ಕೊನೆಗೂ ಹೊರಬಿತ್ತು 18 ತಿಂಗಳ ಡಿಎ ಅರಿಯರ್ಸ್ ಆದೇಶ : ಪ್ರಕಟವಾಯಿತು ಬಹು ನಿರೀಕ್ಷೆಯ ಘೋಷಣೆ

Written ByRanjitha R K
Published: Aug 19, 2025, 07:47 PM IST|Updated: Aug 19, 2025, 07:47 PM IST

ಕೊರೊನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ  18 ತಿಂಗಳ ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರವನ್ನು ಸರ್ಕಾರ ಬಿಡುಗಡೆ ಮಾಡಿರಲಿಲ್ಲ.ಇದೀಗ ಕೊನೆಗೂ ಈ ಬಾಕಿ ಡಿಎ, ಡಿಆರ್ ಬಿಡುಗಡೆ ಬಗ್ಗೆ ಕೇಂದ್ರ ಸರ್ಕಾರ ತನ್ನ ಹೇಳಿಕೆ ನೀಡಿದೆ.
 

update on 18 month arrears 1/6

18 ತಿಂಗಳ ಬಾಕಿ ಡಿಎ ಬಗ್ಗೆ ಘೋಷಣೆ

ಕೊರೊನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ 18 ತಿಂಗಳವರೆಗೆ ಈ ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರವನ್ನು ತಡೆಹಿಡಿಯಲಾಗಿತ್ತು.ಇದೀಗ ಬಾಕಿ ಡಿಎ ಬಗ್ಗೆ ಸರ್ಕಾರ ಮಹತ್ವದ ಮಾಹಿತಿ ನೀಡಿದೆ.

update on 18 month arrears 2/6

18 ತಿಂಗಳ ಬಾಕಿ ಡಿಎ ಬಗ್ಗೆ ಘೋಷಣೆ

ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ಪಡೆಯುವ ತುಟ್ಟಿ ಭತ್ಯೆಯನ್ನು ಪ್ರತಿ 6 ತಿಂಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ. ಇದರೊಂದಿಗೆ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿದಾರರ ಪಿಂಚಣಿ ಎರಡರಲ್ಲೂ ಏರಿಕೆಯಾಗುತ್ತದೆ.      

update on 18 month arrears 3/6

18 ತಿಂಗಳ ಬಾಕಿ ಡಿಎ ಬಗ್ಗೆ ಘೋಷಣೆ

ಆದರೆ, ಕೊರೊನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ  18 ತಿಂಗಳ ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರವನ್ನು ಸರ್ಕಾರ ಬಿಡುಗಡೆ ಮಾಡಿರಲಿಲ್ಲ.  ಆದರೆ ಈ  ಬಾಕಿ ಡಿಎ, ಡಿಆರ್ ಅನ್ನು ಬಿಡುಗಡೆ ಮಾಡಲೇಬೇಕು ಎಂದು   ಕೇಂದ್ರ ಸರ್ಕಾರಿ ನೌಕರರು ಕೇಂದ್ರ ಸರ್ಕಾರವನ್ನು ಅಂದಿನಿಂದಲೂ ಒತ್ತಾಯಿಸುತ್ತಲೇ ಬಂದಿದ್ದಾರೆ.   

update on 18 month arrears 4/6

18 ತಿಂಗಳ ಬಾಕಿ ಡಿಎ ಬಗ್ಗೆ ಘೋಷಣೆ

ಇದೀಗ ಕೊನೆಗೂ ಈ ಬಾಕಿ ಡಿಎ, ಡಿಆರ್ ಬಿಡುಗಡೆ ಬಗ್ಗೆ ಕೇಂದ್ರ ಸರ್ಕಾರ ತನ್ನ ಹೇಳಿಕೆ ನೀಡಿದೆ.  ಲೋಕಸಭೆಯಲ್ಲಿಯೇ ಈ ಬಗ್ಗೆ ಎತ್ತಿದ ಪ್ರಶ್ನೆಗೆ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಉತ್ತರ ನೀಡಿದ್ದಾರೆ.   

update on 18 month arrears 5/6

18 ತಿಂಗಳ ಬಾಕಿ ಡಿಎ ಬಗ್ಗೆ ಘೋಷಣೆ

ಸಾಂಕ್ರಾಮಿಕ ರೋಗದ ಪ್ರತಿಕೂಲ ಆರ್ಥಿಕ ಪರಿಣಾಮ ಮತ್ತು ಸರ್ಕಾರ ತೆಗೆದುಕೊಂಡ ಕಲ್ಯಾಣ ಕ್ರಮಗಳಿಗಾಗಿ ಈ ಹಣವನ್ನು ಬಳಸಲಾಗಿತ್ತು. ಈ ಕಾರ್ಯಗಳಿಗೆ ಒದಗಿಸಲಾದ ನಿಧಿಗಳು 2020-21ರ ಆರ್ಥಿಕ ವರ್ಷವನ್ನು ಮೀರಿ ಹಣಕಾಸಿನ ಸೋರಿಕೆಗೆ ಕಾರಣವಾಗಿವೆ. ಆದ್ದರಿಂದ, ಬಾಕಿ  ಡಿಎ/ಡಿಆರ್  ಬಿಡುಗಡೆ  ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.    

update on 18 month arrears 6/6

18 ತಿಂಗಳ ಬಾಕಿ ಡಿಎ ಬಗ್ಗೆ ಘೋಷಣೆ

ಏರುತ್ತಿರುವ ಬೆಲೆ ಏರಿಕೆ ಮತ್ತು ಹಣದುಬ್ಬರವನ್ನು ನಿಯಂತ್ರಿಸಲು, ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಮತ್ತು ತುಟ್ಟಿ ಪರಿಹಾರ ನೀಡಲಾಗುತ್ತದೆ. ಇವುಗಳನ್ನು ಪ್ರತಿ ಆರು ತಿಂಗಳಿಗೊಮ್ಮೆ, ಜನವರಿ ಮತ್ತು ಜುಲೈ ತಿಂಗಳುಗಳಲ್ಲಿ ಪರಿಷ್ಕರಿಸಲಾಗುತ್ತದೆ.