ಇವರೇ ನೋಡಿ 2008ರಿಂದ ಇಲ್ಲಿಯವರೆಗೂ ಎಲ್ಲಾ 18 ಐಪಿಎಲ್‌ ಸೀಸನ್ಸ್‌ ಆಡಿರುವ ಪ್ಲೇಯರ್ಸ್‌

2008ರಿಂದ ಪ್ರಾರಂಭವಾದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಅನೇಕ ದಿಗ್ಗಜ ಆಟಗಾರರನ್ನು ಕಂಡಿದೆ. ಉದ್ಘಾಟನಾ ಋತುವಿನಿಂದ ಹಿಡಿದು ಪ್ರಸಕ್ತ ಸಾಲಿನ ಐಪಿಎಲ್‌ ಟೂರ್ನಿಯವರೆಗೆ ಆಡುತ್ತಿರುವ ಕೆಲವೇ ಕೆಲವು ಆಟಗಾರರಿದ್ದಾರೆ. ಈ ಆಟಗಾರರು ಯಾರು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ... 

IPL 2025: ಕಳೆದ ಎರಡು ದಶಕಗಳಲ್ಲಿ ಐಪಿಎಲ್‌ ಟೂರ್ನಿಯಲ್ಲಿ ಅನೇಕ ಶ್ರೇಷ್ಠ ಆಟಗಾರರು ಬಂದು ಹೋಗಿದ್ದಾರೆ. ಆದರೆ IPL ಆರಂಭದಿಂದಲೂ ಪ್ರಸಕ್ತ ಸಾಲಿನ ಟೂರ್ನಿಯವರೆಗೂ ಆಡುತ್ತಿರುವ ಕೆಲವು ಶ್ರೇಷ್ಠ ಆಟಗಾರರಿದ್ದಾರೆ. ಅವರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

1 /9

ಭಾರತೀಯ ಕ್ರಿಕೆಟ್ ಮತ್ತು ಐಪಿಎಲ್‌ನ ಗಾಡ್‌ಫಾದರ್ ಎಂದೇ ಖ್ಯಾತರಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ಮಹೇಂದ್ರ ಸಿಂಗ್‌ ಧೋನಿ 2008ರಿಂದಲೂ ವಿಕೆಟ್ ಹಿಂದೆ ನಿರಂತರವಾಗಿ ಕಾಣಿಸಿಕೊಂಡಿದ್ದಾರೆ. 2007ರಲ್ಲಿ ಭಾರತಕ್ಕೆ ಚೊಚ್ಚಲ ಟಿ-20 ವಿಶ್ವಕಪ್ ಪ್ರಶಸ್ತಿ ತಂದುಕೊಟ್ಟ ನಂತರ, ಉದ್ದ ಕೂದಲಿನ ಧೋನಿ ಐಪಿಎಲ್ ಕಣಕ್ಕೆ ಪ್ರವೇಶಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ನಾಯಕರಾಗಿ ತಂಡವನ್ನು ಮುನ್ನೆಡಿಸಿದ ಧೋನಿ, ಉದ್ಘಾಟನಾ ಹರಾಜಿನಲ್ಲಿ ಅತ್ಯಂತ ದುಬಾರಿ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಚೆನ್ನೈ ತಂಡಕ್ಕೆ 5 ಟ್ರೋಫಿ ಗೆದ್ದುಕೊಡುವ ಐಪಿಎಲ್ ಇತಿಹಾಸದಲ್ಲಿ (ರೋಹಿತ್ ಶರ್ಮಾ ಜೊತೆಗೆ) ಅತ್ಯಂತ ಯಶಸ್ವಿ ನಾಯಯ ಎನಿಸಿಕೊಂಡಿದ್ದಾರೆ. ಸಿಎಸ್‌ಕೆ ಅಭಿಮಾನಿಗಳಿಂದ ಪ್ರೀತಿಯಿಂದ "ಥಲಾ" ಎಂದು ಕರೆಯಲ್ಪಡುವ 43 ವರ್ಷದ ಧೋನಿ ಈ ಋತುವಿನ ಅತ್ಯಂತ ಹಿರಿಯ ಆಟಗಾರರಾಗಿದ್ದಾರೆ.

