ಈ ಹೂವನ್ನು ಕಿವುಚಿ ತಲೆಗೆ ಹಚ್ಚಿ ಸಾಕು.. ಕೂದಲು ಗಾಢ ಕಪ್ಪಾಗಿ ದಷ್ಟಪುಷ್ಟವಾಗಿ ಮಾರುದ್ದ ಬೆಳೆಯುವುದು!
ದಾಸವಾಳ ಹೂವು ಪ್ರತಿಯೊಬ್ಬರ ಮನೆಯ ಅಂಗಳದಲ್ಲಿ ಸಿಗುತ್ತದೆ. ದಾಸವಾಳ ಹೂವನ್ನು ಮತ್ತು ಅದರ ಎಲೆಯನ್ನು ಸರಿಯಾಗಿ ಬಳಸಿದರೆ ಬಿಳಿ ಕೂದಲನ್ನು ಬುಡದಿಂದಲೇ ಕಪ್ಪಾಗಿಸಬಹುದು.
ಕೂದಲು ಬಿಳಿಯಾಗುವುದನ್ನು ತಡೆಯಲು ದಾಸವಾಳ ಹೂವು ಸಾಕಷ್ಟು ಪ್ರಯೋಜನಕಾರಿಯಾಗಿದೆ. ಒತ್ತಡಭರಿತ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಗಳು ಕೂದಲನ್ನು ಚಿಕ್ಕ ವಯಸ್ಸಿನಲ್ಲಿಯೇ ಬಿಳಿಯಾಗಿಸುತ್ತಿವೆ. ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.
ದಾಸವಾಳ ಹೂವಿನ ಹೇರ್ ಮಾಸ್ಕ್ ಕೂದಲಿನ ಅನೇಕ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ದಾಸವಾಳದ ಮಾಸ್ಕ್ ಹಚ್ಚಿಕೊಂಡರೆ ಬಿಳಿ ಕೂದಲನ್ನು ರಾಸಾಯನಿಕ ಆಧಾರಿತ ಹೇರ್ ಕಲರ್ ಇಲ್ಲದೇಯೇ ಬೇರು ಸಮೇತ ಕಡು ಕಪ್ಪಾಗಿಸಬಹುದಾಗಿದೆ.
ಕೂದಲು ಉದುರುವ ಸಮಸ್ಯೆಗೆ ಕೂಡ ದಾಸವಾಳ ಹೂವಿನ ಹೇರ್ ಮಾಸ್ಕ್ ಪರಿಣಾಮಕಾರಿಯಾಗಿದೆ. ಬಿಳಿ ಕೂದಲು ಹೊಂದಿರುವವರು ಗೋರಂಟಿ ಎಲೆ ಮತ್ತು ದಾಸವಾಳ ಹೂವು ಬಳಸಿ ಹೇರ್ ಮಾಸ್ಕ್ ತಯಾರಿಸಬಹುದು.
ಗೋರಂಟಿ ಎಲೆಗಳು ಮತ್ತು ದಾಸವಾಳ ಹೂವಿನ ಪೇಸ್ಟ್ ಹಚ್ಚುವುದರಿಂದ ಒಣ ನಿರ್ಜೀವ ಕೂದಲು ರೇಷ್ಮೆಯಂತಾಗುತ್ತವೆ. ಗೋರಂಟಿ ಎಲೆ ಮತ್ತು ದಾಸವಾಳ ಹೂವು ಬಳಸಿ ಹೇರ್ ಮಾಸ್ಕ್ ತಯಾರಿಸುವ ವಿಧಾನ ತಿಳಿಯೋಣ.
ಮೊದಲು ಒಂದಷ್ಟು ಗೋರಂಟಿ ಎಲೆಗಳನ್ನು ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಿ. ದಾಸವಾಳ ಹೂವುಗಳನ್ನು ತೆಗೆದುಕೊಂಡು ಶುದ್ಧ ನೀರಿನಲ್ಲಿ ತೊಳೆಯಿರಿ. ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಮತ್ತು ಅದಕ್ಕೆ 10 ದಾಸವಾಳ ಹೂವು ಹಾಕಿ 30 ನಿಮಿಷ ಕುದಿಸಿ. ಬಳಿಕ ನೀರನ್ನು ಸಂಪೂರ್ಣ ತಣ್ಣಗಾಗಲು ಬಿಡಿ.
ದಾಸವಾಳ ಕುದಿಸಿದ ನೀರಿನಲ್ಲಿ ಗೋರಂಟಿ ಎಲೆಯ ಪುಡಿಯನ್ನು ಬೆರೆಸಿ ಒಂದು ಗಂಟೆ ನೆನೆಯಲು ಬಿಡಿ. ಗೋರಂಟಿ ಪುಡಿ ಮತ್ತು ದಾಸವಾಳದ ಪೇಸ್ಟ್‌ಗೆ 3 - 4 ಚಮಚ ತೆಂಗಿನೆಣ್ಣೆ ಸೇರಿಸಿ ಕೂದಲಿನ ಬೇರುಗಳಿಂದ ತುದಿಯವರೆಗೆ ಹಚ್ಚಿಕೊಂಡು ಲೈಟ್ ಮಸಾಜ್ ನೀಡಿ. ಸುಮಾರು ಒಂದು ಗಂಟೆಯ ನಂತರ ತಲೆ ಸ್ನಾನ ಮಾಡಿ.
ದಾಸವಾಳದ ಈ ಹೇರ್ ಮಾಸ್ಕ್‌ನ್ನು ನಿಯಮಿತವಾಗಿ ಬಳಸುವುದರಿಂದ ಬಿಳಿ ಕೂದಲು ಕಪ್ಪಾಗುವುದರ ಜೊತೆಗೆ ತಲೆಹೊಟ್ಟು ನಿವಾರಣೆ ಆಗುವುದು. ಕೂದಲು ಉದ್ದವಾಗಿ ದಪ್ಪವಾಗಿ ಬೆಳೆಯುವುದು. ಒಣ ಕೂದಲಿನ ಸಮಸ್ಯೆ ತೊಲಗಿ ರೇಷ್ಮೆಯ ನೂಲಿನಂತೆ ಸಿಲ್ಕಿ ಶೈನ್ ಆಗುತ್ತವೆ.
ಗಮನಿಸಿರಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.