Health Tips: ಬೇಸಿಗೆಯಲ್ಲಿ ದಿನಕ್ಕೆ ಎಷ್ಟು ಗ್ಲಾಸ್ ನೀರು ಕುಡಿಯಬೇಕು?

Summer Hydration Tips: 8 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು 7 ರಿಂದ 8 ಕಪ್​ಗಳು ಅಂದರೆ ಸುಮಾರು 1.8 ಲೀಟರ್ ನೀರು ಬೇಕು. ಮಹಿಳೆಯರಿಗೆ ದಿನಕ್ಕೆ 2.7 ಲೀಟರ್ ನೀರು ಬೇಕಾಗುತ್ತದೆ, ಅದೇ ರೀತಿ ಪುರುಷರು ದಿನಕ್ಕೆ 3.7 ಲೀಟರ್ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು.

Summer Hydration Tips: ನಾವು ಒಂದು ದಿನಕ್ಕೆ ಎಷ್ಟು ನೀರು ಕುಡಿಯಬೇಕು ಅನ್ನೋದಕ್ಕೆ ಯಾವುದೇ ನಿರ್ದಿಷ್ಟ ಉತ್ತರವಿಲ್ಲ. ಇದು ದೈಹಿಕ ಚಟುವಟಿಕೆ, ಹವಾಮಾನ ಮತ್ತು ಆರೋಗ್ಯ ಸ್ಥಿತಿಯಂತಹ ಹಲವು ಅಂಶಗಳನ್ನು ಅವಲಂಬಿಸಿರುತ್ತದೆ. ಯಾರೇ ಆಗಲಿ ಬೆಳಗ್ಗೆ ಹೆಚ್ಚು ನೀರು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ಯಾವುದೇ ಒಬ್ಬ ವ್ಯಕ್ತಿಯು ರಾತ್ರಿ ಮಲಗಿ ಬೆಳಗ್ಗೆ ಎದ್ದಾಗ ಅವರ ದೇಹದಲ್ಲಿನ ನೀರಿನ ಸಂಗ್ರಹ ಕಡಿಮೆಯಾಗುತ್ತದೆ. ಹೀಗಾಗಿ ಪ್ರತಿದಿನ ಬೆಳಗ್ಗೆ ಸ್ವಲ್ಪ ಹೆಚ್ಚು ನೀರು ಕುಡಿಯಲು ಹೇಳಲಾಗುತ್ತದೆ. ಇದೀಗ ಬೇಸಿಗೆ ಬಿಸಿ ಪ್ರತಿಯೊಬ್ಬರಿಗೂ ಸಮಸ್ಯೆ ಉಂಟು ಮಾಡುತ್ತಿದೆ. ದೇಹವು ಹೈಡ್ರೇಟ್‌ ಆಗಿರುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ಹೀಗಾಗಿ ಬೇಸಿಗೆಯಲ್ಲಿ ಎಷ್ಟು ಗ್ಲಾಸ್‌ ನೀರು ಕುಡಿಯುವುದು ಆರೋಗ್ಯಕ್ಕೆ ಉತ್ತಮ? ಇದಕ್ಕೆ ಉತ್ತರ ಇಲ್ಲಿದೆ ನೋಡಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

1 /6

ಪ್ರತಿದಿನವೂ ಹೆಚ್ಚು ನೀರು ಕುಡಿಯುವುದರಿಂದ ನಮಗೆ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಹೆಚ್ಚು ನೀರು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಉತ್ತಮ. ಆದರೆ ಪ್ರತಿಯೊಬ್ಬರೂ ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯಬೇಕು. ಇಲ್ಲದಿದ್ರೆ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆ. ಹೀಗಾಗಿ ದಿನಕ್ಕೆ ಎಷ್ಟು ಲೀಟರ್ ನೀರು ಕುಡಿಯಬೇಕು? ಯಾವ ಸಮಯದಲ್ಲಿ ನೀರು ಕುಡಿಯಬೇಕು? ಈ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತಮ.

2 /6

ವಯಸ್ಸಿಗೆ ಅನುಗುಣವಾಗಿ ಯಾರು ಎಷ್ಟು ಲೀಟರ್ ನೀರು ಕುಡಿಯಬೇಕು ಅನ್ನೋದರ ಮಾಹಿತಿ ನೋಡುವುದಾದರೆ, ಮೂರು ವರ್ಷದೊಳಗಿನ ಶಿಶುಗಳಿಗೆ ಎದೆ ಹಾಲಿನೊಂದಿಗೆ 4 ಕಪ್​ಗಳು ಅಂದರೆ ಸುಮಾರು 950 ಮಿಲಿ ಲೀಟರ್​ಗಳು ನೀರು ಬೇಕಾಗುತ್ತದೆ. ಅದೇ ರೀತಿ 4 ರಿಂದ 8 ವರ್ಷ ವಯಸ್ಸಿನ ಮಕ್ಕಳು 5 ಕಪ್​ಗಳು ಅಂದರೆ ಸುಮಾರು 1.1 ಲೀಟರ್ ನೀರು ಬೇಕಾಗುತ್ತದೆ. 8 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು 7 ರಿಂದ 8 ಕಪ್​ಗಳು ಅಂದರೆ ಸುಮಾರು 1.8 ಲೀಟರ್ ನೀರು ಬೇಕು. ಮಹಿಳೆಯರಿಗೆ ದಿನಕ್ಕೆ 2.7 ಲೀಟರ್ ನೀರು ಬೇಕಾಗುತ್ತದೆ, ಅದೇ ರೀತಿ ಪುರುಷರು ದಿನಕ್ಕೆ 3.7 ಲೀಟರ್ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು.