2 /9

ಧೋನಿಯಂತೆಯೇ ರೋಹಿತ್ ಶರ್ಮಾ ಕೂಡ ಮುಂಬೈ ಇಂಡಿಯನ್ಸ್ ತಂಡಕ್ಕೆ 5 ಐಪಿಎಲ್‌ ಟ್ರೋಫಿ ಗೆದ್ದುಕೊಟ್ಟಿದ್ದಾರೆ. ಇದು ಹಿಟ್‌ಮ್ಯಾನ್‌ರನ್ನ ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕನನ್ನಾಗಿ ಮಾಡಿದೆ. ಆದರೆ ರೋಹಿತ್‌ 2009ರಲ್ಲಿ ಡೆಕ್ಕನ್ ಚಾರ್ಜರ್ಸ್‌ನೊಂದಿಗೆ ಐಪಿಎಲ್ ಗೆದ್ದ ಕಾರಣ ಆರು ಐಪಿಎಲ್ ಪ್ರಶಸ್ತಿಗಳನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ. ಇದರಿಂದ ಅವರು ಲೀಗ್‌ನಲ್ಲಿ ಅತ್ಯಂತ ಯಶಸ್ವಿ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ಈಗ ತಂಡದ ನಾಯಕರಲ್ಲದಿದ್ದರೂ, ಮುಂಬೈ ಅಭಿಮಾನಿಗಳು ಇನ್ನೂ "ಹಿಟ್‌ಮ್ಯಾನ್" ಆಟವನ್ನು ಮೈದಾನದಲ್ಲಿ ಕಣ್ತುಂಬಿಕೊಳ್ಳಲಿದ್ದಾರೆ. ಮುಂಬೈ ತಂಡವು ಇದೀಗ ದಾಖಲೆಯ 6ನೇ ಐಪಿಎಲ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ.  

3 /9

17 ಋತುಗಳಲ್ಲಿ 8,000ಕ್ಕೂ ಹೆಚ್ಚು ರನ್ ಗಳಿಸಿರುವ ವಿರಾಟ್ ಕೊಹ್ಲಿ ನಿಸ್ಸಂದೇಹವಾಗಿ ಐಪಿಎಲ್‌ನ "ಕಿಂಗ್" ಆಗಿ ಹೊರಹೊಮ್ಮಿದ್ದಾರೆ. ಹಲವು ವರ್ಷಗಳ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಕೇವಲ $50,000ಗೆ ಆಯ್ಕೆಯಾದ ಈ ದಿಲ್ಲಿಯ ಉತ್ಸಾಹಿ ಆಟಗಾರ ಆರಂಭದಿಂದಲೂ ತಂಡದ ನಿಷ್ಠಾವಂತ ಸೇವಕರಾಗಿದ್ದಾರೆ. ಹದಿಹರೆಯದ ಯುವಕನಿಂದ ಹಿಡಿದು ನಾಯಕನವರೆಗೆ ಅದ್ಭುತ ಪ್ರದರ್ಶನವನ್ನು ನೀಡಿದ್ದಾರೆ. ಈಗ ಅದ್ಭುತ ಬ್ಯಾಟ್ಸ್‌ಮನ್ ಆಗಿರುವ ಕೊಹ್ಲಿ, ಒಳ್ಳೆಯ ಮತ್ತು ಕೆಟ್ಟ ಸಂದರ್ಭಗಳಲ್ಲಿಯೂ ಆರ್‌ಸಿಬಿಯೊಂದಿಗೆ ಉಳಿದುಕೊಂಡಿದ್ದಾರೆ. ಆರ್‌ಸಿಬಿ ಎರಡು ಬಾರಿ ಫೈನಲ್‌ ತಲುಪಿದೆ. ಲೀಗ್‌ನ ಉಳಿದ ತಂಡಗಳಿಗೆ ಟಕ್ಕರ್‌ ನೀಡುವ ಈ ತಂಡವು ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. 18ನೇ ಋತುವಿನಲ್ಲಿ ಆರ್‌ಸಿಬಿಯ ಐಕಾನಿಕ್ ಕೊಹ್ಲಿಯ ಅದ್ಭುತ ಪ್ರದರ್ಶನದಿಂದ ತಂಡವು ʼಈ ಸಲ ಕಪ್‌ ನಮ್ದೆʼ ಎನ್ನುತ್ತಿದೆ.  

