19ನೇ ವಯಸ್ಸಿಗೆ 31 ವರ್ಷದ ಹೀರೋ ಜತೆ ಮದುವೆ, 11 ವರ್ಷಗಳ ಬಳಿಕ ನಟಿ ರೀಎಂಟ್ರಿ!

Written ByYashaswini V
Published: Sep 17, 2025, 10:41 AM IST|Updated: Sep 17, 2025, 10:41 AM IST

Actress Nazriya Nazim: ಆಕೆ ದಕ್ಷಿಣ ಭಾರತದಲ್ಲಿ ಭರವಸೆ ಮೂಡಿಸಿದ್ದ ಪ್ರಸಿದ್ದ ನಟಿ. ಕಡಿಮೆ ಅವಧಿಯಲ್ಲಿ ತನ್ನದೆಯಾದ ಇಮೇಜ್ ಸೃಷ್ಟಿ ಮಾಡಿಕೊಂಡಿದ್ದ ನಾಯಕಿ. ಸೌಂದರ್ಯ ಮತ್ತು ನಟನೆ ಎರಡರಿಂದಲೂ ಪ್ರೇಕ್ಷಕರ ಮನಗೆದ್ದಿದ್ದ ಕಲಾವಿದೆ.

Actress Nazriya Nazim1/6

ನಟಿ ನಜ್ರಿಯಾ ನಜೀಮ್

ಮೋಹಕ ನಟಿ ನಜ್ರಿಯಾ ನಜೀಮ್ ಅವರ ಸಿನಿಮಾಗಳು ಒಂದರ ಹಿಂದೊಂದು ಗಲ್ಲ ಪೆಟ್ಟಿಗೆಯನ್ನು ತುಂಬುತ್ತಿದ್ದವು. ಜೊತೆಗೆ ನಜ್ರಿಯಾ ನಜೀಮ್ ನೋಟಕ್ಕೆ, ಮೈಮಾಟಕ್ಕೆ ಮಾರುಹೋಗಿ ಮೂರ್ಛೆ ಹೋಗುವವರ ಸಂಖ್ಯೆ ಕೂಡ ಜಾಸ್ತಿ ಇತ್ತು. ಆದರೆ ನಜ್ರಿಯಾ ನಜೀಮ್ ಅವರ ನಸೀಬು ಮತ್ತು ನಜರು ಬೇರೆಯೇ ಇತ್ತು. ಖ್ಯಾತಿಯ ಉತ್ತುಂಗದಲ್ಲಿದ್ದಾಗಲೇ ಬಣ್ಣದ ಲೋಕಕ್ಕೆ ಬೆನ್ನು ತೋರಿಸಿ ಮದುವೆಯಾಗಲು ಬಹುಪಾಲು ನಟಿಯರು ಒಪ್ಪುವುದಿಲ್ಲ. ಆದರೆ ನಟಿ ನಜ್ರಿಯಾ ನಜೀಮ್ ಎಲ್ಲರಂತಲ್ಲ. 

Actress Nazriya Nazim2/6

ನಟಿ ನಜ್ರಿಯಾ ನಜೀಮ್

ನಜ್ರಿಯಾ ನಜೀಮ್ ರಾಜಾ ರಾಣಿ, ನೈಯಾಂಡಿ, ವೈಯೈ ಮೂಡಿ ಪೆಸವುಮ್, ತಿರುಮನಮ್ ಇ ನಿಕ್ಕಾ ಮುಂತಾದ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ಮೆಚ್ಚಿಸಿದರು. ತೆಲುಗು ಚಿತ್ರ ಸುಂದರಾನಿಯಲ್ಲೂ ನಟಿಸಿದ್ದರು. ವೃತ್ತಿಜೀವನ ಉತ್ತಮ ಸ್ಥಿತಿಯಲ್ಲಿದ್ದಾಗ ಖ್ಯಾತ ಮಲಯಾಳಂ ನಟ ಫಹಾದ್ ಫಾಸಿಲ್ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಆಗ ಅವರ ವಯಸ್ಸು ಕೇವಲ 19 ವರ್ಷ. 

Actress Nazriya Nazim3/6

ನಟಿ ನಜ್ರಿಯಾ ನಜೀಮ್

ನಟಿ ನಜ್ರಿಯಾ ನಜೀಮ್ 19ನೇ ವಯಸ್ಸಿಗೆ 31 ವರ್ಷದ ಸ್ಟಾರ್ ನಾಯಕನನ್ನು ಪ್ರೀತಿಸಿ ಮದುವೆಯಾದರು. ಅದಾದ ಮೇಲೂ ಅಭಿನಯವನ್ನು ಬಿಟ್ಟಿರಲಿಲ್ಲ. ಆದರೆ ಅದು ಅಷ್ಟಕ್ಕಷ್ಟೇ ಎನ್ನುವಂತಿತ್ತು. 

Actress Nazriya Nazim4/6

ನಟಿ ನಜ್ರಿಯಾ ನಜೀಮ್ ರೀ ಎಂಟ್ರಿ

ನಟಿ ನಜ್ರಿಯಾ ನಜೀಮ್ ಈಗ 11 ವರ್ಷಗಳ ನಂತರ ತಮಿಳಿನಲ್ಲಿ ವೆಬ್ ಸರಣಿಯಲ್ಲಿ ನಟಿಸಲಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆ ಹೊರಬಿದ್ದಿದೆ. 

Actress Nazriya Nazim5/6

ನಟಿ ನಜ್ರಿಯಾ ನಜೀಮ್

ಹೌದು, ಟಿ ಸ್ಟುಡಿಯೋಸ್ ನಿರ್ಮಿಸುವ ದಿ ಮದ್ರಾಸ್ ಮಿಸ್ಟರಿ- ಫಾಲ್ ಆಫ್ ಎ ಸೂಪರ್‌ಸ್ಟಾರ್ ಸರಣಿಯ ಮೂಲಕ ಬರೋಬ್ಬರಿ 11 ವರ್ಷಗಳ ನಂತರ ನಟಿ ನಜ್ರಿಯಾ ನಜೀಮ್ ಅಭಿನಯಕ್ಕೆ ರೀ ಎಂಟ್ರಿ ನೀಡಲಿದ್ದಾರೆ. 

Actress Nazriya Nazim6/6

ನಟಿ ನಜ್ರಿಯಾ ನಜೀಮ್

ತಮಿಳಿನಲ್ಲಿ ವೆಬ್ ಸರಣಿಯಲ್ಲಿ ನಟಿಸಲಿರುವ ನಟಿ ನಜ್ರಿಯಾ ನಜೀಮ್, ಜೀತು ಮಾಧವನ್ ನಿರ್ದೇಶನದ ಯೋಜನೆಯಲ್ಲಿ ಸೂರ್ಯ ಎದುರು ಅವರು ನಟಿಸಲಿದ್ದಾರೆ ಎಂಬ ಊಹಾಪೋಹಗಳು ಕೂಡ ಹರಿದಾಡುತ್ತಿವೆ. ಆದರೆ ಈ ಬಗ್ಗೆ ಯಾವುದೇ ಖಚಿತ ಮಾಹಿತಿಗಳಿಲ್ಲ.