Moushumi Chatterjee: ಬಾಲಿವುಡ್‌ನಲ್ಲಿ ನಟಿಯರ ಗ್ಲಾಮರಸ್ ಲುಕ್ ಹೊಸದೇನಲ್ಲ. 70ರ ದಶಕದಿಂದಲೂ ನಟಿಯರು ಸಣ್ಣ ಉಡುಪುಗಳನ್ನು ಧರಿಸುತ್ತಿದ್ದಾರೆ. 70-80ರ ದಶಕದ ನಟಿಯರ ಜೊತೆಗೆ ಇಂದಿಗೂ ಸಹ ಪರದೆಯ ಮೇಲೆ ಸಣ್ಣ ಉಡುಪುಗಳನ್ನ ಧರಿಸಲು ಸಂಪೂರ್ಣವಾಗಿ ನಿರಾಕರಿಸಿದ ಅನೇಕ ನಟಿಯರಿದ್ದಾರೆ. ಇಂದಿನ ಚಲನಚಿತ್ರೋದ್ಯಮದಲ್ಲಿ ಸಾಯಿ ಪಲ್ಲವಿ ಹೆಸರು ಮೊದಲು ಬರುತ್ತದೆ. ಚಿಕ್ಕ ಬಟ್ಟೆಗಳನ್ನು ಧರಿಸುವುದನ್ನ ಯಾವಾಗಲೂ ನಿರಾಕರಿಸುತ್ತಿದ್ದ ನಟಿಯೊಬ್ಬರಿದ್ದರು. ಈ ನಟಿ ಚಿಕ್ಕ ಬಟ್ಟೆಗಳನ್ನ ಅಥವಾ ಆಳವಾದ ಕುತ್ತಿಗೆಯನ್ನ ಹೊಂದಿರುವ ಬ್ಲೌಸ್‌ಗಳನ್ನು ಧರಿಸುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿದ್ದರು. ಅವರು ತಮ್ಮ ಈ ನಿಯಮವನ್ನು ಎಂದಿಗೂ ಬ್ರೇಕ್ ಮಾಡಲಿಲ್ಲ. ತಮ್ಮ ಸಿನಿಮಾಗಳಲ್ಲಿ ಅವರು ಯಾವಾಗಲೂ ಸೀರೆ ಅಥವಾ ಪಂಜಾಬಿ ಉಡುಪುಗಳನ್ನ ಹೆಚ್ಚಾಗಿ ಧರಿಸುತ್ತಿದ್ದರು. ಆದರೆ ಒಂದು ದೃಶ್ಯಕ್ಕಾಗಿ ಅವರು ತಮ್ಮ ಬಗ್ಗೆಯೇ ನಾಚಿಕೆಪಡುವಷ್ಟು ಬಟ್ಟೆಗಳನ್ನು ಧರಿಸಬೇಕಾಯಿತು. ಆ ದಿನ ಅವರು ಶೂಟಿಂಗ್ ಸೆಟ್‌ನಲ್ಲಿ ಇದೇ ಕಾರಣಕ್ಕೇ ತುಂಬಾ ಅಳುತ್ತಿದ್ದರಂತೆ. ಆ ನಟಿ ಯಾರು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ
ಆ ಖ್ಯಾತ ನಟಿ ಬೇರೆ ಯಾರೂ ಅಲ್ಲ ಬಾಲಿವುಡ್‌ನ ಬ್ಯೂಟಿ ಎಂದೇ ಖ್ಯಾತಿಯಾಗಿದ್ದ ಮೌಶುಮಿ ಚಟರ್ಜಿ. ಈ ನಟಿ ಬಾಲಿವುಡ್‌ನಲ್ಲಿ ಬಹಳ ಮುಖ್ಯವಾದ ಪಾತ್ರಗಳನ್ನು ನಿರ್ವಹಿಸಿದರು. ಅವರು ಪ್ರೇಕ್ಷಕರನ್ನು ಪರಿಪೂರ್ಣವಾಗಿ ರಂಜಿಸಿದರು. ಮೌಶುಮಿಯವರು ರಾಜೇಶ್ ಖನ್ನಾ, ಅಮಿತಾಬ್ ಬಚ್ಚನ್, ಜೀತೇಂದ್ರ, ರಿಷಿ ಕಪೂರ್, ಮಿಥುನ್ ಚಕ್ರವರ್ತಿ ಮತ್ತು ವಿನೋದ್ ಮೆಹ್ರಾ ಸೇರಿದಂತೆ ತಮ್ಮ ಕಾಲದ ಅನೇಕ ದೊಡ್ಡ ತಾರೆಯರೊಂದಿಗೆ ಕೆಲಸ ಮಾಡಿದ್ದರು.
