ಹತ್ತು ಕೋಟಿ ಬಜೆಟ್‌ ಹಾಕಿದ್ರೂ ನಿರ್ಮಾಪಕರನ್ನ ಸಾಲದ ಸುಳಿಯಲ್ಲಿ ಸಿಲುಕಿಸಿತ್ತು ಹೇಮಾಮಾಲಿನಿ ನಟಿಸಿದ್ದ ಈ ಸಿನಿಮಾ! ಕಾರಣ ಅದೊಂದೇ ಸೀನ್..‌

Hema Malini: ಬಾಲಿವುಡ್ ಚಿತ್ರರಂಗದ ಡ್ರೀಮ್ ಗರ್ಲ್ ಖ್ಯಾತಿಯ ಹೇಮಾ ಮಾಲಿನಿ 1980ರ ದಶಕದಲ್ಲಿ ನಟಿಸಿದ್ದ ಚಿತ್ರದಲ್ಲಿನ ಒಂದು ದೃಶ್ಯ ಇಡೀ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿತ್ತು. 

1 /6

80ರ ದಶಕದಲ್ಲಿ ಕನಸಿನ ಕನ್ಯೆ ಎಂದೇ ಹೆಸರಾಗಿದ್ದ ನಟಿ ಹೇಮಾ ಮಾಲಿನಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇತ್ತು. ಅವರ ಚಿತ್ರಗಳು ಒಂದರ ಹಿಂದೆ ಒಂದು ಹಿಟ್ ಆಗುತ್ತಿದ್ದವು. ಹಾಗಿದ್ದರೂ 1983ರಲ್ಲಿ ತೆರೆಕಂಡ ರಜಿಯಾ ಸುಲ್ತಾನ್ ಸಿನಿಮಾ ಹೀನಾಯವಾಗಿ ನೆಲ ಕಚ್ಚಿತು. ರಜಿಯಾ ಸುಲ್ತಾನ್ ಸಿನಿಮಾ ಸೋಲಲು ಹೇಮಾ ಮಾಲಿನಿ ನಟಿಸಿದ ಆ ದೃಶ್ಯವೇ ಕಾರಣ ಎಂದು ಹಲವರು ಅಭಿಪ್ರಾಯಪಡುತ್ತಾರೆ. 

2 /6

ದೆಹಲಿಯ ಮೊದಲ ಮಹಿಳಾ ಸುಲ್ತಾನ್ ರಜಿಯಾ ಜೀವನವನ್ನು ಆಧರಿಸಿ ಮಾಡಿದ್ದ ಸಿನಿಮಾ ರಜಿಯಾ ಸುಲ್ತಾನ್. ಅದರಲ್ಲಿ ಹೇಮಾ ಮಾಲಿನಿ, ರಜಿಯಾ ಪಾತ್ರವನ್ನು ನಿರ್ವಹಿಸಿದ್ದರು.

3 /6

13ನೇ ಶತಮಾನದ ದೆಹಲಿ ರಾಜಾಳ್ವಿಕೆ ಬಗ್ಗೆ ಇದ್ದ ರಜಿಯಾ ಸುಲ್ತಾನ್ ಚಿತ್ರದಲ್ಲಿ ಮಹಿಳೆಯರ ನಡುವಿನ ಪ್ರೀತಿಯ ಬಗ್ಗೆ ಹೇಳಲಾಗಿತ್ತು. ಹೇಮಾಮಾಲಿನಿ ಇನ್ನೊಬ್ಬ ಮಹಿಳೆಯ ಮೋಹಕ್ಕೆ ಬೀಳುವ ಪಾತ್ರ ಮಾಡಿದ್ದರು.  

4 /6

ಇನ್ನೊಬ್ಬ ಮಹಿಳೆಯ ಪಾತ್ರ ಮಾಡಿದ್ದು ಪರ್ಬೀನ್ ಬಾಬಿ. ರಿಜಿಯಾ ಸುಲ್ತಾನ್ ಸಿನಿಮಾದಲ್ಲಿ ಹೇಮಾ ಮಾಲಿನಿ ಮತ್ತು ಪರ್ಬೀನ್ ಬಾಬಿ ಪರಸ್ಪರ ಚುಂಬಿಸುವ ದೃಶ್ಯದಲ್ಲಿ ನಟಿಸಿದ್ದರು. 

5 /6

ಹೇಮಾ ಮಾಲಿನಿ ಮತ್ತು ಪರ್ಬೀನ್ ಬಾಬಿ ಪರಸ್ಪರ ಚುಂಬಿಸುವ ದೃಶ್ಯದ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಅಷ್ಟೇಯಲ್ಲ, ಆ ಕಾಲದಲ್ಲಿ 10 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ರಜಿಯಾ ಸುಲ್ತಾನ್ ಗಳಿಸಿದ್ದು ಕೇವಲ 2 ಕೋಟಿ ರೂಪಾಯಿ. ಇದರಿಂದಾಗಿ ನಿರ್ಮಾಪಕರು ಸಾಲದ ಸುಳಿಗೆ ಸಿಲುಕಬೇಕಾಯಿತು. 

6 /6

ರಜಿಯಾ ಸುಲ್ತಾನ್ ಸಿನಿಮಾ ಬಿಡುಗಡೆಯಾದಾಗ ಪುರುಷ ಮತ್ತು ಮಹಿಳೆಯ ನಡುವಿನ ಚುಂಬನದ ದೃಶ್ಯದ ಬಗ್ಗೆ ಕೂಡ ಚರ್ಚೆಗಳು ನಡೆದವು. ಆದರೆ ಇಬ್ಬರು ಮಹಿಳೆಯರ ನಡುವಿನ ಚುಂಬನದ ದೃಶ್ಯವಂತೂ ಪ್ರೇಕ್ಷಕರು ಕೆರಳುವಂತೆ ಮಾಡಿತ್ತು. ಚಿತ್ರದ ಸೋಲಿಗೆ ಇದೇ ಕಾರಣ ಎಂದು ಹೇಳಲಾಗುತ್ತಿತ್ತು.