ನಾಳೆಯಿಂದಲೇ ಈ ರಾಶಿಯವರಿಗೆ ಶುಕ್ರ ದೆಸೆ : ಮುಟ್ಟಿದ್ದೆಲ್ಲಾ ಚಿನ್ನವಾಗುವುದು ! ಹೆಜ್ಜೆ ಹೆಜ್ಜೆಗೂ ಒಲಿದು ಬರುವಳು ವಿಜಯಲಕ್ಷ್ಮೀ

Written ByRanjitha R K
Published: Sep 08, 2025, 09:02 AM IST|Updated: Sep 08, 2025, 09:02 AM IST

ಸೆಪ್ಟೆಂಬರ್ 9 ಅಂದರೆ ನಾಳೆಯಿಂದ ಶುಕ್ರನು ಆಶ್ಲೇಷ  ನಕ್ಷತ್ರದ ಮೂರನೇ ಮನೆಗೆ ಸಾಗುತ್ತಾನೆ . ಸೆಪ್ಟೆಂಬರ್ 3 ರಂದೇ ಶುಕ್ರನು ಆಶ್ಲೇಷ  ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಈ ಮೂಲಕ ಕೆಲವು ರಾಶಿಯವರಿಗೆ ಶುಕ್ರ ದೆಸೆ ಆರಂಭವಾಗಿದೆ.  
 

Shukradese Effect 1/5

ಈ ರಾಶಿಯವರಿಗೆ ಶುಕ್ರ ದೆಸೆ

ಸೌಂದರ್ಯ, ಪ್ರೀತಿ, ಭೌತಿಕ ಸಂತೋಷ ಮತ್ತು ವೈವಾಹಿಕ ಜೀವನದ ಸುಖ ಸಂತೋಷಕ್ಕೆ ಕಾರಣನಾಗಿರುವ ಶುಕ್ರ ಆಶ್ಲೇಷ  ನಕ್ಷತ್ರದ ಮೂರನೇ ಮನೆಗೆ ಕಾಲಿಡುತ್ತಿದ್ದಾನೆ. ಈ ಮೂಲಕ ಮೂರು ರಾಶಿಯವರಿಗೆ ಶುಕ್ರದೆಸೆ ಆರಂಭವಾಗಲಿದೆ.   

Shukradese Effect 2/5

ಈ ರಾಶಿಯವರಿಗೆ ಶುಕ್ರ ದೆಸೆ

ಮಿಥುನ ರಾಶಿ : ಹಣ ಗಳಿಸುವುದಕ್ಕೆ ಹೊಸ ಮಾರ್ಗಗಳು ತೆರೆಯುತ್ತದೆ. ಮನೆಯಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗುವುದು.  ಹಣಕಾಸಿನ ಕೊರತೆ ನೀಗುವುದು. ಸಾಲದಿಂದ ಸಂಪೂರ್ಣ ಮುಕ್ತಿ ಸಿಗುವುದು. 

Shukradese Effect 3/5

ಈ ರಾಶಿಯವರಿಗೆ ಶುಕ್ರ ದೆಸೆ

ಕನ್ಯಾ ರಾಶಿ : ಹಠಾತ್ ಆರ್ಥಿಕ ಲಾಭವಾಗುವುದು. ಅದೃಷ್ಟದ ಬಾಗಿಲುಗಳು ತೆರೆದುಕೊಳ್ಳುವುದು. ಕೆಲಸ ಅಥವಾ ವೃತ್ತಿಯಲ್ಲಿ ಪ್ರಗತಿಯಾಗುವುದು.   ಗೌರವ ಹೆಚ್ಚಾಗುವುದು. ಆದರೂ ಆರೋಗ್ಯದ ಬಗ್ಗೆ ವಿಶೇಷ ಗಮನ ಕೊಡುವುದು ಅಗತ್ಯ,.   

Shukradese Effect 4/5

ಈ ರಾಶಿಯವರಿಗೆ ಶುಕ್ರ ದೆಸೆ

ವೃಶ್ಚಿಕ ರಾಶಿ: ಅದೃಷ್ಟ ಬೆನ್ನು ಹತ್ತುವುದು.  ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ಸಿಗುವುದು. ಕೆಲಸವೆ ಆಗಿರಲಿ ಉದ್ಯೋಗವೇ ಆಗಿರಲಿ ಗೆಲುವು ನಿಮ್ಮದೇ ಆಗುವುದು.  ಬಾಕಿ ಇರುವ ಸರ್ಕಾರಿ ಕೆಲಸಗಳು ಪೂರ್ಣಗೊಳ್ಳುವುದು. 

Shukradese Effect 5/5

ಈ ರಾಶಿಯವರಿಗೆ ಶುಕ್ರ ದೆಸೆ

ಸೂಚನೆ : ಈ ಲೇಖನವನ್ನುಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆ ಆಧಾರದಲ್ಲಿ ಬರೆಯಲಾಗಿದೆ, ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.