Vijayadashami Wishes in Kannada: ವಿಜಯದಶಮಿ ನಾಡಿನೆಲ್ಲೆಡೆ ಜನರು ಅದ್ಭುತವಾಗಿ ಆಚರಿಸುವ ಹಬ್ಬಗಳಲ್ಲಿ ಒಂದಾಗಿದೆ. ಈ ವಿಜಯದಶಮಿ ಹಬ್ಬವನ್ನು ದಸರಾ ಹಬ್ಬ ಎಂದೂ ಕರೆಯುತ್ತಾರೆ. ದುಷ್ಟತನದ ಮೇಲೆ ಒಳ್ಳೆತನ ವಿಜಯ ಸಾಧಿಸುವ ಸಂಕೇತವೇ ಈ ವಿಜಯದಶಮಿ
1/6ವಿಜಯದಶಮಿ ನಾಡಿನೆಲ್ಲೆಡೆ ಜನರು ಅದ್ಭುತವಾಗಿ ಆಚರಿಸುವ ಹಬ್ಬಗಳಲ್ಲಿ ಒಂದಾಗಿದೆ. ಈ ವಿಜಯದಶಮಿ ಹಬ್ಬವನ್ನು ದಸರಾ ಹಬ್ಬ ಎಂದೂ ಕರೆಯುತ್ತಾರೆ. ದುಷ್ಟತನದ ಮೇಲೆ ಒಳ್ಳೆತನ ವಿಜಯ ಸಾಧಿಸುವ ಸಂಕೇತವೇ ಈ ವಿಜಯದಶಮಿ. ನವರಾತ್ರಿ ಹಬ್ಬದ ಹತ್ತು ದಿನಗಳ ನಂತರ ಅಶ್ವಯುಜ ಶುಕ್ಲ ಪಕ್ಷದ ದಶಮಿ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಅಂತಹ ವಿಶೇಷ ಹಬ್ಬದ ದಿನದಂದು, ಎಲ್ಲರೂ ಚೆನ್ನಾಗಿರಲಿ ಎಂದು ಹಾರೈಸುತ್ತಾ, ನಿಮ್ಮ ಹಿತೈಷಿಗಳಿಗೆ ಈ ರೀತಿಯಾಗಿ ಶುಭಾಶಯಗಳನ್ನು ಕಳುಹಿಸಿ
2/6ಅಜ್ಞಾನದ ಮೇಲೆ ಸುಜ್ಞಾನದ ಬೆಳಕು ಚೆಲ್ಲುವ ಸಂಕೇತ ವಿಜಯದಶಮಿ... ಈ ಹಬ್ಬದ ಎಲ್ಲರಿಗೂ ಒಳಿತನ್ನು ಮಾಡಲಿ. ವಿಜಯದಶಮಿಯ ಶುಭಾಶಯಗಳು.
3/6ದುರ್ಗಾದೇವಿಯ ಆಶೀರ್ವಾದದಿಂದ ನಿಮ್ಮೆಲ್ಲರ ಜೀವನವು ಯಶಸ್ವಿಯಾಗಲಿ. ನಿಮ್ಮ ಕುಟುಂಬದ ಎಲ್ಲ ಸದಸ್ಯರಿಗೂ ವಿಜಯದಶಮಿ ಹಬ್ಬದ ಶುಭಾಶಯಗಳು
4/6ಈ ದಸರಾ ಹಬ್ಬವು ನಿಮ್ಮ ಮನಸ್ಸಿನಿಂದ ಕೆಟ್ಟ ಆಲೋಚನೆಗಳನ್ನು ತೆಗೆದುಹಾಕಲಿ, ಉತ್ತಮ ಗುರಿಗಳನ್ನು ಮುಟ್ಟುವಂತೆ ಆಶೀರ್ವದಿಸಲಿ ಎಂದು ಹಾರೈಸುತ್ತೇನೆ. ನಿಮ್ಮೆಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು
5/6ದಸರಾ ಹಬ್ಬವು ಹೊಸ ಆರಂಭಗಳನ್ನು ಸೂಚಿಸುವ ಅದ್ಭುತ ಹಬ್ಬವಾಗಿದೆ. ಇಂತಹ ಮಹತ್ವದ ಹಬ್ಬದಿಂದ ನಿಮ್ಮೆಲ್ಲಾ ಪ್ರಯತ್ನಗಳು ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ. ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು.
6/6ಈ ದಸರಾ ಹಬ್ಬವನ್ನು ಪ್ರತಿ ವರ್ಷದಂತೆ ಅತ್ಯಂತ ವೈಭವದಿಂದ ಆಚರಿಸಲಿ ಎಂದು ಹಾರೈಸುತ್ತೇನೆ. ನಿಮಗೆ ಮತ್ತು ನಿಮ್ಮ ಕುಟುಂಬ ಸದಸ್ಯರಿಗೆ ದಸರಾ ಹಬ್ಬದ ಶುಭಾಶಯಗಳು.