Diabetics and alcohol : ಮುಖ್ಯವಾದ ವಿಚಾರ ಅಂದ್ರೆ.. ಮಧುಮೇಹಿಗಳು ಮದ್ಯಪಾನ ಮಾಡಬಾರದು. ಸ್ವಲ್ಪ ಮದ್ಯ ಸೇವನೆ ಒಳ್ಳೆಯದು. ಆದರೆ ನೆನಪಿಟ್ಟುಕೊಳ್ಳಿ.. ಮಧುಮೇಹ ಇದ್ದರೂ ಇಲ್ಲದಿದ್ದರೆ, ಮದ್ಯಪಾನ ಮಾಡಿದರೆ ಅದು ನಿಮ್ಮ ದೇಹಕ್ಕೆ ಹಾನಿಕಾರಕವಾಗಿದೆ... ಎಷ್ಟು ಹೇಳಿದರೂ ಬಿಡಲ್ಲ ಎನ್ನುವವರು ಈ ಸುದ್ದಿ ಓದಿ..
ಮದ್ಯಪಾನ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೂ ನಿಮಗೆ ಎಣ್ಣೆ ಹೊಡೆಯುವ ಅಭ್ಯಾಸವಿದ್ದರೆ ವೈದ್ಯಕೀಯವಾಗಿ ಎಷ್ಟು ಪ್ರಮಾಣದ ಆಲ್ಕೋಹಾಲ್ ತೆಗೆದುಕೊಳ್ಳಬಹುದು ಎಂಬುದನ್ನು ನೀವು ತಿಳಿದಿರಬೇಕು. ಒಂದು ಸಣ್ಣ ಪ್ರಮಾಣದ ವಿಸ್ಕಿ, ರಮ್, ವೋಡ್ಕಾ ಅಥವಾ ಜಿನ್, ಒಂದು ಗ್ಲಾಸ್ ಬಿಯರ್ ಅಥವಾ ವೈನ್ ಅನ್ನು ಒಂದು ಘಟಕವಾಗಿ ಎಣಿಕೆ ಮಾಡಲಾಗುತ್ತದೆ.
ವಾರದ ಒಂದು ದಿನದಲ್ಲಿ ಸಂಪೂರ್ಣ ಕೋಟಾವನ್ನು ಕುಡಿಯುವುದಕ್ಕಿಂತ ವಾರವಿಡೀ ಗ್ಯಾಪ್ ನೀಡಿ ಕುಡಿಯುವುದು ಉತ್ತಮ. ಸಿಹಿ ವೈನ್ ಅಥವಾ ಶೆರ್ರಿ ಸಕ್ಕರೆಯಲ್ಲಿ ಅಧಿಕವಾಗಿರುತ್ತದೆ ಆದ್ದರಿಂದ ಅವುಗಳನ್ನು ತಪ್ಪಿಸುವುದು ಉತ್ತಮ. ಅಂದಹಾಗೆ.. ಪುರುಷರು ವಾರಕ್ಕೆ 14 ಮಹಿಳೆಯರಿಗೆ 21 ಯೂನಿಟ್ ಮದ್ಯ ಕುಡಿಯಬಹುದು.. ಹೆಚ್ಚಾಗಬಾರದು ಅಷ್ಟೇ..
ಸಾಮಾನ್ಯವಾಗಿ ನಾವು ಕುಡಿಯುವಾಗ ನಾವು ಏನು ತಿನ್ನುತ್ತೇವೆ ಎಂದು ನಮಗೆ ತಿಳಿದಿರುವುದಿಲ್ಲ. ಅಧಿಕ ಕೊಬ್ಬು ಅಥವಾ ಹೆಚ್ಚಿನ ಕ್ಯಾಲೋರಿ ಹೊಂದಿರುವ ಪಕೋಡಿಗಳನ್ನು ಎಣ್ಣೆಯೊಂದಿಗೆ ಸೇವಿಸಿದರೆ, ಹೆಚ್ಚಿನ ಕ್ಯಾಲೋರಿಗಳು ದೇಹವನ್ನು ಸೇರುತ್ತವೆ.. ಆದ್ದರಿಂದ ಮದ್ಯ ಸೇವನೆ ಮಾಡುವಾಗ ತರಕಾರಿ ಸಲಾಡ್ ತಿನ್ನಿ..
ಮದ್ಯ ಸೇವನೆ ನಂತರ ಊಟವನ್ನು ಮರೆಯಬೇಡಿ.. ಇಲ್ಲದಿದ್ದರೆ ಕಡಿಮೆ ಸಕ್ಕರೆ ಮಟ್ಟವನ್ನು ತಲುಪಬಹುದು. ನೀವು ಹೆಚ್ಚು ಕುಡಿಯುತ್ತಿದ್ದರೆ, ಸಕ್ಕರೆ ಪರೀಕ್ಷೆ ಮಾಡಿಕೊಳ್ಳಿ.. ಏಕೆಂದರೆ ನಿಮಗೆ ಹೈಪೊಗ್ಲಿಸಿಮಿಯಾ ಇರಬಹುದು. ಎಲ್ಲಕ್ಕಿಂತ ಹೆಚ್ಚಾಗಿ, ಆದಷ್ಟು ಕುಡಿತವನ್ನು ಬಿಟ್ಟು ಬಿಡಿ..
ಎಣ್ಣೆಯ ಜೊತೆ ಧೂಮಪಾನ ಬೇಡ.. ಏಕೆಂದರೆ ಇದು ಇನ್ಸುಲಿನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಅದನ್ನು ಬಿಡಬೇಕು. ಧೂಮಪಾನವು ಹೃದಯ ಮತ್ತು ಶ್ವಾಸಕೋಶಗಳಿಗೆ ಅಪಾಯಕಾರಿ. ಸಿಗರೇಟ್ ಸೇವನೆ ವಿವಿಧ ಅಂಗಗಳಲ್ಲಿ ಕ್ಯಾನ್ಸರ್ ಉಂಟುಮಾಡುವ ಅಪಾಯಕಾರಿ ಅಂಶವಾಗಿದೆ.