ಹೊಸ ವರ್ಷದ ಆರಂಭದಲ್ಲಿ ಅಂದರೆ ಜನವರಿ 13, 2026 ರಂದು ಶುಕ್ರ ಗ್ರಹವು ಮಕರ ರಾಶಿಗೆ ಸಾಗುತ್ತದೆ. ಮರುದಿನ, ಜನವರಿ 14, 2026 ರಂದು, ಸೂರ್ಯನು ಮಕರ ರಾಶಿಗೆ ಸಾಗುತ್ತಾನೆ. ಇದಾದ ನಂತರ, ಜನವರಿ 17, 2026 ರಂದು, ಬುಧ ಗ್ರಹವು ಮಕರ ರಾಶಿಗೆ ಸಾಗುತ್ತದೆ, ಇದರಿಂದಾಗಿ ತ್ರಿಗ್ರಹಿ ಯೋಗ ಉಂಟಾಗುತ್ತದೆ.
ವೃಷಭ ರಾಶಿ : ಗಮನಾರ್ಹ ಆರ್ಥಿಕ ಲಾಭ ಒದಗಿ ಬರುವುದು. ಹೊಸ ಮೂಲಗಳಿಂದ ಹಣ ಹರಿದು ಬರುತ್ತದೆ. ಬ್ಯಾಂಕ್ ಬ್ಯಾಲೆನ್ಸ್ ವೇಗವಾಗಿ ಹೆಚ್ಚಾಗುತ್ತದೆ. ಮನೆಯಲ್ಲಿ ಸಂತೋಷದ ವಾತಾವರಣ ನೆಲೆಯಾಗುವುದು.
ತುಲಾ ರಾಶಿ : ಜೀವನದಲ್ಲಿ ಸಂಪತ್ತು ಮತ್ತು ಐಷಾರಾಮಿ ಹೆಚ್ಚಾಗುತ್ತದೆ. ವೃತ್ತಿಯಲ್ಲಿ ಪ್ರಗತಿಯಾಗುವುದು. ಉದ್ಯಮಿಗಳು ಅನಿರೀಕ್ಷಿತ ಆರ್ಥಿಕ ಲಾಭವನ್ನು ಅನುಭವಿಸಬಹುದು. ವಾಹನ ಅಥವಾ ಆಸ್ತಿಯನ್ನು ಖರೀದಿಸಬಹುದು. ಗೌರವ ಹೆಚ್ಚಾಗುತ್ತದೆ.
ಧನು ರಾಶಿ : ಆರ್ಥಿಕ ಲಾಭವಾಗುವುದು. ಇದ್ದಕ್ಕಿದ್ದಂತೆ ಹಣದ ಹರಿವು ಹೆಚ್ಚಾಗುವುದು. ಜೀವನದಲ್ಲಿ ಸಂತೋಷ, ಖ್ಯಾತಿ ಹೆಚ್ಚಾಗುತ್ತದೆ. ಮನೆಯಲ್ಲಿ ಜನರು ನಿಮ್ಮ ಬಗ್ಗೆ ಕಾಳಜಿ ವಹಿಸುವರು.
ಮಕರ ರಾಶಿ : ಹಠಾತಾಗಿ ವೃತ್ತಿಜೀವನದಲ್ಲಿ ಉನ್ನತ ಸ್ಥಾನ ಒಲಿದು ಬರುವುದು. ಮನೆಯಲ್ಲಿ ಸಂತೋಷದ ವಾತಾವರಣ ಒಲಿದು ಬರುವುದು. ಅದ್ಭುತವಾದ ವೈವಾಹಿಕ ಜೀವನ ನಿಮ್ಮದಾಗುವುದು.
ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮಾತು ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.