ಸರ್ಕಾರಿ ನೌಕರರ ತುಟ್ಟಿಭತ್ಯೆಯಲ್ಲಿ ಹೆಚ್ಚಳ !ವೇತನದಲ್ಲಿ ಭಾರೀ ಏರಿಕೆ, ಸಂಭ್ರಮದಲ್ಲಿ ಉದ್ಯೋಗಿಗಳು

Written ByRanjitha R K
Published: May 12, 2025, 10:10 AM IST|Updated: May 12, 2025, 10:37 AM IST

ಸರ್ಕಾರಿ ನೌಕರರಿಗೆ ಒಳ್ಳೆಯ ಸುದ್ದಿ ಇದೆ. ಮಾರ್ಚ್ 2025ರಲ್ಲಿ ಬಿಡುಗಡೆಯಾದ  ಅಂಕಿಅಂಶಗಳ (CPI-IW) ಪ್ರಕಾರ ಈ ಬಾರಿ ತುಟ್ಟಿ ಭತ್ಯೆಯಲ್ಲಿ ಭಾರೀ ಏರಿಕೆಯಾಗಲಿದೆ. ತುಟ್ಟಿಭತ್ಯೆಯಲ್ಲಿ ಏರಿಕೆಯಾಗುತ್ತದೀನ್ದಾದ್ರೆ ಅದು ವೇತನದ ಮೇಲೆ ನೇರ ಪರಿಣಾಮ ಬೀರುತ್ತದೆ. ಅಂದರೆ ವೇತನದಲ್ಲಿಯೂ ಏರಿಕೆ ಕಂಡು ಬರುವುದು.  

ಬೆಂಗಳೂರು : ಲಕ್ಷಾಂತರ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿ ಪಡೆಯುತ್ತಿರುವ ನಮ್ಮ ಹಿರಿಯ ನಾಗರಿಕರ ನಿರೀಕ್ಷೆ ಕೊನೆಯಾಗುವ ಸಮಯ ಬಂದಿದೆ. ಹಣದುಬ್ಬರದಿಂದ ಸ್ವಲ್ಪ ಪರಿಹಾರ ನೀಡುವ ತುಟ್ಟಿ ಭತ್ಯೆ (DA) ಮತ್ತು ತುಟ್ಟಿ ಪರಿಹಾರ (DR ) ಜುಲೈ 2025 ರಿಂದ ಮತ್ತೆ ಹೆಚ್ಚಾಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

DA Hike latest news 1/8

ತುಟ್ಟಿಭತ್ಯೆಯಲ್ಲಿ ಏರಿಕೆ

ಮಾರ್ಚ್ 2025ರ ಇತ್ತೀಚಿನ ಹಣದುಬ್ಬರ ಅಂಕಿಅಂಶಗಳ (CPI-IW) ಪ್ರಕಾರ ಈ ಬಾರಿಯೂ ತುಟ್ಟಿ ಭತ್ಯೆಯಲ್ಲಿ ಉತ್ತಮ ಏರಿಕೆಯಾಗಲಿದೆ. ತುಟ್ಟಿಭತ್ಯೆಯಲ್ಲಿ ಏರಿಕೆ ಕಂಡು ಬಂದಲ್ಲಿ ವೇತನದಲ್ಲಿ ಕೂಡಾ ಹೆಚ್ಚಳವಾಗುವುದು.    

DA Hike latest news 2/8

ತುಟ್ಟಿಭತ್ಯೆಯಲ್ಲಿ ಏರಿಕೆ

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಕ್ಕೆ ಲಗತ್ತಿಸಲಾದ ಕಾರ್ಮಿಕ ಬ್ಯೂರೋ, ಹಣದುಬ್ಬರದ ಹೆಚ್ಚಳ ಮತ್ತು ಇಳಿಕೆಯ ಬಗ್ಗೆ ಮಾಸಿಕವಾಗಿ ಕಾರ್ಮಿಕರಿಗೆ ತಿಳಿಸುತ್ತದೆ. ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಇದರ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

DA Hike latest news 3/8

ತುಟ್ಟಿಭತ್ಯೆಯಲ್ಲಿ ಏರಿಕೆ

ಮಾರ್ಚ್ 2025ರಲ್ಲಿ, ಈ ಹಣದುಬ್ಬರ ಮಾಪಕ (CPI-IW) 0.2 ಅಂಕಗಳಷ್ಟು ಏರಿಕೆಯಾಗಿ 143.0 ತಲುಪಿತು. ಕಳೆದ ಮೂರು ತಿಂಗಳಿನಿಂದ, ಈ ಅಂಕಿ ಅಂಶಗಳಲ್ಲಿ ಇಳಿಕೆ ದಾಖಲಾಗುತ್ತಿದೆ. ಆದರೆ ಈಗ ಅದರಲ್ಲಿ ಸ್ವಲ್ಪ ಏರಿಕೆ ಕಂಡು ಬಂದಿದೆ.   

