ಒಂದು ವೇಳೆ ಬೇಯಿಸಿದ ಅನ್ನದ ಪ್ರಮಾಣ ಜಾಸ್ತಿ ಆಯಿತು ಎಂದಾದರೆ ಅದನ್ನು ಫ್ರಿಜ್ ನಲ್ಲಿಡುವುದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ನಡೆಯುತ್ತದೆ.
ಯಾವ ಋತುವೇ ಆಗಿರಲಿ ಅನ್ನ ಸೇವಿಸುವ ಮಜವೇ ಬೇರೆ. ಚಪಾತಿ, ರೊಟ್ಟಿ ಏನನ್ನು ಬೇಕಾದರೂ ತಿನ್ನಬಹುದು. ಆದರೆ, ಒಂದೆರಡು ತುತ್ತು ಅನ್ನ ತಿಂದಿಲ್ಲ ಎಂದಾದರೆ ಭೋಜನ ಪೂರ್ಣ ಅಲ್ಲ ಅನ್ನಿಸುತ್ತದೆ.
ಒಂದು ವೇಳೆ ಬೇಯಿಸಿದ ಅನ್ನದ ಪ್ರಮಾಣ ಜಾಸ್ತಿ ಆಯಿತು ಎಂದಾದರೆ ಅದನ್ನು ಫ್ರಿಜ್ ನಲ್ಲಿಡುತ್ತೇವೆ. ಮತ್ತೆ ಅದನ್ನು ಬಳಸಬಹುದು ಎನ್ನುವ ಇರಾದೆಯಿಂದ ಅನ್ನವನ್ನು ಫ್ರಿಜ್ ನಲ್ಲಿಡುತ್ತೇವೆ.
ಉಳಿದಿರುವ ಅನ್ನವನ್ನು ಫ್ರಿಜ್ ನಲ್ಲಿ ಇಡುವುದಾದರೆ 3 ರಿಂದ 5 ದಿನಗಳವರೆಗೆ ಇಟ್ಟು ತಿನ್ನಬಹುದು. ಆದರೆ, ಇಲ್ಲಿ ನೆನಪಿಡಬೇಕಾದ ಅಂಶ ಎಂದರೆ ಅನ್ನವನ್ನು ಬೇಯಿಸಿದ 24 ಗಂಟೆಯ ಒಳಗೆ ಫ್ರಿಜ್ ನಲ್ಲಿ ಇಡಬೇಕು.
ಫ್ರಿಜ್ ನಲ್ಲಿ ಅನ್ನವನ್ನು ಇಡುವ ಮೊದಲು ಅದನ್ನು ಸಂಪೂರ್ಣವಾಗಿ ತಣ್ಣಗೆ ಮಾಡಿಕೊಳ್ಳಬೇಕು. ಇಲ್ಲವಾದರೆ ಅದರಲ್ಲಿ ಬ್ಯಾಕ್ಟೀರಿಯಾ ಬೆಳೆಯುವ ಅಪಾಯ ಇರುತ್ತದೆ.
ಫ್ರಿಜ್ ನಿಂದ ಹೊರಗೆ ತೆಗೆಯುತ್ತಿದ್ದಂತೆ ತಕ್ಷಣ ಬಿಸಿ ಮಾಡಿ ಈ ಅನ್ನವನ್ನು ಸೇವಿಸಬೇಕು.
ಸೂಚನೆ : ಈ ಮೇಲಿನ ಲೇಖನವನ್ನು ಸಾಮಾನ್ಯ ಮಾಹಿತಿ ಆಧಾರದಲ್ಲಿ ಬರೆಯಲಾಗಿದೆ. ಇದನ್ನು ಜೀ ನ್ಯೂಸ್ ಅನುಮೋದಿಸುವುದಿಲ್ಲ.