white hair remedies: ಎಲ್ಲರ ಮನೆಯಂಗಳದಲ್ಲಿ ಸಿಗುವ ಈ ಸಾಮಾನ್ಯ ಹೂವನ್ನು ಸರಿಯಾಗಿ ಬಳಸಿದರೆ ಬಿಳಿ ಕೂದಲನ್ನು ಬುಡದಿಂದಲೇ ಕಪ್ಪಾಗಿಸಬಹುದು.
how to darken white hair: ಬಿಳಿ ಕೂದಲನ್ನು ಕಪ್ಪಾಗಿಸಲು ರಾಸಾಯನಿಕಯುಕ್ತ ಹೇರ್ ಡೈಗಳ ಬದಲು ಕೆಲವು ನೈಸರ್ಗಿಕ ಪರಿಹಾರಗಳನ್ನು ಬಳಸಬೇಕು.
ದಾಸವಾಳ ಕೂದಲು ಬಿಳಿಯಾಗುವುದನ್ನು ತಡೆಯಲು ಸಹಾಯಕವಾಗಿದೆ. ಮಾಲಿನ್ಯ, ಆಧುನಿಕ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿ ಕೂದಲಿನ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ. ಚಿಕ್ಕವಯಸ್ಸಿನಲ್ಲೇ ಬಿಳಿ ಕೂದಲಿನ ಸಮಸ್ಯೆ ಅನೇಕರನ್ನು ಕಾಡುತ್ತಿದೆ.
ದಾಸವಾಳ ಹೂವಿನ ಹೇರ್ ಮಾಸ್ಕ್ ತಯಾರಿಸಿ ಹಚ್ಚಿಕೊಂಡರೆ ಬಿಳಿ ಕೂದಲನ್ನು ಕಪ್ಪಾಗಿಸಬಹುದು. ಯಾವುದೇ ರಾಸಾಯನಿಕ ಆಧಾರಿತ ಹೇರ್ ಕಲರ್ ಇಲ್ಲದೇ ಬಿಳಿ ಕೂದಲು ಕಪ್ಪಾಗುವುದು. ಕೂದಲು ಉದುರುವ ಸಮಸ್ಯೆಗೆ ಕೂಡ ಇದು ಪರಿಣಾಮಕಾರಿಯಾಗಿದೆ.
ಬಿಳಿ ಕೂದಲು ಇರುವವರು ಗೋರಂಟಿ ಎಲೆ ಮತ್ತು ದಾಸವಾಳ ಹೂವಿನ ಈ ಹೇರ್ ಮಾಸ್ಕ್ ಹಚ್ಚಿಕೊಳ್ಳಬೇಕು. ಇದು ಕೂದಲಿನ ಹೊಳಪಿಗೆ ಕಾರಣವಾಗುತ್ತದೆ. ಒಣ ನಿರ್ಜೀವ ಕೂದಲು ರೇಷ್ಮೆಯಂತೆ ಮಿಂಚಲು ಆರಂಭಿಸುತ್ತದೆ.
ಗೋರಂಟಿ ಎಲೆಗಳು ಮತ್ತು ದಾಸವಾಳ ಹೂವಿನ ಪೇಸ್ಟ್ ೆರಡನ್ನೂ ಒಟ್ಟಿಗೆ ಬೆರೆಸಿ ಹಚ್ಚುವುದರಿಂದ ಕೂದಲಿನ ಬಣ್ಣ ನೈಸರ್ಗಿಕವಾಗಿ ಕಪ್ಪಾಗುತ್ತದೆ. ಮೊದಲು ಒಂದಷ್ಟು ಗೋರಂಟಿ ಎಲೆಗಳನ್ನು ಸಂಗ್ರಹಿಸಿ ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಿ.
ದಾಸವಾಳ ಹೂವುಗಳನ್ನು ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ. ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಮತ್ತು ಅದಕ್ಕೆ 10 ದಾಸವಾಳ ಹೂವು ಹಾಕಿ ಚೆನ್ನಾಗಿ ಕುದಿಸಿ. ಈಗ ಈ ನೀರನ್ನು ತಣ್ಣಗಾಗಲು ಬಿಡಿ. ನಂತರ ನೀರಿನಲ್ಲಿ ಗೋರಂಟಿ ಎಲೆಯ ಪುಡಿಯನ್ನು ಬೆರೆಸಿ ಒಂದು ಗಂಟೆ ನೆನೆಯಲು ಬಿಡಿ.
ಗೋರಂಟಿ ಪುಡಿ ಮತ್ತು ದಾಸವಾಳದ ಪೇಸ್ಟ್‌ಗೆ ಸ್ವಲ್ಪ ತೆಂಗಿನೆಣ್ಣೆ ಸೇರಿಸಿ ಕೂದಲಿನ ಬೇರುಗಳಿಂದ ತುದಿಯವರೆಗೆ ಹಚ್ಚಿಕೊಳ್ಳಿ. ಸುಮಾರು ಒಂದು ಗಂಟೆ ಬಡಿ. ನಂತರ ತಲೆ ಸ್ನಾನ ಮಾಡಿ. ಇದರಿಂದ ಕೂದಲು ಕಪ್ಪಾಗುವುದರ ಜೊತೆಗೆ ತಲೆಹೊಟ್ಟು ನಿವಾರಣೆ ಆಗುವುದು.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.