ನಿಮ್ಮ ಮನೆಗೆ ಹಾವು ನುಗ್ಗಿದರೆ ಗಾಬರಿಯಾಗಬೇಡಿ.. ಜಸ್ಟ್‌ ಈ ಸಲಹೆಗಳನ್ನು ಪಾಲಿಸಿದರೆ ಸಾಕು..! ತಾವಾಗಿಯೇ ಮನೆ ಬಿಡುತ್ತವೆ..

Snake Prevention tips : ಪ್ರಾಣಿಶಾಸ್ತ್ರ ತಜ್ಞರು ಹೇಳುವಂತೆ ಹಾವುಗಳನ್ನು ಕಂಡರೆ ಮನುಷ್ಯರಿಗೆ ಎಷ್ಟು ಭಯವೋ.. ಅಷ್ಟೇ ಭಯ ಅವುಗಳಿಗೂ ಇರುತ್ತದೆ... ಹಾವುಗಳು ಕೆಲವು ನಿರ್ದಿಷ್ಟ ವಾಸನೆಗಳಿಗೆ ತುಂಬಾ ಹೆದರುತ್ತವೆ ಎಂದು ಹೇಳಲಾಗುತ್ತದೆ. ಆ ರೀತಿಯ ವಾಸನೆ ಬಂದಾಗ ಅವುಗಳು ಅಲ್ಲಿಂದ ಓಡಿಹೋಗುತ್ತವೆ. ಆದ್ದರಿಂದ, ಅನಿರೀಕ್ಷಿತವಾಗಿ ಹಾವು ನಿಮ್ಮ ಮನೆಗೆ ಪ್ರವೇಶಿಸಿದರೆ, ಅದನ್ನು ಕೊಲ್ಲುವ ಬದಲು, ಈ ಕೆಳಗೆ ನೀಡಿದ ಕೆಲವು ಸರಳ ಟಿಪ್ಸ್‌ಗಳನ್ನು ಅನುಸರಿಸಿರಿ.. 

1 /6

ನಮ್ಮ ದೇಶದಲ್ಲಿ ಹಾವುಗಳನ್ನು ಧಾರ್ಮಿಕವಾಗಿ ಪೂಜಿಸಲಾಗುತ್ತದೆ. ನಾಗ ಪಂಚಮಿಯಂದು ಕಲ್ಲಿನ ಹಾವುಗಳ ಮೇಲೆ ಹಾಲು ಸುರಿದು ಪೂಜಿಸಲಾಗುತ್ತದೆ. ಆದರೆ, ನಿಜವಾದ ಹಾವು ಬಂದರೆ ಅಲ್ಲಿಂದ ಓಡಿ ಹೋಗುತ್ತಾರೆ.. ಹಾವುಗಳೆಂದರೆ ಅಷ್ಟು ಭಯ ಜನರಿಗೆ.

2 /6

ಹಾವುಗಳು ಸಾಮಾನ್ಯವಾಗಿ ಯಾರಿಗೂ ಹಾನಿ ಮಾಡುವುದಿಲ್ಲ. ಆದರೆ ತಮ್ಮ ಜೀವಕ್ಕೆ ಅಪಾಯವಿದೆ ಎಂದು ತಿಳಿದರೆ, ಅವು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕಚ್ಚುತ್ತವೆ.. ಅದಕ್ಕಾಗಿಯೇ ಹಾವುಗಳನ್ನು ಅಪಾಯಕಾರಿ ಎಂದು ಕರೆಯಲಾಗುತ್ತದೆ. ಹಾವುಗಳು ಕೆಲವು ವಾಸನೆಗಳಿಗೆ ಹೆದರುತ್ತವೆ.. ತಕ್ಷಣವೇ ಅಲ್ಲಿಂದ ಓಡಿಹೋಗುತ್ತವೆ ಎಂದು ಹೇಳಲಾಗುತ್ತದೆ.

