White Hair Solution: ಚಿಕ್ಕ ವಯಸ್ಸಿನಲ್ಲಿ ಕೂದಲು ಬಿಳಿಯಾಗುವುದು ಒಂದು ಸಮಸ್ಯೆಯೇ.. ಇದರಿಂದ ಅನೇಕ ಬಾರಿ ಮುಜುಗರಕ್ಕೊಳಗಾಗಬೇಕಾಗುತ್ತದೆ.. ಆದರೆ ಈ ಸಮಸ್ಯೆಗೆ ಪರಿಹಾರ ಇಲ್ಲವೆಂದಿಲ್ಲ.. ನೈಸರ್ಗಿಕವಾಗಿ ಈ ಬಿಳಿ ಕೂದಲಿಗೆ ಮುಕ್ತಿ ನೀಡಬಹುದಾಗಿದೆ..
ಇಂದಿನ ದಿನಮಾನಗಳಲ್ಲಿ ಅನೇಕ ಜನರಿಗೆ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲಿನ ಸಮಸ್ಯೆ ಕಾಡುತ್ತಿದೆ.. ಇದಕ್ಕಾಗಿ ಹಲವಾರು ಮದ್ದುಗಳನ್ನು ಟ್ರೈ ಮಾಡಿ ಯಾವುದೇ ಫಲಿತಾಂಶ ಸಿಗದೇ ಬೇಸೋತ್ತವರು ಇದ್ದಾರೆ.. ಅಂತವರಿಗೆಂದೇ ಇಲ್ಲಿದೆ ದಿ ಬೆಸ್ಟ್ ವೈಟ್ ಹೇರ್ ಮನೆಮದ್ದು..

ಒಂದು ಎಲೆಯು ಹಲವಾರು ಔಷಧೀಯ ಗುಣಗಳನ್ನು ಹೊಂದಿರುವುದಲ್ಲದೇ.. ಅನೇಕ ಪೋಷಕಾಂಶಗಳನ್ನು ಹೊಂದಿದೆ... ಪೇರಲ ಎಲೆಗಳು ವಿಟಮಿನ್ ಸಿ, ನೀರು, ಫೈಬರ್‌ನಂತಹ ಅನೇಕ ಖನಿಜಗಳಿಂದ ತುಂಬಿವೆ.
ಬಿಳಿ ಕೂದಲಿಗೆ ಪರಿಹಾರ ನೀಡುವುದಕ್ಕಾಗಿ ಪೇರಲ ಎಲೆ 5, ಕರಿಬೇವಿನ ಎಲೆಗಳು 20, ನೆಲ್ಲಿ 1, ತೆಂಗಿನ ಎಣ್ಣೆ 200 ಮಿಲಿ, ತೆಗೆದುಕೊಳ್ಳಿ.. ಮೊದಲು ಬಾಣಲೆಯಲ್ಲಿ ಕೊಬ್ಬರಿ ಎಣ್ಣೆಯನ್ನು ಹಾಕಿ ಅದಕ್ಕೆ ಸಿದ್ಧ ಮಾಡಿಕೊಂಡ ಪದಾರ್ಥಗಳನ್ನು ಬೆರೆಸಿ ಮಧ್ಯಮ ಉರಿಯಲ್ಲಿ ಹುರಿಯಿರಿ. ನಂತರ ಆ ಎಣ್ಣೆಯನ್ನು ತಣ್ಣಗಾಗಲು ಬಿಟ್ಟು ಬಾಟಲಿಯಲ್ಲಿ ಹಾಕಿಟ್ಟುಕೊಳ್ಳಿ..
ಈ ಮದ್ದು ನಿಮ್ಮ ಕೂದಲಿನ ಹೊಟ್ಟು, ಸೀಳು, ಉದುರುವಿಕೆಯಂಯಹ ಸಮಸ್ಯೆಗಳಿಂದ ಒಂದೇ ತಿಂಗಳಲ್ಲಿ ಮುಕ್ತಿ ನೀಡುತ್ತದೆ.. (ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.)