4 /9

ಈ ವರ್ಷದ ಐಪಿಎಲ್‌ನಲ್ಲಿ ಆರ್.ಅಶ್ವಿನ್ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಕಮ್‌ಬ್ಯಾಕ್‌ ಮಾಡಿದ್ದಾರೆ. ಅದ್ಭುತ ವೃತ್ತಿಜೀವನದ ಬಳಿಕ ಟೀಂ ಇಂಡಿಯಾದಿಂದ ನಿವೃತ್ತರಾದ ಈ ದಂತಕಥೆಯ ಆಫ್-ಸ್ಪಿನ್ನರ್ ಅನ್ನು 2008ರ ಹರಾಜಿನಲ್ಲಿ ತವರು ತಂಡ ಸಿಎಸ್‌ಕೆ ಆಯ್ಕೆ ಮಾಡಿತ್ತು. ಧೋನಿಯೊಂದಿಗೆ ಅಶ್ವಿನ್‌ ಸಹ ಚೆನ್ನೈ ತಂಡದಲ್ಲಿ ಅದ್ಭುತ ಮ್ಯಾಜಿಕ್‌ ಮಾಡಿದ್ದರು. 2015ರವರೆಗೆ ತಂಡದ ಪ್ರಮುಖ ಸದಸ್ಯರಾಗಿದ್ದರು. ನಂತರ ವಿವಿಧ ಫ್ರಾಂಚೈಸಿಗಳಲ್ಲಿ ಅವರು ಆಡಿದ್ದರು. ಐಪಿಎಲ್‌ನಲ್ಲಿ 180 ವಿಕೆಟ್‌ ಪಡೆಯುವ ಮೂಲಕ 5ನೇ ಅತಿಹೆಚ್ಚು ವಿಕೆಟ್ ಟೇಕರ್‌ ಎನಿಸಿಕೊಂಡಿದ್ದಾರೆ. ಇದೀಗ ತವರು ತಂಡಕ್ಕೆ ವಾಪಸ್‌ ಆಗಿರುವುದರಿಂದ ಮತ್ತೊಂದು ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. 

5 /9

ರವೀಂದ್ರ ಜಡೇಜಾ... ವಿಶ್ವ ಕ್ರಿಕೆಟ್‌ನಲ್ಲಿ ಮನೆಮಾತಾದ ಮತ್ತೊಂದು ಹೆಸರು. 2008ರಲ್ಲಿ ಪ್ರಶಸ್ತಿ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದ ಜಡೇಜಾ ಕಳೆದ 17 ವರ್ಷಗಳಲ್ಲಿ ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಅಮೂಲ್ಯ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ವಿಶ್ವದ ಅತ್ಯುತ್ತಮ ಫೀಲ್ಡರ್ ಎಂಬ ಹೆಗ್ಗಳಿಕೆ ಹೊಂದಿರುವ ಜಡೇಜಾ, ತಮ್ಮ ನಿಧಾನಗತಿಯ ಎಡಗೈ ಮತ್ತು ಕೆಳ ಕ್ರಮಾಂಕದ ಬ್ಯಾಟಿಂಗ್ ಸಾಮರ್ಥ್ಯದೊಂದಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. 2012ರಲ್ಲಿ ಸಿಎಸ್‌ಕೆ ಸೇರಿದ ಜಡೇಜಾ ಅಂದಿನಿಂದಲೂ ತಂಡದೊಂದಿಗೆ ಇದ್ದು, 3 ಬಾರಿ ಐಪಿಎಲ್ ಪ್ರಶಸ್ತಿಗಳನ್ನು ಎತ್ತಿ ಹಿಡಿದಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧದ ಕೊನೆಯ 2 ಎಸೆತಗಳಲ್ಲಿ ಸಿಎಸ್‌ಕೆ ಗೆಲ್ಲಲು 10 ರನ್‌ಗಳ ಅಗತ್ಯವಿದ್ದಾಗ ಅವರು ಸಿಕ್ಸ್ ಮತ್ತು ಫೋರ್ ಬಾರಿಸುವ ಮೂಲಕ 2023ರ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

6 /9

ದೆಹಲಿಯ ವೇಗದ ಬೌಲರ್ 2008ರಿಂದ ಐಪಿಎಲ್ ಡಗೌಟ್‌ನಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿ ಅದ್ಭುತ ಪ್ರದರ್ಶನದ ತೋರಿದ ನಂತರ ಉದ್ಘಾಟನಾ ಋತುವಿನಲ್ಲಿ ಅವರಿಗೆ ಭಾರೀ ಬೇಡಿಕೆಯಿತ್ತು. ಕೋಲ್ಕತ್ತಾ ನೈಟ್ ರೈಡರ್ಸ್ ಅವರನ್ನ $950,000ಗೆ ಖರೀದಿಸಿತ್ತು. ಇದರಿಂದ ಅವರು ಉದ್ಘಾಟನಾ ಆವೃತ್ತಿಯಲ್ಲಿ ಅತ್ಯಂತ ದುಬಾರಿ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇಶಾಂತ್ ಶರ್ಮಾ ಇನ್ನೂ ಐಪಿಎಲ್ ಪ್ರಶಸ್ತಿ ಗೆದ್ದಿಲ್ಲ. 2025ರ ಋತುವಿಗೆ ಮುಂಚಿತವಾಗಿ ಗುಜರಾತ್ ಟೈಟಾನ್ಸ್ ಅವರನ್ನು ₹75 ಲಕ್ಷಕ್ಕೆ ಖರೀದಿಸಿದೆ. ಕುತೂಹಲಕಾರಿ ವಿಷಯವೆಂದರೆ 2008 ಮತ್ತು 2025ರಲ್ಲಿ ಹರಾಜಿನಲ್ಲಿದ್ದ ಏಕೈಕ ಆಟಗಾರ ಇಶಾಂತ್ ಶರ್ಮಾ ಆಗಿದ್ದಾರೆ.

