ದುಂಡಗಿರುವ ಹೊಟ್ಟೆ ಚಪ್ಪಟೆಯಾಗಬೇಕಾದರೆ ಎಳನೀರಿಗೆ ಇದೊಂದು ಬೀಜ ಬೆರೆಸಿ ಕುಡಿದರೆ ಸಾಕು !ಒಮ್ಮೆ ಟ್ರೈ ಮಾಡಿ ನೋಡಿ

ತೂಕ ಹೆಚ್ಚಳದಿಂದ ದೇಹ ಸೌಂದರ್ಯ ಹಾಳಾಗುವುದು ಮಾತ್ರವಲ್ಲ, ಅದರ ಜೊತೆಗೆ ಅನೇಕ ಅಪಾಯಕಾರಿ ರೋಗಗಳು ಕೂಡಾ ಬೆನ್ನು ಹತ್ತುತ್ತವೆ. ಹಾಗಾಗಿ ತೂಕ ಹೆಚ್ಚಾಗಿದೆ ಎಂದು ಅನಿಸಿದರೆ ವೇಟ್ ಲಾಸ್ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವುದು ಮುಖ್ಯವಾಗುತ್ತದೆ. 

1 /7

ತೂಕ ಹೆಚ್ಚಳ  ಹೈ ಕೊಲೆಸ್ಟ್ರಾಲ್, ಮಧುಮೇಹ, ಹೈ ಬಿಪಿ ಮತ್ತು ಹೃದಯಾಘಾತಕ್ಕೆ ಕಾರಣವಾಗಬಹುದು.   

2 /7

ನೈಸರ್ಗಿಕ ಪಾನೀಯವಾದ ಎಳನೀರನ್ನು ಕುಡಿಯುವ ಮೂಲಕ ಚಪ್ಪಟೆಯಾದ ಹೊಟ್ಟೆಯನ್ನು ಪಡೆಯಬಹುದು. ಆದರೆ, ಯಾವ ಹೊತ್ತಿನಲ್ಲಿ ಕುಡಿಯಬೇಕು, ಹೇಗೆ ಕುಡಿಯಬೇಕು ಎನ್ನುವುದು ಬಹಳ ಮುಖ್ಯವಾಗಿರುತ್ತದೆ.   

3 /7

ಎಳನೀರಿನಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ನೈಸರ್ಗಿಕ ಕಿಣ್ವಗಳು ಅಡಗಿರುತ್ತವೆ. ಇದರಿಂದಾಗಿ ದೇಹ ಹೈಡ್ರೆಡ್ ಆಗಿ ಇರುತ್ತದೆ. ಜೊತೆಗೆ ದಿನವಿಡೀ ಫ್ರೆಶ್ ನೆಸ್ ಇರುತ್ತದೆ.

4 /7

ಎಳನೀರಿನಲ್ಲಿ ನೈಸರ್ಗಿಕ ಸಕ್ಕರೆ ಮತ್ತು ಕಡಿಮೆ ಕ್ಯಾಲೋರಿಗಳ ಜೊತೆಗೆ  ಕಡಿಮೆ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳಿವೆ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.   

5 /7

ಹೀಗಾಗಿ ನಿಯಮಿತವಾಗಿ ಎಳನೀರು ಕುಡಿಯುತ್ತಾ ಬಂದರೆ ಹೊಟ್ಟೆ ಮತ್ತು ಸೊಂಟ ಸೇರಿದಂತೆ ದೇಹದಲ್ಲಿ ಸೇರಿಕೊಂಡಿರುವ ಅಧಿಕ ಕೊಬ್ಬು ಕರಗಲು  ಆರಂಭವಾಗುತ್ತದೆ.   

6 /7

ಈ ನೈಸರ್ಗಿಕ ಪಾನೀಯವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಬೊಜ್ಜು ಸುಲಭವಾಗಿ ಕರಗುವುದು. ಜೊತೆಗೆ ಬರೀ ಎಳನೀರಿನ ಬದಲು ಇದಕ್ಕೆ ಒಂದು ಚಮಚ ತುಳಸಿ ಬೀಜವನ್ನು ಬೆರೆಸಿ ಕುಡಿದರೆ ಬಹಳ ಬೇಗನೆ  ತೂಕ ಕಡಿಮೆಯಾಗುತ್ತದೆ. 

7 /7

ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದನ್ನು ಆಧರಿಸಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.