Gold Rate Today: ಗಗನಕ್ಕೇರಿದ ಚಿನ್ನದ ದರ.. 8,200 ರೂಪಾಯಿ ಏರಿಕೆ, 10 ಗ್ರಾಂ ಬಂಗಾರದ ಬೆಲೆ ಎಷ್ಟಾಗಿದೆ ನೋಡಿ!
Gold Rate Today: ಮದುವೆ ಸೀಸನ್ ಆರಂಭವಾಗುತ್ತಿದ್ದಂತೆ ಬಂಗಾರದ ಬೆಲೆ ಗಗನಮುಖಿಯಾಗಿದೆ. ಚಿನ್ನದ ಬೆಲೆಯಲ್ಲಿ ಇಂದು ಭಾರೀ ಏರಿಕೆ ಕಂಡಿದೆ.
ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 72,050 ರೂಪಾಯಿ ಆಗಿದೆ. ನಿನ್ನೆ 22 ಕ್ಯಾರೆಟ್ 10 ಗ್ರಾಂ ಬಂಗಾರದ ದರ 71,300 ರೂಪಾಯಿ ಆಗಿತ್ತು.
999 ಶುದ್ಧತೆಯ 10 ಗ್ರಾಂ ಚಿನ್ನದ ಬೆಲೆಯಲ್ಲಿ 820 ರೂಪಾಯಿ ಏರಿಕೆ ಕಂಡು ಬಂದಿದ್ದು, 78,600 ರೂ.ಗೆ ತಲುಪಿದೆ.
ಕಳೆದ ಕೆಲ ದಿನಗಳ ಹಿಂದೆ ವಾರ ಬಂಗಾರದ ಬೆಲೆ ಪಾತಾಳಕ್ಕೆ ಕುಸಿದಿತ್ತು. ಮದುವೆ ಸೀಸನ್ ನಲ್ಲಿ ಬಂಗಾರದ ಬೆಲೆ ಮತ್ತೆ ಏರಿಕೆಯಾಗಿದೆ.
100 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಸುಮಾರು 8,200 ವರೆಗೂ ಹೆಚ್ಚಾಗಿದೆ. ಇಂದು 10 ಗ್ರಾಂ ಚಿನ್ನದ ಬೆಲೆ 78,600 ರೂಪಾಯಿ ಆಗಿದೆ. ನಿನ್ನೆ 77,780 ರೂಪಾಯಿ ಆಗಿತ್ತು.
ಬೆಳ್ಳಿ ಬೆಲೆಯಲ್ಲಿಯೂ ಪ್ರತಿ ಕೆಜಿಗೆ 4,500 ರೂ.ನಷ್ಟು ಏರಿಕೆ ಆಗಿದ್ದು, ಬೆಳ್ಳಿ ದರ 96,500 ರೂ.ಗೆ ತಲುಪಿದೆ.
ನಿಮ್ಮ ನಗರದ ಬಂಗಾರದ ಇಂದಿನ ನಿಖರವಾದ ಬೆಲೆಯನ್ನು ತಿಳಿಯಲು ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಶನ್‌ನ ಅಧಿಕೃತ ವೆಬ್‌ಸೈಟ್ ibjarates.com ಅನ್ನು ಸಂಪರ್ಕಿಸಬಹುದು.