ಹಣ್ಣಲ್ಲ.. ಇದರ ಸಿಪ್ಪೆಯಲ್ಲಿದೆ ನೂರಾರು ರೋಗ ಗುಣಪಡಿಸುವ ಸಾಮರ್ಥ್ಯ! ಪುಡಿ ಮಾಡಿ ಶೇಕರಿಸಿ ಪ್ರತಿನಿತ್ಯ ಬಳಸಿದರೆ ಗುಣವಾಗುತ್ತೆ ಮಾರಣಾಂತಿಕ ಕಾಯಿಲೆ

Written ByDeepa A ReddyUpdated byDeepa A Reddy
Published: Jun 09, 2025, 07:36 PM IST|Updated: Jun 09, 2025, 07:36 PM IST

Health benefits of lemon peel: ಅನೇಕ ಜನರು ನಿಂಬೆ ಸಿಪ್ಪೆಗಳನ್ನು ಎಸೆಯುತ್ತಲೇ ಇರುತ್ತಾರೆ. ಆದರೆ, ನಿಂಬೆ ಸಿಪ್ಪೆಗಳು ಅದ್ಭುತ ಪ್ರಯೋಜನಗಳನ್ನು ಹೊಂದಿವೆ ಎಂದು ನಿಮಗೆ ಗೊತ್ತಾ? ಅವುಗಳ ಉಪಯೋಗಗಳು ಮತ್ತು ಆರೋಗ್ಯ ಪ್ರಯೋಜನಗಳನ್ನು ತಿಳಿದರೆ ನೀವು ಆಶ್ಚರ್ಯಚಕಿತರಾಗುವಿರಿ. ಹೌದು, ನಿಂಬೆಹಣ್ಣುಗಳು ಮಾತ್ರವಲ್ಲದೆ ಅವುಗಳ ಸಿಪ್ಪೆಗಳು ಸಹ ಹಲವು ಉಪಯೋಗಗಳನ್ನು ಹೊಂದಿವೆ. ಅವುಗಳನ್ನು ಒಂದೇ ರೀತಿಯಲ್ಲಿ ಅಲ್ಲ, ಹಲವು ರೀತಿಯಲ್ಲಿ ಬಳಸಬಹುದು. 
 

1/6

Health benefits of lemon peel: ನಿಂಬೆ ಸಿಪ್ಪೆಗಳು ಅದ್ಭುತ ಪ್ರಯೋಜನಗಳನ್ನು ನೀಡುತ್ತವೆ. ವಿಶೇಷವಾಗಿ ನಿಂಬೆ ಸಿಪ್ಪೆಗಳು ಪೌಷ್ಟಿಕಾಂಶದ ಗುಣಗಳಿಂದ ತುಂಬಿರುತ್ತವೆ. ನಿಂಬೆ ಸಿಪ್ಪೆಗಳು ವಿಟಮಿನ್ ಸಿ ಅಂಶದಿಂದ ಸಮೃದ್ದವಾಗಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸಾಮಾನ್ಯ ರೋಗಗಳ ವಿರುದ್ಧ ಹೋರಾಡಲು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ವಿಟಮಿನ್ ಸಿ ಉಪಯುಕ್ತವಾಗಿದೆ. ನಿಂಬೆ ಸಿಪ್ಪೆಗಳಲ್ಲಿರುವ ಬಯೋಫ್ಲೇವನಾಯ್ಡ್‌ಗಳು ಮೂಳೆಯ ಆರೋಗ್ಯ ಮತ್ತು ಒತ್ತಡವನ್ನು ಎದುರಿಸಲು ಉಪಯುಕ್ತವಾಗಿವೆ.  

2/6

ನಿಂಬೆ ಸಿಪ್ಪೆಗಳು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇದು ಬಾಯಿಯ ಆರೋಗ್ಯಕ್ಕೆ ವಿಶೇಷವಾಗಿ ಒಳ್ಳೆಯದು. ಅವುಗಳು ಫ್ಲೇವನಾಯ್ಡ್‌ಗಳಿಂದ ಕೂಡಿದ್ದು, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.  