3 /6

ಸಾಮಾನ್ಯವಾಗಿ ನಮ್ಮ ಮೂತ್ರವು ಕೊಂಚ ಮಸುಕಾದ ಹಳದಿ ಬಣ್ಣದಲ್ಲಿರುತ್ತದೆ. ನೀವು ಹೆಚ್ಚು ನೀರು ಕುಡಿದರೆ ನಿಮ್ಮ ಮೂತ್ರವೂ ಅದೇ ಬಣ್ಣದ್ದಾಗಿರುತ್ತದೆ. ನೀವು ದೀರ್ಘಕಾಲದವರೆಗೆ ಸಾಕಷ್ಟು ನೀರು ಕುಡಿಯದಿದ್ದರೆ, ನಿಮ್ಮ ಮೂತ್ರವು ಗಾಢ ಹಳದಿ ಬಣ್ಣಕ್ಕೆ ತಿರುಗುತ್ತದೆ. ಕೆಲವೊಮ್ಮೆ ಮೂತ್ರನಾಳದಲ್ಲಿಯೂ ಉರಿ ಇರುತ್ತದೆ. ವೈದ್ಯರು ಹೇಳುವ ಪ್ರಕಾರ, ಯಾವುದೇ ಒಬ್ಬ ವ್ಯಕ್ತಿ ದಿನಕ್ಕೆ ಕನಿಷ್ಠ ಒಂದು ಲೀಟರ್‌ನಿಂದ ಒಂದೂವರೆ ಲೀಟರ್ ಮೂತ್ರವನ್ನು ಕಳೆದುಕೊಳ್ಳುತ್ತಾನೆ. ಹೀಗಾಗಿ ಸಾಕಷ್ಟು ನೀರು ಕುಡಿಯಲು ಸೂಚಿಸಲಾಗುತ್ತದೆ. 

4 /6

ಎಷ್ಟು ನೀರು ಕುಡಿಯಬೇಕು ಎಂಬುದು ವ್ಯಕ್ತಿಯು ಕೆಲಸ ಮಾಡುವ ಹವಾಮಾನ ಪರಿಸ್ಥಿತಿಯನ್ನ ಅವಲಂಬಿಸಿರುತ್ತದೆ. ಉದಾಹರಣೆಗೆ ಕಚೇರಿ ಕೆಲಸಗಾರರು ದಿನಕ್ಕೆ ಎರಡು ಲೀಟರ್ ನೀರು ಕುಡಿಯಬೇಕೆಂದು ವೈದ್ಯರು ಹೇಳುತ್ತಾರೆ. ತೀವ್ರವಾದ ಬಿಸಿಲಿನಲ್ಲಿ ಕೆಲಸ ಮಾಡುವ ಕೃಷಿ ಕಾರ್ಮಿಕರು ಮತ್ತು ಕಾರ್ಮಿಕರು ಬೆವರಿನ ರೂಪದಲ್ಲಿ ತಮ್ಮ ದೇಹದಿಂದ ನೀರಿನ್ನ ಕಳೆದುಕೊಳ್ಳುತ್ತಾರೆ. ಹೀಗಾಗಿ ಇಂತಹ ಜನರು ದಿನಕ್ಕೆ ಕನಿಷ್ಠ ಮೂರರಿಂದ ನಾಲ್ಕು ಲೀಟರ್ ನೀರು ಕುಡಿಯಬೇಕೆಂದು ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ.

5 /6

ದೇಹದಲ್ಲಿನ ನೀರಿನ ಸಂಗ್ರಹವು ಯಾವುದೇ ಕಾರಣಕ್ಕೂ ಖಾಲಿಯಾಗಬಾರದು. ಅಲ್ಲದೇ ಹೆಚ್ಚು ನೀರು ಕುಡಿಯುವುದರಿಂದ ಅಪಾಯವಿದೆ ಅಂತಾ ವೈದ್ಯರು ಎಚ್ಚರಿಸುತ್ತಾರೆ. ಹೆಚ್ಚು ನೀರು ಕುಡಿಯುವುದರಿಂದ ದೇಹದಲ್ಲಿನ ಸೋಡಿಯಂ ಮೂತ್ರದ ಮೂಲಕ ನಷ್ಟವಾಗಬಹುದು. ಹೀಗಾಗಿ ಹೆಚ್ಚು ನೀರು ಕುಡಿಯುವುದು ಕೂಡ ಅಪಾಯಕಾರಿ. 

6 /6

ರಕ್ತದೊತ್ತಡದ ಔಷಧಿಗಳು ದೇಹದಲ್ಲಿ ಸೋಡಿಯಂ ಮಟ್ಟವನ್ನ ಕಡಿಮೆ ಮಾಡುತ್ತದೆ. ರಕ್ತದೊತ್ತಡದ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವವರು ಹೆಚ್ಚು ನೀರು ಕುಡಿದರೆ ಸೋಡಿಯಂ ಮಟ್ಟವು ಬೇಗನೆ ಕಡಿಮೆಯಾಗುತ್ತದೆ. ಇದರಿಂದ ಮೆದುಳಿಗೆ ಹಾನಿಯಾಗುವ ಮತ್ತು ವ್ಯಕ್ತಿಯು ಪ್ರಜ್ಞಾಹೀನ ಸ್ಥಿತಿಗೆ ಹೋಗುವ ಅಪಾಯವಿರುತ್ತದೆ. ಹೀಗಾಗಿ ರಕ್ತದೊತ್ತಡದ ಔಷಧಿಗಳನ್ನು ತೆಗೆದುಕೊಳ್ಳುವವರು ನೀರಿನ ಸೇವನೆಯ ಬಗ್ಗೆ ಜಾಗರೂಕರಾಗಿರಬೇಕು ಅಂತಾ ವೈದ್ಯರು ಸಲಹೆ ನೀಡಿದ್ದಾರೆ. (ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)