Life Successful tips : ಜೀವನದಲ್ಲಿ ಯಶಸ್ವಿಯಾಗಲು ಗರುಡ ಪುರಾಣದಲ್ಲಿ ಹಲವಾರು ವಿಚಾರಗಳನ್ನು ಬರೆಯಲಾಗಿದೆ. ನಾವು ನಮ್ಮ ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ ಕೆಲವೊಂದಿಷ್ಟು ಸ್ವಭಾವವುಳ್ಳ ಜನರ ಸಹವಾಸವನ್ನು ಬಿಡಬೇಕಾಗುತ್ತದೆ.. ಇಲ್ಲದಿದ್ದರೆ ಅದು ನಮ್ಮ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ನಾವು ಬದುಕುವ ಜೀವನವು ತುಂಬಾ ಆಸಕ್ತಿದಾಯಕವಾಗಿರಬೇಕು.. ನಮ್ಮ ಜೀವನದಲ್ಲಿ ಪ್ರತಿದಿನ ಮತ್ತು ಪ್ರತಿ ನಿಮಿಷ ಏನಾಗಲಿದೆ ಎಂದು ನಾವು ಊಹಿಸಲು ಸಾಧ್ಯವಿಲ್ಲ. ಹಣ, ಸಂಪತ್ತು ಮತ್ತು ಜೀವನ ಸೇರಿದಂತೆ ಯಾವುದು ಯಾವಾಗ ಬದಲಾಗುತ್ತದೆ ಎಂದು ನಮಗೆ ತಿಳಿದಿಲ್ಲ. ಅದೇ ರೀತಿಯಲ್ಲಿ, 18 ಮಹಾ ಪುರಾಣಗಳಲ್ಲಿ ಒಂದಾದ ಗರುಡ ಪುರಾಣವು ಜೀವನದಲ್ಲಿ ಕೆಲವು ಜನರೊಂದಿಗೆ ಸ್ನೇಹ ಬೆಳಸಬಾರದು ಅಂತ ಹೇಳುತ್ತದೆ. ಅವು ಯಾವುವು..? ಬನ್ನಿ ನೋಡೋಣ..
ಅದೃಷ್ಟ ನಂಬುವವರು : ಕೆಲವೊಂದಿಷ್ಟು ಜನರು ಅದೃಷ್ಟದಲ್ಲಿ ನಂಬಿಕೆ ಇಡುತ್ತಾರೆ.. ಅಂತಹವರು ಕಠಿಣ ಪರಿಶ್ರಮವನ್ನು ನಂಬುವುದಿಲ್ಲ. ಅದೃಷ್ಟ ಬಂದಾಗ ಎಲ್ಲವೂ ಬದಲಾಗುತ್ತೆ ಅಂತ ಶ್ರಮವಹಿಸದೇ ಕುಳಿತುಕೊಂಡಿರುತ್ತಾರೆ. ನಾವು ಅಂತಹವರಿಂದ ದೂರವಿರಬೇಕು. ಯಾವ ಜನರಿಗೆ ಕಠಿಣ ಪರಿಶ್ರಮದ ಮಹತ್ವ ಗೊತ್ತಿಲ್ಲ ಅಂತಹವರ ಜೊತೆ ಇರಬೇಡಿ..
ನಕಾರಾತ್ಮಕ ಆಲೋಚನೆಗಳು : ಜೀವನವು ಸಂತೋಷ ಮತ್ತು ದುಃಖದಿಂದ ತುಂಬಿರುತ್ತದೆ. ಅದಕ್ಕೆ ಯಾವಾಗಲು ಸಕಾರಾತ್ಮಕವಾಗಿ ಯೋಚಿಸಲು ಪ್ರಯತ್ನಿಸಿ. ನಕಾರಾತ್ಮಕ ಆಲೋಚನೆಗಳನ್ನು ಹೊಂದಿರುವ ಜನರಿಂದ ಸಾಧ್ಯವಾದಷ್ಟು ದೂರವಿರಿ. ಅವರ ನಕಾರಾತ್ಮಕ ಆಲೋಚನೆಗಳು ನಿಮ್ಮನ್ನ ಯಶಸ್ಸಿಗೆ ಅಡ್ಡಿಯಾಗುವುದಂತು ನಿಜ.
ಅಹಂಕಾರ : ಅಹಂಕಾರವು ಮಾನವನ ಭಾವನೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕೆಲವರು ಎಲ್ಲದರಲ್ಲೂ ತಮ್ಮ ಅಹಂಕಾರವನ್ನು ತೋರಿಸಲು ಇಷ್ಟಪಡುತ್ತಾರೆ. ಅಹಂಕಾರವು ಇತರರಿಗಿಂತ ತಮ್ಮನ್ನು ತಾವು ಉತ್ತಮರೆಂದು ತೋರಿಸಿಕೊಳ್ಳುವ ಒಂದು ಅಸ್ತ್ರ. ಅಂತಹ ಜನರು ತಮ್ಮ ಅಹಂಕಾರವನ್ನು ಪೂರೈಸಲು ಇತರರನ್ನು ನೋಯಿಸಲು ಹಿಂಜರಿಯುವುದಿಲ್ಲ.
ನಿಷ್ಪ್ರಯೋಜಕ ಸಲಹೆಗಾರರು : ನಾವು ಒಂದು ವಿಷಯದ ಬಗ್ಗೆ ನಿರ್ಧರಿಸಲು ಸಾಧ್ಯವಾಗದಿದ್ದಾಗ, ಇತರರ ಹತ್ತಿರ ಸಲಹೆಗಳನ್ನು ಕೇಳುತ್ತೇವೆ. ಅವರಲ್ಲಿ ಕೆಲವರು ನಿಷ್ಪ್ರಯೋಜಕ ಸಲಹೆ ನೀಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಇದರಿಂದ ನಿಮ್ಮ ಸಮಯ ವ್ಯರ್ಥವಾಗುತ್ತದೆ. ಅಂತಹ ಜನರೊಂದಿಗೆ ಸ್ನೇಹ ಸಮಯ ವ್ಯರ್ಥ.
ಸೋಮಾರಿಗಳು : ಸೋಮಾರಿಗಳಿಂದ ದೂರವಿರಿ. ಸೋಮಾರಿ ಜೀವನ ನಡೆಸುವವರು ತಮ್ಮ ವೈಫಲ್ಯಗಳಿಗೆ ತಾವೇ ಜವಾಬ್ದಾರರಾಗಿರುತ್ತಾರೆ. ಆದರೆ ಸೋಮಾರಿ ವ್ಯಕ್ತಿ ಯಾವಾಗಲೂ ತನ್ನ ವೈಫಲ್ಯಗಳಿಗೆ ವಿಧಿಯನ್ನು ಅಥವಾ ಬೇರೆಯವರನ್ನು ದೂಷಿಸುತ್ತಾನೆ. ತಮ್ಮ ನ್ಯೂನತೆಗಳ ಬಗ್ಗೆ ಎಂದಿಗೂ ಚಿಂತಿಸುವುದಿಲ್ಲ.