ಪ್ರಸ್ತುತ ಕನ್ಯಾರಾಶಿಯಲ್ಲಿರುವ ಮಂಗಳ ಆಗಸ್ಟ್ 10 ರಂದು ಬೆಳಿಗ್ಗೆ 4:38 ಕ್ಕೆ, ಯಮನೊಂದಿಗೆ ಸೇರಿ ಪ್ರಬಲ ರಾಜಯೋಗವನ್ನು ರೂಪಿಸಲಿದ್ದಾನೆ. ಮಂಗಳ ಮತ್ತು ಯಮ ಪರಸ್ಪರ 120 ಡಿಗ್ರಿಗಳಲ್ಲಿ ಕಾಣಿಸಕೊಳ್ಳುವ ಕಾರಣ ನವಪಂಚಮ ರಾಜಯೋಗ ನಿರ್ಮಾಣವಾಗುತ್ತದೆ.
1/5
ಜ್ಯೋತಿಷ್ಯದಲ್ಲಿ ನವಪಂಚಮ ಯೋಗವನ್ನು ಬಹಳ ಅಪರೂಪ ಮತ್ತು ಶುಭವೆಂದು ಪರಿಗಣಿಸಲಾಗಿದೆ. ಈ ಯೋಗದ ರಚನೆಯಿಂದಾಗಿ, ಕೆಲವು ರಾಶಿಯವರು ಅನಿರೀಕ್ಷಿತ ಯಶಸ್ಸು ಮತ್ತು ಗೌರವ ಪಡೆಯುವರು. ಆರ್ಥಿಕ ಲಾಭ ಮತ್ತು ವೃತ್ತಿ ಪ್ರಗತಿಯ ಹಾದಿ ತೆರೆದುಕೊಳ್ಳುವುದು.
2/5
ವೃಷಭ ರಾಶಿ :ಈ ರಾಜಯೋಗದ ಮೂಲಕ ಅದೃಷ್ಟ ತೆರೆದುಕೊಳ್ಳುವುದು. ದೀರ್ಘಕಾಲದ ಸಮಸ್ಯೆಗಳು ಕೊನೆಯಾಗುವುದು. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಹಠಾತ್ ಆರ್ಥಿಕ ಲಾಭವಾಗುವುದು. ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ. ಹಳೆಯ ಸಾಲಗಳಿಂದ ಮುಕ್ತಿ ಸಿಗುವುದು.
3/5
ಮಕರ ರಾಶಿ : ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ವಿಸ್ತರಣೆಯಾಗಿ ಲಾಭವಾಗುವುದು. ಹಳೆಯ ಕಾಯಿಲೆಗಳಿಂದ ಪರಿಹಾರ ಸಿಗಬಹುದು. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಮಕ್ಕಳ ಬಗೆಗಿನ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುತ್ತವೆ.
4/5
ಕುಂಭ ರಾಶಿ : ಕುಂಭ ರಾಶಿಯವರಿಗೆ ಈ ಸಮಯ ತುಂಬಾ ಶುಭವಾಗಿರುತ್ತದೆ. ಆರ್ಥಿಕವಾಗಿ ವಿಶೇಷ ಯಶಸ್ಸು ಸಿಗುವುದು. ಆದಾಯದಲ್ಲಿ ಹೆಚ್ಚಳದ ಜೊತೆಗೆ, ಉದ್ಯೋಗದಲ್ಲಿ ಬಡ್ತಿಯಾಗುವುದು. ಪೂರ್ವಜರ ಆಸ್ತಿಯಿಂದ ಲಾಭವಾಗುವುದು.
5/5
ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆ ಆಧಾರದಲ್ಲಿ ಬರೆಯಲಾಗಿದೆ.ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.