ಮೌಶುಮಿ ಚಟರ್ಜಿ ಸಾಕಷ್ಟು ಸಂಪತ್ತು ಮತ್ತು ಖ್ಯಾತಿಯನ್ನು ಗಳಿಸಿದ್ದರು. ಆದರೆ ಅವರು ಸಿನಿಮಾಗಾಗಿ ತಮ್ಮ ಖ್ಯಾತಿಯನ್ನು ಎಂದಿಗೂ ಹಾಳುಮಾಡಿಕೊಳ್ಳಲಿಲ್ಲ. ಈ ನಟಿ ಒಂದು ರೀತಿ ರಾಜಿಯಾಗದ ಮನಸ್ಥಿತಿ ಹೊಂದಿದ್ದರು. ಸಿನಿಮಾಗಳಲ್ಲಿ ಎಂದಿಗೂ ತುಂಡುಡುಗೆ ಅಥವಾ ಸಣ್ಣ ಬಟ್ಟೆಗಳನ್ನು ಧರಿಸಬಾರದು ಎಂಬ ನಿಯಮವನ್ನು ಅವರು ಹೊಂದಿದ್ದರು. ಸ್ವತಃ ಮೌಶುಮಿ ಚಟರ್ಜಿ ಅವರೇ ಸಂದರ್ಶನವೊಂದರಲ್ಲಿ ಈ ಬಗ್ಗೆ ಹೇಳಿದ್ದರು.
ಆದರೆ ಒಮ್ಮೆ ನಿರ್ದೇಶಕರ ಸೂಚನೆಯ ಮೇರೆಗೆ ಮೌಶುಮಿ ಚಟರ್ಜಿ ಸ್ಕರ್ಟ್ ಮತ್ತು ಆಳವಾದ ಕುತ್ತಿಗೆಯ ಬ್ಲೌಸ್‌ಅನ್ನ ಧರಿಸಬೇಕಾಗಿತ್ತು. ಇದು ಅವರಿಗೆ ಅತ್ಯಂತ ಆಘಾತಕಾರಿ ಅನುಭವವಾಗಿತ್ತು. ಆ ಬಟ್ಟೆಗಳು ತನಗೆ ತುಂಬಾ ಮುಜುಗರವನ್ನುಂಟುಮಾಡುತ್ತಿದ್ದವು, ಅವುಗಳಲ್ಲಿ ತಾನು ಬೆತ್ತಲೆಯಾಗಿರುವಂತೆ ಭಾಸವಾಯಿತು ಎಂದು ಅವಳು ಹೇಳಿಕೊಂಡಿದ್ದರು.
ಇದು ನಡೆದಿದ್ದು 1973ರ ರಾಜ್ ಖೋಸ್ಲಾ ಅವರ 'ಕಚ್ಚೆ ಧಾಗೆ' ಚಿತ್ರದ ಸಮಯದಲ್ಲಿ. ಮೌಶುಮಿ ಈ ಚಿತ್ರವನ್ನು ವಿನೋದ್ ಖನ್ನಾ ಮತ್ತು ಕಬೀರ್ ಬೇಡಿ ಅವರೊಂದಿಗೆ ಮಾಡಿದ್ದರು. ಮಣಿ ಜೆ ರಾಬ್ರಿಯವರು ಚಿತ್ರಕ್ಕಾಗಿ ಅವರಿಗೆ ಬೆನ್ನು ಇಲ್ಲದ ಬ್ಲೌಸ್ ಮತ್ತು ಸಣ್ಣ ಘಾಗ್ರಾ ಧರಿಸಲು ಹೇಳಿದ್ದರು. ಆ ದಿನ ಮೌಶುಮಿ ಚಟರ್ಜಿ ಅವರು ಶೂಟಿಂಗ್ ಸೆಟ್‌ನಲ್ಲಿ ಅಳುತ್ತಿದ್ದರಂತೆ.
