ಚಿನ್ನದ ದರ ಇಳಿಕೆಗೆ ಸರ್ಕಾರದ ಮಹತ್ವದ ನಿರ್ಧಾರ : ಇನ್ನು ಎಲ್ಲರ ಕೈಗೆಟಕುವುದು ಬಂಗಾರ ! ಹಬ್ಬದ ಹೊತ್ತಿನಲ್ಲಿಯೇ ಹೊರ ಬಿತ್ತು ಕೇಂದ್ರದ ದಿಟ್ಟ ನಡೆ

Written ByRanjitha R K
Published: Oct 14, 2025, 07:31 PM IST|Updated: Oct 14, 2025, 07:31 PM IST

ಚಿನ್ನದ ಬೆಲೆ ಎಷ್ಟೇ ಆಗಿದ್ದರೂ ಕಡು ಬಡವರು ಕೂಡಾ ಚಿನ್ನ ಖರೀದಿಸುವುದು ಸಾಧ್ಯವಾಗಬೇಕು ಎನ್ನುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಸರ್ಕಾರದ ಈ ಕ್ರಮದಿಂದಾಗಿ ಇದೀಗ ಕಡಿಮೆ ಬೆಲೆಯಲ್ಲಿ ಚಿನ್ನ ಖರೀದಿ ಮಾಡುವುದು ಸಾಧ್ಯವಾಗಲಿದೆ. 

govt decession on gold rate 1/7

ಕೈಗೆಟಕುವುದು ಬಂಗಾರ

ಅಕ್ಟೋಬರ್ 14 ರಂದು ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,30,900 ರೂ. ತಲುಪಿದೆ.  ಬಂಗಾರದ ಬೆಲೆ ಈ ರೀತಿ ವೇಗ ಪಡೆದುಕೊಳ್ಳುತ್ತಿರುವುದು  ಜನ ಸಾಮಾನ್ಯರು ನಿದ್ದೆಗೆಡುವಂತೆ ಮಾಡಿದೆ. 

govt decession on gold rate 2/7

ಕೈಗೆಟಕುವುದು ಬಂಗಾರ

ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ 2 ಲಕ್ಷ ರೂ.ಗಳನ್ನು ದಾಟಬಹುದು ಎಂಬ ಸುದ್ದಿ ಕೂಡಾ ಕೇಳಿ ಬರುತ್ತಿದೆ. ಇದೇ ವೇಳೆ, ದೀಪಾವಳಿ ವೇಳೆಗೆ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಾಗುತ್ತಾ ಅಥವಾ ಕಡಿಮೆಯಾಗುತ್ತಾ ಎನ್ನುವ ಕಾತರ ಕೂಡಾ ಅನೇಕರದ್ದು.

govt decession on gold rate 3/7

ಕೈಗೆಟಕುವುದು ಬಂಗಾರ

ದೀಪಾವಳಿ ವೇಳೆಗೆ ಚಿನ್ನದ ಬೆಲೆ ಇನ್ನೂ ಶೇ.20 ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಬುಲಿಯನ್ ಮಾರುಕಟ್ಟೆ ತಜ್ಞರು ಸೂಚಿಸುತ್ತಿದ್ದಾರೆ. ಮತ್ತೊಂದೆಡೆ ಚಿನ್ನದ ಬೆಲೆ ಸುಮಾರು ಶೇ.10 ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಕೂಡಾ ಹೇಳಲಾಗುತ್ತಿದೆ. 

govt decession on gold rate 4/7

ಕೈಗೆಟಕುವುದು ಬಂಗಾರ

ಆದರೆ ಚಿನ್ನದ ಬೆಲೆ ಎಷ್ಟೇ ಆಗಿದ್ದರೂ ಕಡು ಬಡವರು ಕೂಡಾ ಚಿನ್ನ ಖರೀದಿಸುವುದು ಸಾಧ್ಯವಾಗಬೇಕು ಎನ್ನುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಸರ್ಕಾರದ ಈ ಕ್ರಮದಿಂದಾಗಿ ಇದೀಗ ಕಡಿಮೆ ಬೆಲೆಯಲ್ಲಿ ಚಿನ್ನ ಖರೀದಿ ಮಾಡುವುದು ಸಾಧ್ಯವಾಗಲಿದೆ.   

govt decession on gold rate 5/7

ಕೈಗೆಟಕುವುದು ಬಂಗಾರ

ಸರ್ವರಿಗೂ ಚಿನ್ನ ಖರೀದಿ ಸಾಧ್ಯವಾಗಿಸುವ ಸಲುವಾಗಿ  ಕೇಂದ್ರ ಸರ್ಕಾರ 9 ಕ್ಯಾರೆಟ್ ಚಿನ್ನವನ್ನು ಹಾಲ್‌ಮಾರ್ಕ್ ಮಾನದಂಡಗಳಲ್ಲಿ ಸೇರಿಸಿದೆ. ಇದೀಗ  14K 18K, 20K, 22K, 23K, 24Kಗಳಂತೆಯೇ ಹಾಲ್‌ಮಾರ್ಕ್ ಶುದ್ಧತೆಗಳಿಗೆ 9Kಯನ್ನು ಅಧಿಕೃತವಾಗಿ ಸೇರಿಸಲಾಗಿದೆ. 

govt decession on gold rate 6/7

ಕೈಗೆಟಕುವುದು ಬಂಗಾರ

24 ಕ್ಯಾರೆಟ್ ಚಿನ್ನ ಪರಿಶುದ್ದ ಅಂದರೆ ಅದು 99.9% ಶುದ್ಧ ಚಿನ್ನವಾಗಿದ್ದರೆ,   9 ಕ್ಯಾರೆಟ್ ಚಿನ್ನವು  37.5% ಶುದ್ಧ ಚಿನ್ನವಾಗಿದೆ. 9 ಕ್ಯಾರೆಟ್ ಚಿನ್ನದ ಬೆಲೆ ಅತ್ಯಂತ ಕಡಿಮೆ.  ಹೂಡಿಕೆ ಮಾಡುವುದಕ್ಕೂ 9K ಚಿನ್ನ ಉತ್ತಮ ಆಯ್ಕೆ.

govt decession on gold rate 7/7

ಕೈಗೆಟಕುವುದು ಬಂಗಾರ

ಪ್ರಸ್ತುತ, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ಸುಮಾರು 12,835 ರೂ ಆಗಿದ್ದರೆ, 9 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 4,400 ರೂ. ಆಗಿದೆ.  ಅಂದರೆ 50 ಸಾವಿರದ ಒಳಗೆ 10 ಗ್ರಾಂ ಬಂಗಾರ ಬರುತ್ತದೆ.