ಕನ್ನಡದ ಸ್ಟಾರ್‌ ನಟಿಯ ದಾಂಪತ್ಯದಲ್ಲಿ ಬಿರುಕು... ಮದುವೆಯಾದ ಎರಡೇ ವರ್ಷಕ್ಕೆ ವಿಚ್ಛೇದನ.!?

Published: Jul 19, 2025, 04:53 PM IST|Updated: Jul 19, 2025, 04:53 PM IST

hansika motwani divorce rumors : ನಟಿ ಹನ್ಸಿಕಾ ಮೋಟ್ವಾನಿ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಸ್ನೇಹಿತೆಯ ಗಂಡನನ್ನೇ ಪ್ರೀತಿಸಿ ಮದುವೆ ಆಗಿದ್ದ ಈ ನಟಿ ಈಗ ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿ ಹಬ್ಬಿದೆ. 

hansika motwani divorce1/8

ಹನ್ಸಿಕಾ ಮೋಟ್ವಾನಿ

hansika motwani divorce rumors : ನಟಿ ಹನ್ಸಿಕಾ ಮೋಟ್ವಾನಿ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಸ್ನೇಹಿತೆಯ ಗಂಡನನ್ನೇ ಪ್ರೀತಿಸಿ ಮದುವೆ ಆಗಿದ್ದ ಈ ನಟಿ ಈಗ ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿ ಹಬ್ಬಿದೆ. 

hansika motwani divorce2/8

ಹನ್ಸಿಕಾ ಮೋಟ್ವಾನಿ

ನಟಿ ಹನ್ಸಿಕಾ ಮೋಟ್ವಾನಿ ಪತಿ ಸೊಹೇಲ್ ಖತುರಿಯಾ ಬಗ್ಗೆ ಒಂದು ಶಾಕಿಂಗ್‌ ನ್ಯೂಸ್‌ ವೈರಲ್‌ ಆಗಿದೆ. ಇವರಿಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಡಿವೋರ್ಸ್‌ಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

hansika motwani divorce3/8

ಹನ್ಸಿಕಾ ಮೋಟ್ವಾನಿ

ಹಿಂದೂಸ್ತಾನ್ ಟೈಮ್ಸ್ ಪ್ರಕಟಿಸಿದ ವರದಿಯ ಪ್ರಕಾರ, ನಟಿ ಹನ್ಸಿಕಾ ಮೋಟ್ವಾನಿ ಮತ್ತು ಅವರ ಪತಿ ಸೊಹೇಲ್ ಖತುರಿಯಾ ಮಧ್ಯೆ ಭಿನ್ನಾಭಿಪ್ರಾಯ ಎದುರಾಗಿದೆ. ಡಿಸೆಂಬರ್ 2022 ರಲ್ಲಿ ವಿವಾಹವಾದ ಹನ್ಸಿಕಾ ಮೋಟ್ವಾನಿ ದಂಪತಿಗಳು ಪ್ರಸ್ತುತ ಒಂದೇ ಸೂರಿನಡಿ ವಾಸಿಸುತ್ತಿಲ್ಲ ಎಂದು ವರದಿಗಳು  ಹೇಳುತ್ತಿವೆ.

hansika motwani divorce4/8

ಹನ್ಸಿಕಾ ಮೋಟ್ವಾನಿ

ಹನ್ಸಿಕಾ ಮೋಟ್ವಾನಿ ಸದ್ಯ ತನ್ನ ಪತಿ ಸೊಹೇಲ್‌ ಜೊತೆ ವಾಸಿಸುತ್ತಿಲ್ಲ. ಹನ್ಸಿಕಾ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದಾರೆ. ಸೊಹೇಲ್ ತನ್ನ ಹೆತ್ತವರೊಂದಿಗೆ ಇದ್ದಾರೆ. ಅವರು ಮದುವೆಯಾದ ಕೆಲವೇ ತಿಂಗಳುಗಳಲ್ಲೇ ದಾಂಪತ್ಯದಲ್ಲಿ ಸಮಸ್ಯೆಗಳು ಹುಟ್ಟಿಕೊಂಡಿವೆ ಎಂದು ಹೇಳಲಾಗುತ್ತಿದೆ.

hansika motwani divorce5/8

ಹನ್ಸಿಕಾ ಮೋಟ್ವಾನಿ

ಹನ್ಸಿಕಾ ಮತ್ತು ಸೊಹೇಲ್ ಆರಂಭದಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸಲು ನಿರ್ಧರಿಸಿದರು. ಕುಟುಂಬದ ವಾತಾವರಣಕ್ಕೆ ಸುಲಭವಾಗಿ ಹೊಂದಿಕೊಳ್ಳಲು ಸಾಧ್ಯವಾಗದ ಕಾರಣ ಅವರು ಸವಾಲುಗಳನ್ನು ಎದುರಿಸಿದರು ಎಂದು ವರದಿಯಾಗಿದೆ. 

hansika motwani divorce6/8

ಹನ್ಸಿಕಾ ಮೋಟ್ವಾನಿ

ಹೆಚ್ಚು ಸ್ವತಂತ್ರ ಜೀವನವನ್ನು ನಡೆಸುವ ಸಲುವಾಗಿ ಸೊಹೇಲ್ ಅವರ ಪೋಷಕರು ವಾಸಿಸುವ ಅದೇ ಕಟ್ಟಡದಲ್ಲಿ ಹನ್ಸಿಕಾ ಜೊತೆ ಪ್ರತ್ಯೇಕ ಅಪಾರ್ಟ್ಮೆಂಟ್ ಗೆ ತೆರಳಿದರು. ಆದರೆ ಸಂಬಂಧದ ಸಮಸ್ಯೆಗಳು ಮುಂದುವರೆದಿವೆ ಎಂದು ವರದಿಗಳು ತಿಳಿಸಿವೆ.

hansika motwani divorce7/8

ಹನ್ಸಿಕಾ ಮೋಟ್ವಾನಿ

ವದಂತಿಗಳ ಬಗ್ಗೆ ಸೊಹೇಲ್ ಖತುರಿಯಾ ಹಿಂದೂಸ್ತಾನ್ ಟೈಮ್ಸ್‌ಗೆ ಮಾಹಿತಿ ನೀಡಿದ್ದು "ಡಿವೋರ್ಸ್‌ ವದಂತಿ ನಿಜವಲ್ಲ" ಎಂದು ಹೇಳಿದ್ದಾರೆ. ಸೊಹೇಲ್ ಖತುರಿಯಾ ಈ ಹಿಂದೆ ರಿಂಕಿ ಎಂಬುವವರ ಜೊತೆ ಮದುವೆಯಾಗಿದ್ದರು. ರಿಂಕಿ ಹನ್ಸಿಕಾ ಅವರ ಆಪ್ತ ಸ್ನೇಹಿತೆ.

hansika motwani divorce8/8

ಹನ್ಸಿಕಾ ಮೋಟ್ವಾನಿ

ಹನ್ಸಿಕಾ ಮೋಟ್ವಾನಿ ತನ್ನ ಗೆಳತಿ ರಿಂಕಿ ಪತಿ ಸೊಹೇಲ್ ಖತುರಿಯಾ ಅವರನ್ನೇ ಪ್ರೀತಿಸಿ ಮದುವೆಯಾದರು. ಡಿಸೆಂಬರ್ 2022 ರಲ್ಲಿ ಜೈಪುರದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಹನ್ಸಿಕಾ ಮೋಟ್ವಾನಿ ವಿವಾಹವಾದರು.