ಗಜಲಕ್ಷ್ಮೀ ರಾಜಯೋಗದಿಂದ ಕೆಲವು ರಾಶಿಯವರಿಗೆ ಉತ್ತಮ ಫಲ ಸಿಗುತ್ತದೆ. ಈ ರಾಶಿಯವರ ಮನಸ್ಸಿನ ಇಚ್ಛೆ ನೆರವೇರುವುದು.
1/5ಜ್ಯೋತಿಷ್ಯದ ಪ್ರಕಾರ, ಸುಮಾರು 12 ವರ್ಷಗಳ ನಂತರ, ಗುರು ಮತ್ತು ಶುಕ್ರ ಮಿಥುನ ರಾಶಿಯಲ್ಲಿ ಒಟ್ಟಿಗೆ ಸೇರುತ್ತಾರೆ. ಇದರಿಂದಾಗಿ ಗಜಲಕ್ಷ್ಮಿ ರಾಜಯೋಗವನ್ನು ಸೃಷ್ಟಿಯಾಗುತ್ತಿದೆ. ಈ ಶುಭ ಯೋಗದ ಫಲಿತಾಂಶಗಳು ಕೆಲವು ರಾಶಿಯವರಿಗೆ ಗೋಚರಿಸುತ್ತದೆ.
2/5ಮಿಥುನ ರಾಶಿ : ಅದೃಷ್ಟ ಒಲಿದು ಬರುತ್ತದೆ. ದೀರ್ಘಕಾಲದಿಂದ ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಅದೃಷ್ಟ ನಿಮ್ಮ ಬೆನ್ನ ಹಿಂದೆಯೇ ಇರುವುದು. ವೃತ್ತಿ ಜೀವನದಲ್ಲಿ ಹೊಸ ಎತ್ತರಕ್ಕೆ ಏರುವಿರಿ.
3/5ಕನ್ಯಾ ರಾಶಿ:ವೃತ್ತಿ ಮತ್ತು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಕಾಣುವಿರಿ. ಕೆಲಸ ಮಾಡುತ್ತಿರುವವರಿಗೆ ಹೊಸ ಉದ್ಯೋಗ ಅಥವಾ ಬಡ್ತಿ ಸಿಗಬಹುದು. ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ.
4/5ತುಲಾ ರಾಶಿ:ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಉನ್ನತ ಶಿಕ್ಷಣ ಅಥವಾ ವಿದೇಶದಲ್ಲಿ ಅಧ್ಯಯನ ಮಾಡುವ ಕನಸು ನನಸಾಗುತ್ತದೆ. ಮಕ್ಕಳಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿಗಳು ಸಿಗುತ್ತವೆ. ಕೆಲಸದಲ್ಲಿ ಹೊಸ ಅವಕಾಶಗಳು ಲಭ್ಯವಿರುತ್ತವೆ. ಬಡ್ತಿ ಮತ್ತು ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ.
5/5ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.