Post Office Recurring Deposit: ಐದು ವರ್ಷಗಳ ಅವಧಿಗೆ ಅಥವಾ 60 ಮಾಸಿಕ ಕಂತುಗಳಿರುವ ಈ ಯೋಜನೆಯಲ್ಲಿ ಮಾಸಿಕ ಆಧಾರದ ಮೇಲೆ ನಿಮ್ಮ ಹಣವನ್ನು ಉಳಿಸಲು ಅನುವು ಮಾಡಿಕೊಡುತ್ತದೆ.
Post Office RD: ಅಂಚೆ ಇಲಾಖೆ ತನ್ನ ಕೋಟ್ಯಂತರ ಗ್ರಾಹಕರಿಗಾಗಿ ಹಲವಾರು ಉಳಿತಾಯ ಯೋಜನೆಗಳನ್ನು ಪರಿಚಯಿಸಿದೆ. ಇದರಲ್ಲಿ ರೆಕ್ಯೂರಿಂಗ್ ಡೆಪಾಸಿಟ್ (RD) ಸಹ ಒಂದು. ಪೋಸ್ಟ್ ಆಫೀಸ್ ರೆಕ್ಯೂರಿಂಗ್ ಡೆಪಾಸಿಟ್ ಮಧ್ಯಾವಧಿಯ ಉಳಿತಾಯ ಯೋಜನೆಯಾಗಿದ್ದು, ಠೇವಣಿದಾರರು ತಮ್ಮ ಹೂಡಿಕೆಗಳನ್ನು ಕನಿಷ್ಠ 5 ವರ್ಷಗಳವರೆಗೆ ಇರಿಸಬೇಕಾಗುತ್ತದೆ. ಇದನ್ನು ರಾಷ್ಟ್ರೀಯ ಉಳಿತಾಯ ರೆಕ್ಯೂರಿಂಗ್ ಡೆಪಾಸಿಟ್ (ಎಂತಲೂ ಕರೆಯಲಾಗುತ್ತದೆ. ಪೋಸ್ಟ್ ಆಫೀಸ್ RD ಖಾತೆಯಲ್ಲಿ ಪ್ರತಿ ತಿಂಗಳು ನೀವು ₹2400 ಠೇವಣಿ ಇಟ್ಟರೆ 60 ತಿಂಗಳ ನಂತರ ಎಷ್ಟು ಹಣ ಸಿಗುತ್ತದೆ? ಇದರ ಮಾಹಿತಿ ಇಲ್ಲಿದೆ ನೋಡಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
5 ವರ್ಷಗಳ ಆರ್‌ಡಿ ಯೋಜನೆ ಅಂದರೆ ರಾಷ್ಟ್ರೀಯ ಸಣ್ಣ ಉಳಿತಾಯ ಯೋಜನೆಯ ಠೇವಣಿ ಖಾತೆಯನ್ನು ಅಂಚೆ ಕಚೇರಿಯಲ್ಲಿ ಸುಲಭವಾಗಿ ತೆರೆಯಬಹುದು.
ಅಂಚೆ ಕಚೇರಿ ಉಳಿತಾಯ ಯೋಜನೆಯಲ್ಲಿ, ನಿಮಗೆ ಖಚಿತವಾದ ಆದಾಯ ಸಿಗುತ್ತದೆ ಮತ್ತು ನಿಮ್ಮ ಹಣ ಇಲ್ಲಿ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ.
ಪ್ರಸ್ತುತ ಅಂಚೆ ಕಚೇರಿಯು 5 ವರ್ಷಗಳ ಆರ್‌ಡಿ ಯೋಜನೆಯಲ್ಲಿ ವಾರ್ಷಿಕ 6.7% (ತ್ರೈಮಾಸಿಕ ಸಂಯುಕ್ತ) ಬಡ್ಡಿದರವನ್ನು ನೀಡುತ್ತಿದೆ.
ನೀವು ಪೋಸ್ಟ್ ಆಫೀಸ್ ಆರ್‌ಡಿ ಯೋಜನೆಯಲ್ಲಿ ಮಾಸಿಕ ₹2400 ಅನ್ನು 60 ತಿಂಗಳು ಅಥವಾ ಐದು ವರ್ಷಗಳವರೆಗೆ ಠೇವಣಿ ಮಾಡಿದರೆ ಎಷ್ಟು ಸಿಗುತ್ತದೆ? ಲೆಕ್ಕಾಚಾರದ ಪ್ರಕಾರ, ನೀವು ಮುಕ್ತಾಯದ ಸಮಯದಲ್ಲಿ ಒಟ್ಟು ₹1,71,276 ಪಡೆಯುತ್ತೀರಿ.
ಲೆಕ್ಕಾಚಾರಗಳ ಪ್ರಕಾರ, ನೀವು ಐದು ವರ್ಷಗಳಲ್ಲಿ ಹೂಡಿಕೆ ಮಾಡಿದ ಮೊತ್ತವು ₹1,44,000 ಆಗಿರುತ್ತದೆ. ಈ ಹೂಡಿಕೆಗೆ ಪ್ರತಿಯಾಗಿ ನೀವು ₹27,276 ಲಾಭವನ್ನು ಪಡೆಯುತ್ತೀರಿ.