ನೌಕರರ ಪಿಂಚಣಿ ಯೋಜನೆ (ಇಪಿಎಸ್) ಅನ್ನು 1995 ರಲ್ಲಿ ಪ್ರಾರಂಭಿಸಲಾಯಿತು. ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಸದಸ್ಯರು ಈ ಯೋಜನೆಯ ಲಾಭವನ್ನು ಪಡೆಯಬಹುದು. ಈ ಯೋಜನೆಯು ನಿವೃತ್ತಿಯ ನಂತರ ಉದ್ಯೋಗಿಗಳಿಗೆ ಆರ್ಥಿಕ ಭದ್ರತೆಯನ್ನು ನೀಡುತ್ತದೆ. ಇಪಿಎಫ್ ಮೂಲಕ ಪಿಂಚಣಿ ಪಡೆಯಲು ಕೆಲವು ನಿಯಮಗಳಿವೆ.
1/8ಪ್ರತಿ ಉದ್ಯೋಗಿ ಮತ್ತು ಅವನ ಉದ್ಯೋಗದಾತ ಮೂಲ ವೇತನದ ಶೇಕಡಾ 12 ರಷ್ಟು ಹಣವನ್ನು ಇಪಿಎಫ್‌ಗೆ ಪಾವತಿಸಬಹುದು. ಈ 12 ಪ್ರತಿಶತದಷ್ಟು ಮೊತ್ತದಲ್ಲಿ 8.33 ಪ್ರತಿಶತ ಇಪಿಎಸ್‌ಗೆ ಹೋಗಿ ಉಳಿದ 3.67 ಪ್ರತಿಶತ ನೌಕರರ ಇಪಿಎಫ್ ಖಾತೆಗೆ ಹೋಗುತ್ತದೆ.
2/8EPFO ಸದಸ್ಯರಾಗಿರುವ ಉದ್ಯೋಗಿ ಕನಿಷ್ಠ 10 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ್ದು, ಅವರಿಗೆ 58 ವರ್ಷ ವಯಸ್ಸಾಗಿದ್ದರೆ ಪಿಂಚಣಿ ಪಡೆಯಲು ಅರ್ಹರಾಗುತ್ತಾರೆ.
3/8ಇಪಿಎಫ್ ಸದಸ್ಯ ಪ್ರಸ್ತುತ ಕನಿಷ್ಠ 1,000 ರೂಪಾಯಿ ಮಾಸಿಕ ಪಿಂಚಣಿ ಪಡೆಯುತ್ತಾನೆ. ಆದರೆ ಇದನ್ನು ಹೆಚ್ಚಿಸಬೇಕು ಎನ್ನುವ ಬೇಡಿಕೆ ಬಹಳ ಕಾಲದಿಂದ ಕೇಳುತ್ತಲೇ ಬಂದಿದೆ.
4/8ಒಂದು ತಿಂಗಳಲ್ಲಿ ಅನುಮತಿಸಲಾದ ಗರಿಷ್ಠ ಇಪಿಎಸ್ ಕೊಡುಗೆ 1,250 ರೂ. ಆಗಿದ್ದು, ಇದು ವರ್ಷಕ್ಕೆ 15,000 ಕ್ಕೆ ಸಮಾನವಾಗಿರುತ್ತದೆ. ಅಂದರೆ ಪಿಂಚಣಿ ಲೆಕ್ಕಾಚಾರ ಮಾಡಲು ಗರಿಷ್ಠ ಪಿಂಚಣಿ ಪಡೆಯಬಹುದಾದ ವೇತನ 15,000 ರೂ. ಆಗಿದೆ.
5/8ಒಬ್ಬ ವ್ಯಕ್ತಿಯ ಮೂಲ ವೇತನ ಮತ್ತು ಡಿಎಯ ಶೇಕಡಾ 8.33 ಅಂದರೆ 6,000 ರೂ.ಗಳಾಗಿದ್ದರೆ, ಕೇವಲ 1,250 ರೂ.ಗಳು ಮಾತ್ರ ಉದ್ಯೋಗಿಯ ಇಪಿಎಸ್ ಖಾತೆಗೆ ಹೋಗುತ್ತವೆ. ಉಳಿದ 4,750 ರೂ.ಗಳು ಉದ್ಯೋಗಿಯ ಇಪಿಎಫ್ ಖಾತೆಗೆ ಹೋಗುತ್ತವೆ. ಅದರ ಮೇಲೆ ಚಾಲ್ತಿಯಲ್ಲಿರುವ ದರಗಳ ಪ್ರಕಾರ ಬಡ್ಡಿ ಸಿಗುತ್ತದೆ. ಇಪಿಎಸ್ ಮೊತ್ತದ ಮೇಲೆ ಯಾವುದೇ ಬಡ್ಡಿ ಇರುವುದಿಲ್ಲ.
6/8ಈಗ ಪಿಂಚಣಿ ಲೆಕ್ಕಾಚಾರ ಹೇಗೆ ಎಂದು ನೋಡುವುದಾದರೆ (ಪಿಂಚಣಿ ವೇತನ x ಪಿಂಚಣಿ ಸೇವೆ)/70 ಪಿಂಚಣಿ ವೇತನ: ರೂ 15,000 (ಸ್ಥಿರ) ಸೇವಾ ವರ್ಷಗಳು: 25 ಅಂದಾಜು ಮಾಸಿಕ ಇಪಿಎಸ್ ಪಿಂಚಣಿ: ರೂ 5,357.14
7/8ಪಿಂಚಣಿ ಪಡೆಯುವ ವೇತನ: ರೂ 15,000 (ಸ್ಥಿರ) ಸೇವಾ ವರ್ಷಗಳು: 35 ಅಥವಾ ಅದಕ್ಕಿಂತ ಹೆಚ್ಚಾಗಿದ್ದಾಗ ಸಿಗುವ ಗರಿಷ್ಟ ಪಿಂಚಣಿ ಮೊತ್ತ ಪ್ರತಿ ತಿಂಗಳಿಗೆ 7,500 ರೂ. ಆಗುತ್ತದೆ.
8/8ಗಮನಿಸಿ, ಗರಿಷ್ಠ ಪಿಂಚಣಿ ವೇತನವನ್ನು 15,000 ರೂ.ಗಳಿಗೆ ನಿಗದಿಪಡಿಸಲಾಗಿದೆ. ಮತ್ತು ಗರಿಷ್ಠ ಪಿಂಚಣಿ ಸೇವಾ ವರ್ಷಗಳನ್ನು ಸಹ 35 ಕ್ಕೆ ನಿಗದಿಪಡಿಸಲಾಗಿದೆ.