"ಆ ಸಣ್ಣ ಬಟ್ಟೆಗಳನ್ನು ನೋಡಿ ನಾನು ಬೆತ್ತಲೆಯಾಗಿರುವಂತೆ ಭಾಸವಾಯಿತು. ಅದನ್ನ ನೆನೆಸಿಕೊಂಡು ನಾನು ಅಳಲು ಪ್ರಾರಂಭಿಸಿದೆ. ನಾನು ನನ್ನ ಗಂಡನಿಗೆ ಕರೆ ಮಾಡಿ, ʼದಯವಿಟ್ಟು ನನ್ನನ್ನು ಕೋಲ್ಕತ್ತಾಗೆ ವಾಪಸ್ ಕಳುಹಿಸಿʼ ಎಂದು ಹೇಳಿದ್ದೆ. ನಾನು ಇನ್ನು ಮುಂದೆ ಇಲ್ಲಿ ಕೆಲಸ ಮಾಡಲು ಬಯಸುವುದಿಲ್ಲ. ನಿರ್ದೇಶಕರು ನನ್ನ ಎಲ್ಲಾ ಬಟ್ಟೆಗಳನ್ನು ಬಿಚ್ಚಲು ಬಯಸುತ್ತಾರೆಂದು ದುಃಖ ವ್ಯಕ್ತಪಡಿಸಿದ್ದೆʼ ಅಂತಾ ಹೇಳಿದ್ದರು. ನಂತರ ನನ್ನ ಪತಿ ತಕ್ಷಣ ಬಂದು ಈ ಬಟ್ಟೆಗಳಲ್ಲಿ ಯಾವುದೇ ತಪ್ಪಿಲ್ಲವೆಂದು ನನಗೆ ವಿವರಿಸಿದರು. ಅದು ಚಿತ್ರಕ್ಕೆ ಸರಿಯಾಗಿದೆ ಎಂದು ಮನವರಿಕೆ ಮಾಡಿದರು. ಆ ನಂತರವಷ್ಟೇ ನಾನು ಆ ಸಿನಿಮಾದ ದೃಶ್ಯದಲ್ಲಿ ನಟಿಸಿದೆ ಎಂದು ನಟಿ ಹೇಳಿದ್ದಾರೆ.
ಹೃಷಿಕೇಶ್ ಮುಖರ್ಜಿ ಅವರ 'ಗುಡ್ಡಿ' ಚಿತ್ರಕ್ಕೆ ಬಟ್ಟೆ ಹಾಕುವ ಕಾರಣದಿಂದಲೇ ಆ ಚಿತ್ರವನ್ನು ತಿರಸ್ಕರಿಸಿದ್ದಾಗಿ ಮೌಶುಮಿ ಚಟರ್ಜಿ ಹೇಳಿದ್ದಾರೆ. ಆ ಚಿತ್ರದಲ್ಲಿ ಸ್ಕರ್ಟ್ ಧರಿಸಲು ಬಯಸಿದ್ದರಿಂದಲೇ ಆ ಚಿತ್ರವನ್ನು ತಿರಸ್ಕರಿಸಿದ್ದೆ. ನಂತರ ನನ್ನ ಬದಲಿಗೆ ಜಯಾ ಬಚ್ಚನ್‌ರನ್ನು ಆ ಚಿತ್ರಕ್ಕೆ ಆಯ್ಕೆ ಮಾಡಲಾಗಿತ್ತು. ಈ ಚಿತ್ರವೇ ಅವರನ್ನು ಸೂಪರ್ ಸ್ಟಾರ್ ಆಗಿ ಮಾಡಿತ್ತು.