7 /9

2009ರ ಋತುವಿನಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಆರ್‌ಸಿಬಿ ಪರ ಅಜೇಯ 114 (73) ರನ್ ಗಳಿಸುವ ಮೂಲಕ ಐಪಿಎಲ್‌ನಲ್ಲಿ ಶತಕ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ನಂತರ ಬಲಗೈ ಬ್ಯಾಟ್ಸ್‌ಮನ್ ಮನೀಶ್ ಪಾಂಡೆ ಪ್ರಾಮುಖ್ಯತೆ ಪಡೆದರು. ಆರ್‌ಸಿಬಿ ಆ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದರೆ, ಪಾಂಡೆ ಪಂದ್ಯಶ್ರೇಷ್ಠರಾಗಿದ್ದರು. ಆರ್‌ಸಿಬಿಗೆ ಬರುವ ಮೊದಲು ಉದ್ಘಾಟನಾ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದರು. ಪಾಂಡೆ ತಮ್ಮ ಐಪಿಎಲ್ ವೃತ್ತಿಜೀವನದುದ್ದಕ್ಕೂ 8 ಫ್ರಾಂಚೈಸಿಗಳಿಗಾಗಿ ಆಡಿದ್ದಾರೆ. 2014 ಮತ್ತು 2017ರ ನಡುವೆ ಕೆಕೆಆರ್‌ನೊಂದಿಗೆ ನಾಲ್ಕು ಋತುಗಳನ್ನು ಕಳೆದ ನಂತರ, ಇದೀಗ ಹಾಲಿ ಚಾಂಪಿಯನ್‌ ಕೆಕೆಆರ್‌ ತಂಡಕ್ಕೆ ಸೇರಿಕೊಂಡಿದ್ದಾರೆ. 2014ರಲ್ಲಿ ಕೆಕೆಆರ್‌ ಪರ ಫೈನಲ್‌ನಲ್ಲಿ 94 (50) ರನ್‌ ಗಳಿಸುವ ಮೂಲಕ ಅವರು ಪಂದ್ಯಶ್ರೇಷ್ಠ ಪ್ರದರ್ಶನ ನೀಡುವ ಮೂಲಕ ಮಿಂಚಿದ್ದರು.

8 /9

ಈ ಪಟ್ಟಿಯಲ್ಲಿರುವ ಮತ್ತೊಂದು ಹೆಸರು ಕೆಕೆಆರ್ ನಾಯಕ ಅಜಿಂಕ್ಯ ರಹಾನೆ. ಮೃದುಭಾಷಿ ಬ್ಯಾಟ್ಸ್‌ಮನ್ ಭಾರತೀಯ ತಂಡದ ಅಗ್ರ ಕ್ರಮಾಂಕದಲ್ಲಿ, ವಿಶೇಷವಾಗಿ ಟೆಸ್ಟ್‌ಗಳಲ್ಲಿ ರಹಾನೆ ಪ್ರಮುಖ ಪಾತ್ರ ವಹಿಸಿದ್ದರು. ಮುಂಬೈ ಇಂಡಿಯನ್ಸ್ ಅವರನ್ನು 2008ರಲ್ಲಿ ಆಯ್ಕೆ ಮಾಡಿಕೊಂಡಿತ್ತು. 3 ಋತುಗಳ ಬಳಿಕ ರಾಜಸ್ಥಾನ್ ರಾಯಲ್ಸ್‌ಗೆ ತೆರಳಿದ ಈ ಆಟಗಾರ ಅದ್ಭುತ ಪ್ರದರ್ಶನ ನೀಡಿದರು. 2020ರಲ್ಲಿ ದೆಹಲಿ ಕ್ಯಾಪಿಟಲ್ಸ್‌ ಸೇರಿದ ರಹಾನೆ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ನಂತರ 2023ರ ಋತುವಿನಲ್ಲಿ ₹50 ಲಕ್ಷಕ್ಕೆ CSK ಸೇರಿದ ರಹಾನೆ, ತಂಡವು ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. 3ನೇ ಕ್ರಮಾಂಕದಲ್ಲಿ ಆಡಿದ ಅವರು ತಮ್ಮ ಸ್ಫೋಟಕ ಇನ್ನಿಂಗ್ಸ್ ಮೂಲಕ ತಂಡಕ್ಕೆ ಅದ್ಭುತ ಶಕ್ತಿ ನೀಡಿದರು. ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ ರನ್‌ ಗಳಿಸುವ ಮೂಲಕ ತಂಡದ ಗೆಲುವಿಗೆ ನೆರವಾಗಿದ್ದರು. 2023ರ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ CSK ಕೊನೆಯ ಎಸೆತದಲ್ಲಿ ರೋಮಾಂಚಕವಾಗಿ ಪಂದ್ಯವನ್ನು ಗೆದ್ದಿತ್ತು. ಈ ಋತುವಿನಲ್ಲಿ ರಹಾನೆ 172.48 ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ 326 ರನ್‌ ಗಳಿಸಿ ಮಿಂಚಿದ್ದರು. 

