ಬಂಗಾರದ ಬೆಲೆಯಲ್ಲಿ 19,100 ರೂಪಾಯಿ ಇಳಿಕೆ !ಆಗಸ್ಟ್ 15 ರ ನಂತರ ಮತ್ತೆ ಮಹಾ ಕುಸಿತ ಕಾಣಲಿದೆ ಚಿನ್ನ !ಕಾರಣ ಇದೇ

Written ByRanjitha R K
Published: Aug 13, 2025, 05:41 PM IST|Updated: Aug 13, 2025, 05:41 PM IST

ಈ ವಾರ ನಿರಂತರವಾಗಿ ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಕಳೆದ ನಾಲ್ಕು ದಿನಗಳಿಂದ ಬಂಗಾರದ ಬೆಲೆಯಲ್ಲಿ ಸತತ ಇಳಿಕೆ ಕಾಣುತ್ತಿದೆ.  ಗಗನಕ್ಕೇರಿದ್ದ ಚಿನ್ನದ ಬೆಲೆ ಈ ಮೂಲಕ ಕೊಂಚ ಸಮಾಧಾನ ತಂದಿದೆ. 

 Drop in gold rate 1/6

ಚಿನ್ನ ಬೆಲೆಯಲ್ಲಿ ನಿರಂತರ ಕುಸಿತ

ಹಬ್ಬಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಚಿನ್ನದ ದರದಲ್ಲಿ ಇಳಿಕೆ ಕಂಡು ಬರುತ್ತಿರುವುದು ಮಹಿಳೆಯರಿಗೆ ಸಮಾಧಾನಕರ ಸಂಗತಿ. ಇನ್ನು ಬಂಗಾರದ ಬೆಲೆ ಎಷ್ಟು ಕಡಿಮೆಯಾಗಿದೆ ಎನ್ನುವುದನ್ನು ನೋಡುವುವುದಾದರೆ..   

 Drop in gold rate 2/6

ಚಿನ್ನ ಬೆಲೆಯಲ್ಲಿ ನಿರಂತರ ಕುಸಿತ

ಆಗಸ್ಟ್ 9 ರಿಂದಲೇ ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ.   ಆಗಸ್ಟ್ 9 ರಂದು 2,700 ರೂ.ಗಳಷ್ಟು ಕುಸಿತ ಕಂಡವು.ಆಗಸ್ಟ್ 10 ರಂದು ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆಗಸ್ಟ್ 11 ರಂದು 7,600 ರೂ.ಗಳಷ್ಟು ಇಳಿಕೆಯಾದರೆ ಆಗಸ್ಟ್ 12 ರಂದು 100 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 8,800 ರೂ.ಗಳಷ್ಟು  ಕುಸಿತ ಕಂಡಿತು. 

 Drop in gold rate 3/6

ಚಿನ್ನ ಬೆಲೆಯಲ್ಲಿ ನಿರಂತರ ಕುಸಿತ

ಹೀಗೆ ಒಟ್ಟಾರೆಯಾಗಿ ನೋಡುವುದಾದರೆ 4 ದಿನಗಳಲ್ಲಿ 24 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 19,100 ರೂ.ಗಳಷ್ಟು ಕಡಿಮೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ 1,910 ರೂ.ಗಳಷ್ಟು ಕಡಿಮೆಯಾಗಿದೆ.

 Drop in gold rate 4/6

ಚಿನ್ನ ಬೆಲೆಯಲ್ಲಿ ನಿರಂತರ ಕುಸಿತ

ಪ್ರಸ್ತುತ, 24 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ  1,01,400 ರೂ., 22 ಕ್ಯಾರೆಟ್‌ ದರ 92,950 ರೂ. ಮತ್ತು 18 ಕ್ಯಾರೆಟ್‌ ಬೆಲೆ 76,050 ರೂ.  ಆಗಿದೆ. 

 Drop in gold rate 5/6

ಚಿನ್ನ ಬೆಲೆಯಲ್ಲಿ ನಿರಂತರ ಕುಸಿತ

ಇಂದು ಕೂಡಾ ಚಿನ್ನದ ಬೆಲೆಯಲ್ಲಿ ಅಲ್ಪ ಇಳಿಕೆ ದಾಖಲಾಗಿದೆ. ರಷ್ಯಾ ಮತ್ತು ಉಕ್ರೇನ್ ಯುದ್ದಗಳು ಮುಕ್ತಾಯದಹಂತ ತಲುಪಿದ್ದು ಚಿನ್ನದ ಬೇಡಿಕೆ ಕುಸಿಯುತ್ತಿದೆ. ಬಂಗಾರದ ಬೆಲೆ ಇಳಿಕೆಗೆ ಇದು ಪ್ರಮುಖ ಕಾರಣ . 

 Drop in gold rate 6/6

ಚಿನ್ನ ಬೆಲೆಯಲ್ಲಿ ನಿರಂತರ ಕುಸಿತ

ಜೊತೆಗೆ ಆಗಸ್ಟ್ 15 ರಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ಮುಖಾಮುಖಿಯಾಗಿ ಯುದ್ದ ನಿಲ್ಲಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಈ ಮಾತುಕತೆ ಯಶಸ್ವಿಯಾದರೆ ಚಿನ್ನದ ಬೆಲೆ ಇನ್ನೂ ಕುಸಿತ ಕಾಣಲಿದೆ.