Diabetes Symptoms: ಈ ವೇಗದ ಜೀವನ ಶೈಲಿಯಲ್ಲಿ ಯಾವ ಕಾಯಿಲೆಯೂ ಇಂತಿಷ್ಟೇ ವಯಸ್ಸಿಗೆ ಬರುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ.
Diabetes Signs: ಮೊದಲೆಲ್ಲಾ ಸುಮಾರು 40 ವರ್ಷ ದಾಟಿದ ಬಳಿಕ ವಕ್ಕರಿಸುತ್ತಿದ್ದ ಬಿಪಿ, ಶುಗರ್ ನಂತಹ ಸಾಮಾನ್ಯ ಸಮಸ್ಯೆಗಳು ಇಂದು ಹುಟ್ಟಿದ ಮಗುವಿನಲ್ಲೂ ಕಂಡು ಬರುತ್ತಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ
ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಿ, ಇನ್ಸುಲಿನ್ ಕೊರತೆ ಉಂಟಾದಾಗ ಮಧುಮೇಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದನ್ನು ಆರಂಭದಲ್ಲಿ ಗುರುತಿಸಿ ಚಿಕಿತ್ಸೆ ಪಡೆಯದಿದ್ದರೆ ಭವಿಷ್ಯದಲ್ಲಿ ಮೂತ್ರಪಿಂಡ, ಯಕೃತ್, ಹೃದಯದ ಕಾಯಿಲೆಗಳಿಗೆ ಇದು ಆಹ್ವಾನ ನೀಡಬಹುದು. ಇದನ್ನು ತಪ್ಪಿಸಲು ಮೊದಲು ಮಧುಮೇಹದ ಲಕ್ಷಣಗಳನ್ನು ಗುರುತಿಸುವುದು ಮುಖ್ಯ.
ವೈದ್ಯರ ಪ್ರಕಾರ, ಬೆಳಿಗ್ಗೆ ಎದ್ದ ಕೂಡಲೇ ಕಾಣುವ ಕೆಲವು ಲಕ್ಷಣಗಳನ್ನು ನಿದ್ರೆ ಸರಿಯಿಲ್ಲ ಎಂಬ ಕಾರಣ ನೀಡಿ ಕೆಲವರು ನಿರ್ಲಕ್ಷಿಸುತ್ತಾರೆ. ಆದರೆ, ಬೆಳಗಿನ ವೇಳೆ ಕಂಡು ಬರುವ ಕೆಲವು ಲಕ್ಷಣಗಳು ನಿಮ್ಮಲ್ಲಿ ಮಧುಮೇಹ ಇದೆ ಎಂಬುದನ್ನೂ ಸೂಚಿಸುತ್ತದೆ. ಅಂತಹ ಕೆಲವು ಲಕ್ಷಣಗಳನ್ನು ಈ ಕೆಳಕಂಡಂತೆ ಗುರುತಿಸಲಾಗಿದೆ.
ಬೆಳಿಗ್ಗೆ ಎದ್ದ ಕೂಡಲೇ ಬಾಯಿ, ಗಂಟಲು ಒಣಗಿದಂತೆ ಆಗುತ್ತಿದ್ದರೆ ಇದು ಮಧುಮೇಹದ ಎಚ್ಚರಿಕೆಯ ಗಂಟೆಯಾಗಿದೆ. ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಹೆಚ್ಚಾಗಿದ್ದರೆ ದೇಹದಲ್ಲಿ ನೀರಿನ ಕೊರತೆಯಾಗುತ್ತದೆ. ಲಾಲಾರಸ ಕಡಿಮೆ ಉತ್ಪಾದನೆಯಾಗುವುದರಿಂದ ಬಾಯಿ, ಗಂಟಲು ಒಣಗುತ್ತದೆ.
ಚೆನ್ನಾಗಿ ನಿದ್ರೆ ಮಾಡಿ ಎದ್ದರೂ ಸಹ ಬೆಳಿಗ್ಗೆ ಎದ್ದ ಕೂಡಲೇ ನೀವು ಸುಸ್ತು, ದಣಿವು, ಆಯಾಸವನ್ನು ಅನುಭವಿಸಿದರೆ ಇದನ್ನು ನಿರ್ಲಕ್ಷಿಸಬೇಡಿ. ಇದು ಮಧುಮೇಹದ ಲಕ್ಷಣವೇ ಆಗಿದೆ.
ಮಧುಮೇಹ ಸಮಸ್ಯೆ ಇರುವವರಲ್ಲಿ ಬೆಳಿಗ್ಗೆ ಎದ್ದ ಕೂಡಲೇ ಕಣ್ಣು ಮಂಜುಮಂಜಾದಂತೆ ಭಾಸವಾಗುತ್ತದೆ. ಇದು ನಿಮ್ಮ ಕಣ್ಣಿನ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು.
ಬೆಳಿಗ್ಗೆ ಎದ್ದ ಕೂಡಲೇ ದೇಹದಲ್ಲಿ ಇದ್ದಕ್ಕಿದ್ದಂತೆ ತುರಿಕೆ ಕಂಡು ಬಂದರೆ(ನಿರಂತರವಾಗಿ) ಅದೂ ಕೂಡ ಮಧುಮೇಹದ ಲಕ್ಷಣವೇ ಆಗಿದೆ. ಇಂತಹ ಸಂದರ್ಭದಲ್ಲಿ ತಡಮಾಡದೆ ಬ್ಲಡ್ ಟೆಸ್ಟ್ ಮಾಡಿಸಿಕೊಳ್ಳಿ.
ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಕೈ ಅಥವಾ ಕಾಲುಗಳಲ್ಲಿ ಜುಮ್ಮೆನಿಸುವ, ಮರಗಟ್ಟುವಿಕೆಯ ಅನುಭವವಾಗುತ್ತಿದ್ದರೆ ನಿಸ್ಸಂದೇಹವಾಗಿ ಇದು ಮಧುಮೇಹದ ಲಕ್ಷಣವಾಗಿರುತ್ತದೆ.
ಆದಾಗ್ಯೂ, ಬೆಳಿಗ್ಗೆ ಎದ್ದ ಕೂಡಲೇ ದೇಹದಲ್ಲಿ ಈ ರೀತಿ ಲಕ್ಷಣಗಳು ಕಂಡು ಬರಲು ಬೇರೆ ಬೇರೆ ಕಾರಣಗಳು ಸಹ ಇರಬಹುದು. ಒಮ್ಮೆ ಬ್ಲಡ್ ಟೆಸ್ಟ್ ಮಾಡಿಸಿದರೆ ನಿಮಗೆ ಮಧುಮೇಹ ಇದೆಯೇ/ಇಲ್ಲವೇ ಎಂಬ ಸಂದೇಹವನ್ನು ಬಗೆಹಿಸಿಕೊಳ್ಳಬಹುದು. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.