ಮಧುಮೇಹಿಗಳು ಬೆಳಗ್ಗೆ ಎದ್ದ ತಕ್ಷಣ ಈ ನೈಸರ್ಗಿಕ ಜ್ಯೂಸ್‌ ಕುಡಿದರೆ ಸಕ್ಕರೆ ಮಟ್ಟ ತಕ್ಷಣ ಕಡಿಮೆಯಾಗುತ್ತೆ..!

Blood sugar control : ಮಧುಮೇಹ ಒಮ್ಮೆ ಬಂದರೆ ನಿಯಂತ್ರಣ ಮಾಡುವುದನ್ನು ಬಿಟ್ಟು ಅದನ್ನು ಸಂಪೂರ್ಣವಾಗಿವಾಸಿ ಮಾಡುವ ಔಷಧಿ ಇಲ್ಲವೇ ಇಲ್ಲ. ಬನನಿ ಈ ಪೋಸ್ಟ್‌ನಲ್ಲಿ, ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವ 5 ಆರೋಗ್ಯಕರ ಆಯುರ್ವೇದ ಪಾನೀಯಗಳ ಬಗ್ಗೆ ತಿಳಿದುಕೊಳ್ಳೋಣ.. 

1 /7

ಕೆಟ್ಟ ಜೀವನಶೈಲಿ, ಕಳಪೆ ಆಹಾರ ಸೇವನೆಯಿಂದ ಹೆಚ್ಚಿನ ಜನರು ಮಧುಮೇಹಕ್ಕೆ ಒಳಗಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ, ಜನಸಂಖ್ಯೆಯಲ್ಲಿ ಸಕ್ಕರೆ ರೋಗದ ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಇದು ಮಾರಕ ಕಾಯಿಲೆಯಾಗಿ ಬದಲಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಇದನ್ನು ನಿಯಂತ್ರಣ ಮಾಡುವುದು ತುಂಬಾ ಮುಖ್ಯ.. 

2 /7

ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾದಾಗ ಮತ್ತು ಮಧುಮೇಹ ಬಂದಾಗ, ದೇಹದ ಭಾಗಗಳು ಹಾನಿಗೊಳಗಾಗಲು ಪ್ರಾರಂಭಿಸುತ್ತವೆ. ರೋಗಿಯ ರೋಗನಿರೋಧಕ ಶಕ್ತಿಯೂ ಕಡಿಮೆಯಾಗುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುವುದು ಬಹಳ ಮುಖ್ಯ. ಅದಕ್ಕಾಗಿ ಮಧುಮೇಹಿಗಳು ತಮ್ಮ ಆಹಾರಕ್ರಮದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು.

3 /7

ಬೆಚ್ಚಗಿನ ನಿಂಬೆ ನೀರು : ಮಧುಮೇಹಿಗಳು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿನೊಂದಿಗೆ ನಿಂಬೆ ರಸವನ್ನು ಬೆರೆಸಿ ಕುಡಿಯುವುದರಿಂದ ಉತ್ತಮ ಪ್ರಯೋಜನಗಳನ್ನು ಪಡೆಯಬಹುದು. ಸಕ್ಕರೆಯ ಬದಲು, ನೀವು ನಿಂಬೆ ನೀರಿನಲ್ಲಿ ಸ್ವಲ್ಪ ಜೇನುತುಪ್ಪವನ್ನು ಬಳಸಬಹುದು. ಇದು ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

4 /7

ಮೆಂತ್ಯ ನೀರು : ಮೆಂತ್ಯದಲ್ಲಿ ನಾರಿನಂಶ ಹೆಚ್ಚಾಗಿರುತ್ತದೆ. ಅವು ರಕ್ತದಲ್ಲಿ ಸಕ್ಕರೆ ಹೀರಿಕೊಳ್ಳುವುದನ್ನು ನಿಧಾನಗೊಳಿಸುತ್ತವೆ. ಮಧುಮೇಹ ರೋಗಿಗಳು ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ, ಸೋಸಿ ಬೆಳಿಗ್ಗೆ ಕುಡಿಯಬಹುದು. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

5 /7

ನೆಲ್ಲಿಕಾಯಿ ರಸ : ಇದರಲ್ಲಿ ವಿಟಮಿನ್ ಸಿ ಯ ಸಮೃದ್ಧವಾಗಿರುತ್ತದೆ. ಅಲ್ಲದೆ, ಉತ್ಕರ್ಷಣ ನಿರೋಧಕಗಳು ಅಧಿಕವಾಗಿವೆ. ನೆಲ್ಲಿಕಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ನೆಲ್ಲಿಕಾಯಿ ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

6 /7

ದಾಲ್ಚಿನ್ನಿ ಚಹಾ : ದಾಲ್ಚಿನ್ನಿಯಲ್ಲಿರುವ ಅಂಶಗಳು ದೇಹದಲ್ಲಿ ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸುತ್ತವೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಇದು ರಕ್ತದಲ್ಲಿ ಸಕ್ಕರೆ ಹೀರಿಕೊಳ್ಳುವುದನ್ನು ನಿಧಾನಗೊಳಿಸುತ್ತದೆ. ದಾಲ್ಚಿನ್ನಿ ಚಹಾವು ನಿಮ್ಮ ದೇಹದಲ್ಲಿ ದಾಲ್ಚಿನ್ನಿಯನ್ನು ಸೇರಿಸಲು ಸುಲಭವಾದ ಮಾರ್ಗವಾಗಿದೆ. ಇದಲ್ಲದೆ, ಇದನ್ನು ಇತರ ರೀತಿಯ ಆಹಾರಕ್ಕೂ ಸೇರಿಸಬಹುದು. ರುಚಿಯನ್ನು ಹೆಚ್ಚಿಸಲು, ನೀವು ದಾಲ್ಚಿನ್ನಿ ಚಹಾಕ್ಕೆ ಕೆಲವು ಮೆಂತ್ಯ ಎಲೆಗಳನ್ನು ಕೂಡ ಸೇರಿಸಬಹುದು.

7 /7

(ಸೂಚನೆ: ಈ ಸುದ್ದಿಯನ್ನು ನಿಮಗೆ ಹೆಚ್ಚಿನ ಮಾಹಿತಿ ನೀಡಲು ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಾಗ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ಇವುಗಳನ್ನು ಅನುಸರಿಸುವ ಮೊದಲು ನೀವು ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ಪಡೆಯಬೇಕು. Zee Kannada news ಈ ಮಾಹಿತಿಯನ್ನು ಪರಿಶೀಲಿಸಿಲ್ಲ.)