9 /9

ಸ್ವಪ್ನಿಲ್ ಸಿಂಗ್ ಉದ್ಘಾಟನಾ ಋತುವಿನ ಭಾಗವಾಗಿದ್ದ ಮತ್ತೊಬ್ಬ ಪ್ರಸ್ತುತ ಆಟಗಾರ. ಈ ಋತುವಿನಲ್ಲಿ ಆರ್‌ಸಿಬಿ ಪರ ಆಡಲಿರುವ ರಾಯ್‌ಬರೇಲಿಯ ಈ ಎಡಗೈ ಸಾಂಪ್ರದಾಯಿಕ ಸ್ಪಿನ್ನರ್, 2008ರಲ್ಲಿ ಮುಂಬೈ ಇಂಡಿಯನ್ಸ್‌ನೊಂದಿಗೆ ತಮ್ಮ ಐಪಿಎಲ್ ಪ್ರಯಾಣ ಪ್ರಾರಂಭಿಸಿದರು. ಆ ಋತುವಿನಲ್ಲಿ ಅವರಿಗೆ ಒಂದೇ ಒಂದು ಪಂದ್ಯ ಆಡಲಾಗಲಿಲ್ಲ. ಐಪಿಎಲ್‌ಗೆ ಪಾದಾರ್ಪಣೆ ಮಾಡಲು ಸುಮಾರು ಒಂದು ದಶಕ ಕಾಯಬೇಕಾಯಿತು. 2016ರ ಋತುವಿಗೆ ಮುಂಚಿತವಾಗಿ ಕಿಂಗ್ಸ್ ಇಲೆವೆನ್ ಪಂಜಾಬ್ (ಈಗ ಪಂಜಾಬ್ ಕಿಂಗ್ಸ್) ಸ್ಪಿನ್ನರ್‌ನನ್ನು ಆಯ್ಕೆ ಮಾಡಿತು. ಈ ಫ್ರಾಂಚೈಸಿಯೊಂದಿಗೆ ಎರಡು ಸೀಸನ್‌ಗಳನ್ನು ಕಳೆದರು. ಲಕ್ನೋ ಸೂಪರ್ ಜೈಂಟ್ಸ್ ಅವರನ್ನು 2023ರ ಋತುವಿನಲ್ಲಿ ಆಯ್ಕೆ ಮಾಡಿಕೊಂಡಿತ್ತು. ಆರ್‌ಸಿಬಿ ಅವರನ್ನು 2023ರಲ್ಲಿ ತಂಡಕ್ಕೆ ಸೇರಿಸಿಕೊಂಡಿತ್ತು. 2024 ಸೇರಿದಂತೆ ಈ ಋತುವಿನಲ್ಲಿಯೂ ಅವರು ಆರ್‌ಸಿಬಿ ತಂಡದ ಪರ ಆಡಲಿದ್ದಾರೆ. ಸ್ವಪ್ನಿಲ್ ಐಪಿಎಲ್‌ ಟೂರ್ನಿಯಲ್ಲಿ ನಿಸ್ಸಂದೇಹವಾಗಿ ಕಡಿಮೆ ಗುರುತಿಸಲ್ಪಟ್ಟ ಆಟಗಾರನಾಗಿದ್ದಾರೆ.