Google Search: ಒಂಟಿಯಾಗಿರುವಾಗ Googleನಲ್ಲಿ ಯುವತಿಯರು ಅತಿ ಹೆಚ್ಚು ಹುಡುಕಾಟ ನಡೆಸುವುದೇನು? ಇಲ್ಲಿದೆ ಲಿಸ್ಟ್
1. ಕರಿಯರ್ ಗೆ ಸಂಬಂಧಿಸಿದ ಮಾಹಿತಿಯನ್ನು ಯುವತಿಯರು ಅತಿ ಹೆಚ್ಚು ಹುಡುಕಾಡುತ್ತಾರೆ - ವರದಿಯ ಪ್ರಕಾರ, ಹುಡುಗಿಯರು ಬಾಲ್ಯದಿಂದಲೂ ಮಹತ್ವಾಕಾಂಕ್ಷೆಯುಳ್ಳವರಾಗಿರುತ್ತಾರೆ, ಅವರು ತಮ್ಮ ವೃತ್ತಿಜೀವನಕ್ಕೆ ಗರಿಷ್ಠ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಇಂತಹ ಹುಡುಗಿಯರು ಅಂತರ್ಜಾಲದಲ್ಲಿ ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹೆಚ್ಚು ಹುಡುಕುತ್ತಾರೆ. ಇದರಲ್ಲಿ ಯಾವ ವಿಷಯದಲ್ಲಿ ತಮ್ಮ ಕರಿಯರ್ ಮಾಡಬೇಕು ಅಥವಾ ಯಾವ ಕೋರ್ಸ್ ಮಾಡಬೇಕು ಇತ್ಯಾದಿಗಳು ಶಾಮೀಲಾಗಿವೆ.
2. ಆನ್ಲೈನ್ ಶಾಪಿಂಗ್ ಸೈಟ್ ಗಳಲ್ಲಿ ಹೆಚ್ಚು ಸಕ್ರೀಯರಾಗಿರುತ್ತಾರೆ - ಇದಲ್ಲದೇ ಯುವತಿಯರು ಆನ್‌ಲೈನ್ ಶಾಪಿಂಗ್ ಸೈಟ್‌ಗಳಿಗೆ ಹೋಗುತ್ತಾರೆ ಮತ್ತು ಬಟ್ಟೆಗಳ ವಿನ್ಯಾಸಗಳು, ಹೊಸ ಕಲೆಕ್ಷನ್ ಗಳು, ಕೊಡುಗೆಗಳ ಬಗ್ಗೆ ಇಂಟರ್ನೆಟ್‌ನಲ್ಲಿ ಹೆಚ್ಚು ಹುಡುಕಾಟಗಳನ್ನು ಮಾಡುತ್ತಾರೆ. ಈ ವಿಷಯ ಈಗಾಗಲೇ ಅನೇಕ ಸಂಶೋಧನೆಗಳಲ್ಲಿ ಕಂಡು ಬಂದಿದೆ.
3. ಬ್ಯೂಟಿ ಟಿಪ್ಸ್ ಗಳಿಗಾಗಿ ಇಂಟರ್ನೆಟ್ ನಲ್ಲಿ ಹುಡುಕಾಟ ನಡೆಸುತ್ತಾರೆ ಯುವತಿಯರು - ಸಾಮಾನ್ಯವಾಗಿ ಯುವತಿಯರು ಸುಂದರವಾಗಿ ಮತ್ತು ವಿಭಿನ್ನವಾಗಿ ಕಾಣಲು ಇಷ್ಟಪಡುತ್ತಾರೆ. ಇದಕ್ಕಾಗಿ ಅವರು ಇಂಟರ್‌ನೆಟ್‌ನ ಸಹಾಯವನ್ನು ತೆಗೆದುಕೊಳ್ಳುತ್ತಾರೆ.ಹೆಣ್ಣುಮಕ್ಕಳು ಫ್ಯಾಷನ್, ಟ್ರೆಂಡ್‌ಗಳು, ಸೌಂದರ್ಯ ಚಿಕಿತ್ಸೆಗಳು ಮತ್ತು ಮನೆಮದ್ದುಗಳ ಬಗ್ಗೆ ಹುಡುಕಲು ಹೆಚ್ಚು ಇಷ್ಟಪಡುತ್ತಾರೆ.
4. ಗೊರಂಟೆ ಡಿಸೈನ್ ಗಳ ಬಗ್ಗೆಯೂ ಕೂಡ ಯುವತಿಯರು ಹೆಚ್ಚಾಗಿ ಹುಡುಕಾಟ ನಡೆಸುತ್ತಾರೆ - ಯುವತಿಯರು ಗೋರಂಟಿ ಹಚ್ಚಲು ಹೆಚ್ಚು ಇಷ್ಟಪಡುತ್ತಾರೆ. ಈ ಸಂಶೋಧನೆಯಲ್ಲೂ ಇದು ಬೆಳಕಿಗೆ ಬಂದಿದೆ. ಹುಡುಗಿಯರು ಹೆಚ್ಚಾಗಿ ಗೂಗಲ್‌ನಲ್ಲಿ ಇತ್ತೀಚಿನ ಗೋರಂಟಿ ವಿನ್ಯಾಸಗಳನ್ನು ಹುಡುಕುತ್ತಾರೆ.
5. ರೊಮ್ಯಾಂಟಿಕ್ ಸಂಗೀತದಲ್ಲಿಯೂ ಕೂಡ ಯುವತಿಯರು ಆಸಕ್ತಿ ತೋರಿದ್ದಾರೆ - ಸಾಮಾನ್ಯವಾಗಿ ಎಲ್ಲರೂ ಸಂಗೀತ ಕೇಳಲು ಇಷ್ಟಪಡುತ್ತಾರೆ. ಆದರೆ ಹುಡುಗಿಯರು ಹೆಚ್ಚು ಹುಡುಕುವ ವಿಷಯಗಳಲ್ಲಿ ಸಂಗೀತವೂ ಒಂದು. ಹುಡುಗಿಯರು ಅಂತರ್ಜಾಲದಲ್ಲಿ ಸಾಕಷ್ಟು ರೋಮ್ಯಾಂಟಿಕ್ ಹಾಡುಗಳನ್ನು ಹುಡುಕುತ್ತಾರೆ ಮತ್ತು ಕೇಳುತ್ತಾರೆ. ಇದರೊಂದಿಗೆ ಹುಡುಗಿಯರು ಇಂಟರ್‌ನೆಟ್‌ನಲ್ಲಿ ರೊಮ್ಯಾಂಟಿಕ್ ಕಾವ್ಯ-ಕವನಗಳನ್ನು ಕೂಡ ಹುಡುಕುತ್ತಾರೆ.