ಈ ತಿಂಗಳಲ್ಲಿ ಖಾತೆ ಸೇರುವುದು ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಬಾಕಿ ಡಿಎ !ತುಂಬುವುದು ಸರ್ಕಾರಿ ನೌಕರರ ಜೇಬು

ಮಾರ್ಚ್ ತಿಂಗಳು ಕೇಂದ್ರ ಸರ್ಕಾರಿ ನೌಕರರಿಗೆ ಸಂತೋಷದ ತಿಂಗಳಾಗಲಿದೆ. ಈ ತಿಂಗಳು, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಕೇಂದ್ರ ಸರ್ಕಾರದಿಂದ ಕೆಲವು ಉಡುಗೊರೆಗಳನ್ನು ಸ್ವೀಕರಿಸುತ್ತಾರೆ. 

DA Hike And Arrears For govt employees : ಜನವರಿ 2025 ರ ಡಿಎ ಹೆಚ್ಚಳವು ಶೇ. 3 ರಷ್ಟು ಇರಲಿದೆ ಎಂದು ಮೂಲಗಳು ತಿಳಿಸಿವೆ. ಇದು ಉದ್ಯೋಗಿಗಳಿಗೆ ಉತ್ತಮ ಉಡುಗೊರೆಯಾಗಲಿದೆ. ಸರ್ಕಾರ ಮಾರ್ಚ್ 10 ರೊಳಗೆ ತುಟ್ಟಿ ಭತ್ಯೆ ಹೆಚ್ಚಳಕ್ಕೆ ಅನುಮೋದನೆ ನೀಡುವ ಸಾಧ್ಯತೆಯಿದೆ. ಸರ್ಕಾರ ಇನ್ನೂ ಅಧಿಕೃತವಾಗಿ ಡಿಎ ಹೆಚ್ಚಳದ ದಿನಾಂಕವನ್ನು ಘೋಷಿಸದಿದ್ದರೂ, ಹೋಳಿಗೆ ಮೊದಲು ಸರ್ಕಾರ ತುಟ್ಟಿ ಭತ್ಯೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ಮಾರ್ಚ್ ತಿಂಗಳು ಕೇಂದ್ರ ಸರ್ಕಾರಿ ನೌಕರರಿಗೆ ಸಂತೋಷದ ತಿಂಗಳಾಗಲಿದೆ. ಈ ತಿಂಗಳು, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಕೇಂದ್ರ ಸರ್ಕಾರದಿಂದ ಕೆಲವು ಉಡುಗೊರೆಗಳನ್ನು ಸ್ವೀಕರಿಸುತ್ತಾರೆ. 

2 /7

ಜನವರಿ 2025 ರ ತುಟ್ಟಿ ಭತ್ಯೆ ಹೆಚ್ಚಳವು 3% ಆಗಿರುತ್ತದೆ ಎಂದು ಮೂಲಗಳು ತಿಳಿಸಿವೆ. ಸರ್ಕಾರ ಮಾರ್ಚ್ 10 ರೊಳಗೆ ತುಟ್ಟಿ ಭತ್ಯೆ ಹೆಚ್ಚಳಕ್ಕೆ ಅನುಮೋದನೆ ನೀಡುವ ಸಾಧ್ಯತೆಯಿದೆ.   

3 /7

ಸರ್ಕಾರ ಇನ್ನೂ ಅಧಿಕೃತವಾಗಿ ಡಿಎ ಹೆಚ್ಚಳದ ದಿನಾಂಕವನ್ನು ಘೋಷಿಸದಿದ್ದರೂ, ಹೋಳಿಗೆ ಮೊದಲು ಸರ್ಕಾರ ತುಟ್ಟಿ ಭತ್ಯೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಮಾಧ್ಯಮ ವರದಿಗಳು ಸೂಚಿಸುತ್ತವೆ.  

4 /7

ಪ್ರಸ್ತುತ, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 53% ತುಟ್ಟಿ ಭತ್ಯೆ ಮತ್ತು ತುಟ್ಟಿ ಪರಿಹಾರವನ್ನು ಪಡೆಯುತ್ತಿದ್ದಾರೆ. ಡಿಎ ಶೇ.3 ರಷ್ಟು ಹೆಚ್ಚಿಸಿದರೆ, ಒಟ್ಟು ಡಿಎ ಮತ್ತು ಟಿಆರ್ ಶೇ.56 ಕ್ಕೆ ಹೆಚ್ಚಾಗುತ್ತದೆ.  

5 /7

ತುಟ್ಟಿ ಭತ್ಯೆಯ ಹೆಚ್ಚಳವು ಜನವರಿ 2025 ರಿಂದ ಜಾರಿಗೆ ಬರಲಿದೆ. ಆದ್ದರಿಂದ, ಜನವರಿಯಿಂದ ಬರಬೇಕಾದ ಡಿಎ ಬಾಕಿ ಮೊತ್ತವು ಕೂಡಾ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಖಾತೆ ಸೇರಲಿದೆ.

6 /7

ಡಿಎ ಶೇ.3 ರಷ್ಟು ಹೆಚ್ಚಾದರೆ, 18,000 ಮೂಲ ವೇತನ ಪಡೆಯುವ ಉದ್ಯೋಗಿಗಳು ತಿಂಗಳಿಗೆ 540 ರೂ ಡಿಎ ಹೆಚ್ಚಳ ಪಡೆಯುತ್ತಾರೆ. 40,000 ರೂ. ವೇತನ ಪಡೆಯುವ ಉದ್ಯೋಗಿಗಳಿಗೆ ತಿಂಗಳಿಗೆ ಸುಮಾರು 1,200 ರೂ. ವೇತನ ಹೆಚ್ಚಳವಾಗಲಿದೆ. ಒಂದು ವರ್ಷದಲ್ಲಿ 14,400 ರೂ.ಗಳ ಹೆಚ್ಚಳವಾಗಲಿದೆ.  

7 /7

ತುಟ್ಟಿ ಭತ್ಯೆ ಮತ್ತು ತುಟ್ಟಿ ಪರಿಹಾರವನ್ನು ಕೈಗಾರಿಕಾ ಕಾರ್ಮಿಕರ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (AICPI-IW) ಆಧರಿಸಿ ನಿರ್ಧರಿಸಲಾಗುತ್ತದೆ, ಇದು ಅಗತ್ಯ ಸರಕು ಮತ್ತು ಸೇವೆಗಳ ಬೆಲೆ ಬದಲಾವಣೆಗಳ ಅಳತೆಯಾಗಿದೆ.