ಚಿನ್ನದ ಬೆಲೆ ಗಗನಕ್ಕೇರಿದ್ರೂ ಕಡಿಮೆಯಾಗಿಲ್ಲ ಬೇಡಿಕೆ! ಆಭರಣ ಖರೀದಿ ಈ ರೀತಿ ಮಾಡಿದ್ರೆ ಭಾರೀ ಲಾಭ, ಊಹೆಗೂ ಮೀರಿ ಉಳಿತಾಯ

how to make a profit by buying gold : ಭಾರತೀಯರಿಗಿರುವ ಚಿನ್ನದ ವ್ಯಾಮೋಹದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಇತ್ತೀಚೆಗೆ ಆಭರಣದ ಬೆಲೆ ದಾಖಲೆಯ ಮಟ್ಟಕ್ಕೆ ಏರಿಕೆಯಾದರೂ ಚಿನ್ನದಂಗಡಿಗೆ ಮುಗಿಬೀಳುತ್ತಿರುವ ಜನರಿಗೇನೂ ಕಡಿಮೆ ಇಲ್ಲ. ಈ ನಡುವೆ ಆಭರಣದ ದರ ದಿನೇ ದಿನೇ ಹೆಚ್ಚುತ್ತಿದ್ದರೂ ಬೇಡಿಕೆ ಕಡಿಮೆಯಾಗಿಲ್ಲ. ಇದರ ಹಂದಿನ ಕಾರಣವೇನಿರಬಹುದು ಎಂಬುವುದಕ್ಕೆ ಉತ್ತರ ಇಲ್ಲಿದೆ.
 

1 /5

how to make a profit by buying gold : ಭಾರತೀಯರು ಈಗ ಅಮೂಲ್ಯ ಆಭರಣಗಳನ್ನು ಖರೀದಿಸುತ್ತಿದ್ದಾರೆ. 10 ಗ್ರಾಂಗೆ ಸುಮಾರು 1.26 ಲಕ್ಷ ರೂ. ತಲುಪಿದ ನಂತರವೂ ಚಿನ್ನದ ಬೆಲೆ ಕಡಿಮೆಯಾಗಿಲ್ಲ. ಭಾರತದ ಪ್ರಮುಖ ಬ್ರ್ಯಾಂಡ್‌ ಆಭರಣ ವ್ಯಾಪಾರಿಗಳು ಉತ್ತಮ ಲಾಭವನ್ನು ದಾಖಲಿಸುತ್ತಿದ್ದಾರೆ.   

2 /5

ಭಾರತೀಯ ಆಭರಣ ಖರೀದಿದಾರರು ತಮ್ಮ ಆದ್ಯತೆಗಳನ್ನು ಬದಲಾಯಿಸುತ್ತಿದ್ದಾರೆ. ಅವರು ವೆಚ್ಚವನ್ನು ಕಡಿತಗೊಳಿಸಲು ನೋಡುತ್ತಿಲ್ಲ. ಏಕೆಂದರೆ ಅವರು ಭಾರತೀಯ ಚಿನ್ನದ ಮಾರುಕಟ್ಟೆಯ ಬದಲಾವಣೆಗಳನ್ನು ಗಮನಿಸಿದ ಹೂಡಿಕೆದಾದರರು ಬೆಲೆ ಹೆಚ್ಚಾಗುತ್ತಿರುವುದು ಮುಂದುವರೆಯುತ್ತಿದ್ದು, ಒಂದು ವೇಳೆ ಹೆಚ್ಚಿನ ದರಕ್ಕೆ ಚಿನ್ನವನ್ನೂ ಖರೀದಿಸಿದರೂ ಸಹ ಭವಿಷ್ಯದಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ ಇರುವ ಸಾದ್ಯತೆ ಇರಬಹುದೇನೋ ಎಂಬ ಯೋಚನೆಯಲ್ಲಿ ಅವರು ಲಾಭವಾಗುವುದರ ಕುರಿತು ನಿರೀಕ್ಷೆಯಲ್ಲಿದ್ದಾರೆ.  

3 /5

ಭಾರತದಲ್ಲಿ ಚಿನ್ನವನ್ನು ಒಂದು ಸಂಪ್ರದಾಯ ಮತ್ತು ಸಾಂಸ್ಕೃತಿಕ ಮಹತ್ವದ ವಸ್ತುವಾಗಿ ನೋಡಲಾಗುತ್ತದೆ. ಆಭರಣಗಳಷ್ಟೇ ಅಲ್ಲದೆ ಹೂಡಿಕೆಯ ಉದ್ದೇಶಕ್ಕೂ ಚಿನ್ನವನ್ನು ಖರೀದಿಸಲಾಗುತ್ತದೆ. ಹಣದುಬ್ಬರ ಮತ್ತು ಅಂತರರಾಷ್ಟ್ರೀಯ ಆರ್ಥಿಕ ಪರಿಸ್ಥಿತಿಯ ಅನಿಶ್ಚಿತತೆಗಳು ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ಆಕರ್ಷಿಸುತ್ತವೆ.  

4 /5

ಹಲವಾರು ವರ್ಷಗಳಲ್ಲಿ ಚಿನ್ನವು ಉತ್ತಮ ಆದಾಯವನ್ನು ನೀಡಿದೆ, ಇದು ಹೂಡಿಕೆದಾರರನ್ನು ಆಕರ್ಷಿಸುತ್ತದೆ. ಆದ್ದರಿಂದ ಚಿನ್ನದ ಬೆಲೆ ಹೆಚ್ಚಾಗಿದ್ದರೂ, ದೀರ್ಘಾವಧಿ ಹೂಡಿಕೆಯಾಗಿ ಅದನ್ನು ಖರೀದಿಸಲಾಗುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯ ಕುಸಿತ ಕಂಡರೆ, ಚಿನ್ನದ ಬೆಲೆ ಏರಿಕೆಯಾಗುತ್ತದೆ. ಅಮೆರಿಕ-ಭಾರತ ವ್ಯಾಪಾರ ಒಪ್ಪಂದಗಳ ಅನಿಶ್ಚಿತತೆಗಳು ಸಹ ಇದೇ ರೀತಿಯ ಪರಿಣಾಮವನ್ನು ಬೀರುತ್ತವೆ.   

5 /5

ಒಂದೇ ಬಾರಿಗೆ ದೊಡ್ಡ ಮೊತ್ತವನ್ನು ಹೂಡಿಕೆ ಮಾಡುವ ಬದಲು, ಬೆಲೆ ಸ್ವಲ್ಪ ಕಡಿಮೆಯಾದಾಗ ಹಂತ ಹಂತವಾಗಿ ಖರೀದಿಸುವುದನ್ನು ತಜ್ಞರು ಸಲಹೆ ನೀಡುತ್ತಾರೆ. ನಿಮ್ಮ ಹೂಡಿಕೆ ಪಟ್ಟಿಯಲ್ಲಿ ಶೇಕಡಾ 10-15 ರಷ್ಟು ಭಾಗವನ್ನು ಮಾತ್ರ ಚಿನ್ನಕ್ಕೆ ಮೀಸಲಿಡುವುದು ಉತ್ತಮ.