Benefits of Anjeer: ಪ್ರತಿದಿನ ಅಂಜೂರ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ
ಅಂಜೂರವನ್ನು ನೆನೆಸಿಟ್ಟಾಗ ಮೃದು ಹಾಗೂ ಹೆಚ್ಚು ರುಚಿಕರವಾಗುತ್ತದೆ. ರಾತ್ರಿ ಮಲಗುವ ಮುನ್ನ ಅರ್ಧ ಲೋಟ ನೀರಿನಲ್ಲಿ 2 ಒಣ ಅಂಜೂರಗಳನ್ನು ನೆನೆಸಿಟ್ಟು ಮರುದಿನ ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಅಂಜೂರವನ್ನು ಸೇವಿಸಿದರೆ ಹಲವಾರು ಆರೋಗ್ಯಕರ ಪ್ರಯೋಜನಗಳು ನಿಮಗೆ ಸಿಗುತ್ತವೆ.
ಅಂಜೂರದಲ್ಲಿ ಸತು, ಮ್ಯಾಂಗನೀಸ್, ಮೆಗ್ನೀಶಿಯಂ, ಕಬ್ಬಿಣ ಮೊದಲಾದ ಖನಿಜಗಳು ಉತ್ತಮ ಪ್ರಮಾಣದಲ್ಲಿವೆ. ಇವು ವ್ಯಕ್ತಿಯ ಫಲವತ್ತತೆ ಹೆಚ್ಚಿಸಲು ನೆರವಾಗುತ್ತವೆ. ವಿಶೇಷವಾಗಿ ಅಧಿಕ ಸಾಂದ್ರತೆಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಹಾಗೂ ಕರಗುವ ನಾರುಗಳು ರಸದೂತಗಳ ಅಸಮತೋಲನ ಸರಿಪಡಿಸುತ್ತವೆ.
ಅಂಜೂರದಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಶಿಯಂ ಇದೆ. ಇದು ದೇಹದ ಸಕ್ಕರೆಯ ಮಟ್ಟ ನಿಯಂತ್ರಿಸಲು ನೆರವಾಗುತ್ತದೆ. ಅಂಜೂರದಲ್ಲಿರುವ ಕ್ಲೋರೋಜೀನಿಕ್ ಆಮ್ಲ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಗೊಳಿಸಲು ಸಹಕಾರಿ.
ಟೈಪ್ 2 ಮಧುಮೇಹಿಗಳು ನೆನೆಸಿಟ್ಟ ಅಂಜೂರ ಸೇವಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಅಂಜೂರವನ್ನು ಬೆಳಗ್ಗಿನ ಪ್ರಥಮ ಆಹಾರವಾಗಿ ಸೇವಿಸುವುದು ನಿಮಗೆ ಅನೇಕ ಪ್ರಯೋಜನ ನೀಡುತ್ತದೆ.
ಅಂಜೂರದಲ್ಲಿರುವ ನಾರಿನಂಶ ಜೀರ್ಣಕ್ರಿಯೆ ಸುಲಭಗೊಳಿಸುತ್ತದೆ. ಜೀರ್ಣಕ್ರಿಯೆ ಸುಲಭಗೊಂಡರೆ ಮಲಬದ್ದತೆಯ ತೊಂದರೆಗೆ ಮುಕ್ತಿ ದೊರೆಯುತ್ತದೆ. ಹೀಗಾಗಿ ಈ ಸಮಸ್ಯೆ ಇರುವವರು ಅಂಜೂರ ಸೇವಿಸಬೇಕು.