3/6

ನಿಂಬೆ ಸಿಪ್ಪೆಗಳಲ್ಲಿರುವ ನಾರಿನ ಅಂಶವು ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ, ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುತ್ತದೆ. ಇದು ತೂಕ ಇಳಿಸುವ ಪ್ರಕ್ರಿಯೆಯಲ್ಲಿ ಸಹಾಯ ಮಾಡುತ್ತದೆ. ನಿಂಬೆ ಸಿಪ್ಪೆಗಳಲ್ಲಿರುವ ಬಯೋಫ್ಲೇವನಾಯ್ಡ್‌ಗಳು ಮೂಳೆಗಳ ಆರೋಗ್ಯಕ್ಕೆ ಮತ್ತು ಒತ್ತಡವನ್ನು ಎದುರಿಸಲು ಉಪಯುಕ್ತವಾಗಿವೆ. ನಿಂಬೆ ಸಿಪ್ಪೆಗಳು ಬ್ಯಾಕ್ಟೀರಿಯಾ ವಿರೋಧಿ ಅಂಶಗಳನ್ನು ಹೊಂದಿರುತ್ತವೆ. ಅವು ಬಾಯಿಯ ಆರೋಗ್ಯಕ್ಕೆ ವಿಶೇಷವಾಗಿ ಒಳ್ಳೆಯದು.  

4/6

ಒಣಗಿಸಿ ಪುಡಿ ಮಾಡಿದ ನಿಂಬೆ ಸಿಪ್ಪೆಯು ಅನೇಕ ಪೋಷಕಾಂಶಗಳನ್ನು ಒದಗಿಸುತ್ತದೆ. ಇದರಲ್ಲಿರುವ ಪೊಟ್ಯಾಸಿಯಮ್ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ನಿಂಬೆ ಸಿಪ್ಪೆಯ ಪುಡಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದು ಹೃದಯ ಕಾಯಿಲೆಗಳನ್ನು ತಡೆಯುತ್ತದೆ. ಇದಲ್ಲದೆ, ನಿಂಬೆ ಸಿಪ್ಪೆಯ ಪುಡಿಯು ಕ್ಯಾನ್ಸರ್ ಕೋಶಗಳನ್ನು ನಾಶಮಾಡುವ ಗುಣಗಳನ್ನು ಹೊಂದಿದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ.  

5/6

ನಿಂಬೆ ಸಿಪ್ಪೆಗಳನ್ನು ಕೂದಲಿನ ಆರೈಕೆಗೂ ಬಳಸಬಹುದು. ಅವುಗಳನ್ನು ಪೇಸ್ಟ್ ಮಾಡಿ ಬಳಸಬಹುದು. ನಿಂಬೆ ಸಿಪ್ಪೆಗಳನ್ನು ಎಣ್ಣೆಯಲ್ಲಿ ಬಿಸಿ ಮಾಡಿ ನಂತರ ತಣ್ಣಗಾಗಿಸಬೇಕು. ಈ ನೀರನ್ನು ಕೂದಲಿಗೆ ಹಚ್ಚುವುದರಿಂದ ತಲೆಹೊಟ್ಟು ಕಡಿಮೆಯಾಗುತ್ತದೆ. ಸ್ನಾನ ಮಾಡುವಾಗ ನಿಂಬೆ ಸಿಪ್ಪೆಗಳನ್ನು ದೇಹದ ಮೇಲೆ ಉಜ್ಜುವುದರಿಂದ ರೋಗಾಣುಗಳು ದೂರವಾಗುತ್ತವೆ.  

6/6

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮಾನ್ಯ ಜ್ಞಾನ ಹಾಗೂ ಮೂಲಗಳ ಮಾಹಿತಿಯನ್ನು ಆಧರಿಸಿದೆ, ಇದನ್ನೂ ZEE KANNADA NEWS ಖಚಿತ ಪಡಿಸುವುದಿಲ್ಲ.