3 /6

ತಜ್ಞರ ಪ್ರಕಾರ, ಹಾವು ಮನೆಯೊಳಗೆ ಪ್ರವೇಶಿಸಿದರೆ, ಅದನ್ನು ಒಂಟಿಯಾಗಿ ಬಿಡಬೇಕು. ಅದು ನಿಧಾನವಾಗಿ ತನ್ನಿಂದ ತಾನೇ ಮಾಯವಾಗುತ್ತದೆ. ಹಾವುಗಳು ದೀರ್ಘಕಾಲದವರೆಗೆ ಹೋಗದಿದ್ದರೆ, ತಕ್ಷಣ ಹಾವು ಹಿಡಿಯುವವರಿಗೆ ತಿಳಿಸಲು ಹೇಳಲಾಗುತ್ತದೆ.

4 /6

ಭೂಮಿಯ ಮೇಲಿನ ಯಾವುದೇ ಹಾವುಗಳಿಗೆ ಕಿವಿಗಳಿಲ್ಲ. ಆದರೂ, ಅವುಗಳು ದೊಡ್ಡ ಶಬ್ದಗಳಿಗೆ ತುಂಬಾ ಹೆದರುತ್ತವೆ. ಅವರ ದೇಹದ ರಚನೆಯೇ ಹಾಗೆ. ಸಂಶೋಧನೆಯ ಪ್ರಕಾರ, ಈ ದೇಹದ ರಚನೆಯು ಪರಭಕ್ಷಕಗಳಿಂದ ತಪ್ಪಿಸಿಕೊಳ್ಳುವ ಮೂಲಕ ಅವು ಬದುಕಲು ಸಹಾಯ ಮಾಡುತ್ತದೆ. ಹಾಗಾಗಿ ಒಂದು ಹಾವು ಇದ್ದಕ್ಕಿದ್ದಂತೆ ತನ್ನ ಸುತ್ತಲೂ ದೊಡ್ಡ ಶಬ್ದ ಕೇಳಿದರೆ, ಅದು ಸುರಕ್ಷಿತ ಸ್ಥಳಕ್ಕೆ ಓಡಲು ಪ್ರಾರಂಭಿಸುತ್ತದೆ.

5 /6

ಹಾವುಗಳು ಕೂಡ ಬಲವಾದ ವಾಸನೆಗಳಿಗೆ ತುಂಬಾ ಹೆದರುತ್ತವೆ. ಹಾಗಾಗಿ ನಿಮ್ಮ ಮನೆಗೆ ಹಾವು ಪ್ರವೇಶಿಸಿದರೆ, ಮನೆಯ ಸುತ್ತಲೂ ಫಿನಾಯಿಲ್, ವಿನೆಗರ್ ಅಥವಾ ಸೀಮೆಎಣ್ಣೆಯನ್ನು ಸಿಂಪಡಿಸಿ. ಹೆಚ್ಚುವರಿಯಾಗಿ, ನೀವು ಬೆಳ್ಳುಳ್ಳಿ, ನಿಂಬೆ, ದಾಲ್ಚಿನ್ನಿ ಮತ್ತು ಪುದೀನವನ್ನು ಸಿಂಪಡಿಸಬಹುದು. ಹೀಗೆ ಮಾಡಿದರೂ ಹಾವುಗಳು ಓಡಿಹೋಗುತ್ತವೆ.

6 /6

ಅಲ್ಲದೆ, ಹಾವುಗಳು ತಾಪಮಾನದಲ್ಲಿನ ಬದಲಾವಣೆಗಳಿಗೆ ಹೆದರುತ್ತವೆ. ಹೊಗೆಗೆ ಹಾವುಗಳು ಸಹ ಓಡಿಹೋಗುತ್ತವೆ ಎಂದು ಹೇಳಲಾಗುತ್ತದೆ. ಒಂದು ವೇಳೆ ಹಾವು ಮನೆಯೊಳಗೆ ಪ್ರವೇಶಿಸಿದರೆ, ಅದನ್ನು ಹೊಗೆಯಿಂದಲೂ ಓಡಿಸಬಹುದು..