DA Hike latest news 4/8

ತುಟ್ಟಿಭತ್ಯೆಯಲ್ಲಿ ಏರಿಕೆ

ಈ ಇತ್ತೀಚಿನ ಮಾಹಿತಿಯ ಪ್ರಕಾರ, ಜುಲೈ 2025 ರಿಂದ ನೌಕರರು ಮತ್ತು ಪಿಂಚಣಿದಾರರಿಗೆ ಪಾವತಿಸಲಾಗುವ ಡಿಎ/ಡಿಆರ್ ಸುಮಾರು 57.91%ಕ್ಕೆ ತಲುಪಲಿದೆ. ಸರ್ಕಾರವು ತುಟ್ಟಿ ಭತ್ಯೆಯನ್ನು ಹೆಚ್ಚಿಸಿದಾಗ, ಅದನ್ನು ದಶಮಾಂಶ ರೂಪದಲ್ಲಿ ನೀಡುವುದಿಲ್ಲ. ಹಾಗಾಗಿ ತುಟ್ಟಿ ಭತ್ಯೆ 57.50% ಕ್ಕಿಂತ ಹೆಚ್ಚಾದರೆ, ಸರ್ಕಾರ ಅದನ್ನು 58% ಕ್ಕೆ ಹೆಚ್ಚಿಸಬಹುದು. 57.50% ಕ್ಕಿಂತ ಕಡಿಮೆಯಿದ್ದರೆ, ಅದನ್ನು 57% ಕ್ಕೆ ನಿಲ್ಲಿಸಬಹುದು. 

DA Hike latest news 5/8

ತುಟ್ಟಿಭತ್ಯೆಯಲ್ಲಿ ಏರಿಕೆ

ಜುಲೈ 2025ರ ಅಂತಿಮ ತುಟ್ಟಿ ಭತ್ಯೆಯು ಮುಂದಿನ ಮೂರು ತಿಂಗಳುಗಳಾದ ಏಪ್ರಿಲ್, ಮೇ ಮತ್ತು ಜೂನ್ 2025 ರ ಹಣದುಬ್ಬರದ ಅಂಕಿಅಂಶಗಳನ್ನು ಅವಲಂಬಿಸಿರುತ್ತದೆ. ಜುಲೈ 2025ರ ಡಿಎ/ಡಿಆರ್‌ನ ಅಂತಿಮ ಅಂಕಿ ಅಂಶವು ಮುಂದಿನ ಮೂರು ತಿಂಗಳುಗಳ (ಏಪ್ರಿಲ್, ಮೇ ಮತ್ತು ಜೂನ್ 2025) ಸಿಪಿಐ-ಐಡಬ್ಲ್ಯೂ ಸೂಚ್ಯಂಕವನ್ನು ಅವಲಂಬಿಸಿರುತ್ತದೆ.  

DA Hike latest news 6/8

ತುಟ್ಟಿಭತ್ಯೆಯಲ್ಲಿ ಏರಿಕೆ

ತುಟ್ಟಿ ಭತ್ಯೆ ಎಷ್ಟು ಹೆಚ್ಚಾಗುತ್ತದೆ ಎಂಬುದಕ್ಕೆ ಒಂದು ಸ್ಥಿರ ಸೂತ್ರವಿದೆ. ಕಳೆದ 12 ತಿಂಗಳುಗಳ CPI-IW ದತ್ತಾಂಶದ ಸರಾಸರಿಯನ್ನು ಆಧರಿಸಿ ಇದನ್ನು ನಿರ್ಧರಿಸಲಾಗುತ್ತದೆ. 

DA Hike latest news 7/8

ತುಟ್ಟಿಭತ್ಯೆಯಲ್ಲಿ ಏರಿಕೆ

ಮಾರ್ಚ್ 2025ರಲ್ಲಿ, ವರ್ಷದಿಂದ ವರ್ಷಕ್ಕೆ ಹಣದುಬ್ಬರವು 2.95% ಆಗಿತ್ತು. ಇದು ಕಳೆದ ವರ್ಷದ ಮಾರ್ಚ್ 2024 ಕ್ಕಿಂತ (4.20%) ಕಡಿಮೆಯಾಗಿದೆ.ಇದು ಒಳ್ಳೆಯದೇ. ಆದರೆ ಮಾಸಿಕ CPI-IW ಡೇಟಾವನ್ನು ಆಧರಿಸಿ DA ಅನ್ನು ಲೆಕ್ಕಹಾಕಲಾಗುತ್ತದೆ. ಇದರಲ್ಲಿ ಸ್ವಲ್ಪ ಹೆಚ್ಚಳವಾದರೂ ತುಟ್ಟಿ ಭತ್ಯೆ ಹೆಚ್ಚಾಗುತ್ತದೆ.

DA Hike latest news 8/8

ತುಟ್ಟಿಭತ್ಯೆಯಲ್ಲಿ ಏರಿಕೆ

ತುಟ್ಟಿ ಭತ್ಯೆ ಶೇ.2 ಅಥವಾ ಶೇ.3 ರಷ್ಟು ಹೆಚ್ಚಾದರೆ, ಸರ್ಕಾರಿ ನೌಕರರ ಮಾಸಿಕ ವೇತನ ಮತ್ತು ಪಿಂಚಣಿದಾರರ ಮಾಸಿಕ ಪಿಂಚಣಿಯಲ್ಲಿ ಉತ್ತಮ ಹೆಚ್ಚಳವಾಗುತ್ತದೆ. ಇದು ಅವರಿಗೆ ನಿರಂತರವಾಗಿ ಹೆಚ್ಚುತ್ತಿರುವ ಹಣದುಬ್ಬರದಿಂದ ಸ್ವಲ್ಪ ಪರಿಹಾರವನ್ನು ನೀಡುತ್ತದೆ.  ಒಬ್ಬ ಉದ್ಯೋಗಿಯ ಮೂಲ ವೇತನ 50,000 ರೂ. ಆಗಿದ್ದರೆ ತುಟ್ಟಿ ಭತ್ಯೆ ಶೇ. 3 ರಷ್ಟು ಹೆಚ್ಚಾದಾಗ ತಿಂಗಳಿಗೆ 1,500 ರೂ. ಏರಿಕೆ ಕಂಡಂತಾಗುತ್ತದೆ.