಶುರು ಮಾಡುವಂತೆ ರೈಲ್ವೆ ಇಲಾಖೆಗೆ ಒತ್ತಾಯಿಸುತ್ತಿದ್ದಾರೆ. ಆದರೆ ರಿಯಾಯಿತಿ ಟಿಕೆಟ್ ನೀಡಿದರೆ ದೊಡ್ಡಮಟ್ಟದ ನಷ್ಟವಾಗುತ್ತದೆ ಅಂತಾ ರೈಲ್ವೆ ಇಲಾಖೆ ಹೇಳಿದೆ. ಹೀಗಾಗಿ ಟಿಕೆಟ್‌ ರಿಯಾಯಿತಿ ಮತ್ತೆ ಶುರುವಾಗುವುದು ಬಹುತೇಕ ಡೌಟ್‌ ಎಂದೇ ಹೇಳಬಹುದು.