ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಲು ಮನೆಯಲ್ಲೇ ತಯಾರಿಸಿ ನ್ಯಾಚುರಲ್ ಹೇರ್ ಡೈ
ದೇಹದಲ್ಲಿ ಪೋಷಕಾಂಶಗಳ ಕೊರತೆ ಜೊತೆಗೆ ಬದಲಾದ ವಾತಾವರಣ, ಧೂಳು, ಆಹಾರ ಪದ್ದತಿಯಿಂದಾಗಿ ಕೂದಲು ಬೆಳ್ಳಗಾಗಬಹುದು.
ಬಿಳಿ ಕೂದಲನ್ನು ಕಪ್ಪಾಗಿಸಲು ಮಾರುಕಟ್ಟೆಯಲ್ಲಿ ನಾನಾ ಬಗೆಯ ಹೇರ್ ಡೈ ಗಳು ಲಭ್ಯವಿವೆ. ಆದರೆ, ಇವುಗಳ ಬಳಕೆಯಿಂದ ಕೆಲವರಲ್ಲಿ ಚರ್ಮ ಮತ್ತು ಕೂದಲಿಗೆ ಸಂಬಂಧಿಸಿದಂತೆ ಕೆಲವು ಅಡ್ಡಪರಿಣಾಮಗಳು ಉಂಟಾಗಬಹುದು.
ಆದರೆ, ನಿಮ್ಮ ಮನೆಯಲ್ಲಿಯೇ ಇರುವ ಪದಾರ್ಥಗಳನ್ನು ಬಳಸಿ ನ್ಯಾಚುರಲ್ ಹೇರ್ ಡೈ ತಯಾರಿಸಿ ಬಳಸುವುದರಿಂದ ಕೂದಲು ಕಪ್ಪಾಗುವುದರ ಜೊತೆಗೆ ಸೊಂಪಾಗಿಯೂ ಬೆಳೆಯುತ್ತದೆ.
ನಿಮ್ಮ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಆಮ್ಲಾ ಪೌಡರ್, ಟೀ ಪುಡಿ, ಕಾಫಿ ಪುಡಿ, ಕಪ್ಪು ಜೀರಿಗೆಯನ್ನು ಬಳಸಿ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಬಹುದು.
ಮೊದಲಿಗೆ 2 ಸ್ಪೂನ್ ಕಪ್ಪು ಜೀರಿಗೆಯನ್ನು ತೆಗೆದುಕೊಂಡು ನುಣ್ಣಗೆ ಪುಡಿ ಮಾಡಿ. ನಂತರ ಒಂದು ಕಬ್ಬಿಣದ ಬಾಣಲೆಯಲ್ಲಿ ಒಂದು ಗ್ಲಾಸ್ ನೀರು ಹಾಕಿ ಕಾಯಲು ಬಿಡಿ. ನೀರು ಸಣ್ಣ ಕುದಿ ಬರುತ್ತಿದ್ದಂತೆ 2 ಸ್ಪೂನ್ ಆಮ್ಲಾ ಪುಡಿ, 1 ಸ್ಪೂನ್ ಟೀ ಪುಡಿ, 1 ಸ್ಪೂನ್ ಕಾಫಿ ಪುಡಿ, ಪುಡಿಮಾಡಿಟ್ಟ ಕಪ್ಪು ಜೀರಿಗೆಯನ್ನು ಹಾಕಿ ಸಣ್ಣ ಉರಿಯಲ್ಲಿ ಅದು ಗಟ್ಟಿಯಾಗುವವರೆಗೂ ಕಾಯಿಸಿ.
ಈ ರೀತಿ ತಯಾರಿಸಿದ ನ್ಯಾಚುರಲ್ ಹೇರ್ ಡೈ ತಣ್ಣಗಾದ ಬಳಿಕ ಕೂದಲಿನ ಬುಡದಿಂದ ತುದಿಯವರೆಗೂ ಲೇಪಿಸಿ. ಒಂದು ಗಂಟೆ ಬಳಿಕ ಸೌಮ್ಯ ಶಾಂಪೂವಿನಿಂದ ಹೇರ್ ವಾಶ್ ಮಾಡಿದರೆ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.