Hema Malini's post: ಹೇಮಾ ಮಾಲಿನಿ ಅವರು ತಮ್ಮ ದಿವಂಗತ ಪತಿ ಧರ್ಮೇಂದ್ರ ಅವರೊಂದಿಗೆ ಕಳೆದ ಸಂತೋಷದ ಕ್ಷಣಗಳನ್ನು ನೆನೆದು, ಅವರ ಇನ್ಸ್ಟಾಗ್ರಾಮ್‌ನಲ್ಲಿ ಅಪರೂಪದ ಕುಟುಂಬದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
1/7Hema Malini's post : ಡ್ರೀಮ್‌ಗರ್ಲ್ ಎಂದೇ ಹೆಸರಾದ ಹೇಮಾ ಮಾಲಿನಿ, ತಮ್ಮ ದಿವಂಗತ ಪತಿ ಧರ್ಮೇಂದ್ರ ಅವರೊಂದಿಗೆ ಕಳೆದ ಅಪರೂಪದ ಸಂತೋಷದ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
2/7ಪೋಸ್ಟ್‌ನಲ್ಲಿ ಹೇಮಾ ಮಾಲಿನಿ ತಮ್ಮ ವೈಯಕ್ತಿಕ ಆಲ್ಬಮ್‌ನಿಂದ ಪ್ರಕಟಿಸದ ಹಲವಾರು ಕುಟುಂಬ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಧರ್ಮೇಂದ್ರ, ಹೇಮಾ ಮತ್ತು ಅವರ ಪುತ್ರಿಯರಾದ ಇಶಾ ಡಿಯೋಲ್ ಮತ್ತು ಅಹಾನಾ ಡಿಯೋಲ್ ಕಾಣಸಿಗುವ ಈ ಚಿತ್ರಗಳು ಕುಟುಂಬದ ಒಗ್ಗಟ್ಟು, ನಗು, ಪ್ರೀತಿ ಮತ್ತು ಅಳಿಯದ ನೆನಪುಗಳಿಂದ ತುಂಬಿವೆ. ಇದರೊಂದಿಗೆ ವಾರ್ಷಿಕೋತ್ಸವದ ಆಚರಣೆಗಳಲ್ಲಿರುವ ಫೋಟೋಗಳು ವಿಶೇಷ ಗಮನ ಸೆಳೆದಿವೆ.
3/7ಫೋಟೋಗಳ ಜೊತೆಗೆ ಹೇಮಾ ಮಾಲಿನಿ ಬರೆಯುವ ಶೀರ್ಷಿಕೆ ಈ ಪೋಸ್ಟ್‌ಗೆ ಇನ್ನಷ್ಟು ಮಿಡಿತ ನೀಡಿದೆ. ಅವರು ತಮ್ಮ ಪೋಸ್ಟ್‌ನಲ್ಲಿ "ಕುಟುಂಬದ ಆತ್ಮೀಯ ಕ್ಷಣಗಳು" ಎಂದು ಬರೆದುಕೊಂಡಿದ್ದಾರೆ. ಅವರ ಈ ಮಾತುಗಳಿಗೆ ಅನೇಕ ಅಭಿಮಾನಿಗಳು ಬಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ
4/7ಧರ್ಮೇಂದ್ರ ಅವರನ್ನು ಪ್ರೀತಿಯಿಂದ ನೆನಪಿಸಿಕೊಂಡ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರತಿಕ್ರಿಯೆ ಪಡೆದಿದೆ. ತೆರೆ ಮೇಲೆ ಮತ್ತು ತೆರೆ ಹೊರಗೆ ಧರ್ಮೇಂದ್ರ ಅವರು ಬದುಕಿದ ಅದ್ಭುತ ಪ್ರಯಾಣವನ್ನು ಅಭಿಮಾನಿಗಳು ಗೌರವದಿಂದ ಸ್ಮರಿಸುತ್ತಿದ್ದಾರೆ. ಡಿಯೋಲ್ ಕುಟುಂಬದ ಈ ಸಂತಸದ ಕ್ಷಣಗಳು ಧರ್ಮೇಂದ್ರ ಅವರ ಕುಟುಂಬದ ನ್ಯೂನ್ಯತೆಯನ್ನು ಪ್ರತಿನಿದಿಸುತ್ತದೆ.
5/7ನವೆಂಬರ್ 27 ರಂದು ಬಾಂದ್ರಾದ ತಾಜ್ ಲ್ಯಾಂಡ್ಸ್ ಎಂಡ್‌ನ ಸೀಸೈಡ್ ಲಾನ್ಸ್‌ನಲ್ಲಿ “Celebration of Life” ಎಂದು ಕರೆಯಲಾದ ಧರ್ಮೇಂದ್ರ ಅವರ ಸ್ಮರಣಾರ್ಥ ವಿಶೇಷ ಪ್ರಾರ್ಥನಾ ಸಭೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಕುಟುಂಬ ಸದಸ್ಯರು, ಬಂಧು–ಬಳಗ ಮತ್ತು ಉದ್ಯಮದ ಅನೇಕ ಗಣ್ಯರು ಭಾಗವಹಿಸಿ, ಹಿರಿಯ ನಟನಿಗೆ ಕೊನೆಯ ಗೌರವ ಸಲ್ಲಿಸಿದರು.
6/7ವರದಿಯ ಪ್ರಕಾರ, ಕಾರ್ಯಕ್ರಮದಲ್ಲಿ ಧರ್ಮೇಂದ್ರ ಅವರಿಗೆ ಸಂಗೀತ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸನ್ನಿ ಡಿಯೋಲ್, ಬಾಬಿ ಡಿಯೋಲ್ ಮತ್ತು ಕರಣ್ ಡಿಯೋಲ್ ಅವರು ಎಲ್ಲರಿಗೂ ಕೈಮುಗಿದು ಕೃತಜ್ಞತೆ ಸಲ್ಲಿಸಿದರು.
7/7ಈ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್, ರೇಖಾ, ಶಬಾನಾ ಅಜ್ಮಿ, ಮನೀಶ್ ಪಾಲ್, ನಿಮ್ರತ್ ಕೌರ್ ಮತ್ತು ಪೂಜಾ ಹೆಗ್ಡೆ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು. ಬಾಲಿವುಡ್‌ನ ಪ್ರೀತಿಯ ನಟನಾಗಿದ್ದ ಧರ್ಮೇಂದ್ರ ಅವರು ನವೆಂಬರ್ 24 ರಂದು 89 ನೇ ವಯಸ್ಸಿನಲ್ಲಿ ನಿಧನರಾದರು. ಹೇಮಾ ಮಾಲಿನಿ ಹಂಚಿಕೊಂಡ ಈ ಅಪರೂಪದ ನೆನಪುಗಳು, ಅವರಿಬ್ಬರ ನಡುವಿನ ಪ್ರೀತಿ ಮತ್ತು ಬಂಧನದ ಮಹತ್ವವನ್ನು ಮತ್ತೊಮ್ಮೆ ಜನತೆಗೆ ತಲುಪಿಸಿವೆ.