ಮಕ್ಕಳಿಗೆ ಶಿವನ ಈ ಹೆಸರುಗಳನ್ನಿಟ್ಟರೆ ಸಾಕ್ಷಾತ್ ಮಹೇಶ್ವರನೇ ಜೀವನಪೂರ್ತಿ ಜೊತೆ ನಿಂತಂತೆ: ಅದೃಷ್ಟ ಸದಾ ಇವರ ಬೆನ್ನಿಗೆ ನಿಲ್ಲುವುದು
ಮಗುವಿನ ಆರೋಗ್ಯ ಮತ್ತು ಆಹಾರದ ಜೊತೆಗೆ, ಪ್ರತಿ ತಾಯಿಯೂ ತನ್ನ ಮಗುವಿನ ಹೆಸರಿನ ಬಗ್ಗೆ ತುಂಬಾ ಉತ್ಸುಕರಾಗಿರುತ್ತಾಳೆ. ಎಲ್ಲಾ ಪೋಷಕರು ತಮ್ಮ ಮಗುವಿನ ಹೆಸರು ಯಾವ ರೀತಿ ಹೆಸರಿಟ್ಟರೆ ಒಳ್ಳೆಯದು ಎಂದು ಆಲೋಚಿಸುತ್ತಾರೆ.
ವಿಭಿನ್ನ ಮತ್ತು ವಿಶಿಷ್ಟವಾದ ಹೆಸರನ್ನಿಡಬೇಕು ಎಂಬುದು ಪ್ರತಿಯೊಬ್ಬ ಪೋಷಕರ ಆಸೆಯಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಕೆಲವೊಂದು ದೇವರಿಗೆ ಸಂಬಂಧಿಸಿದ ಹೆಸರನ್ನಿಟ್ಟರೆ ಒಳ್ಳೆಯದು. ನಾವಿಂದು ಶಿವನಿಗೆ ಸಂಬಂಧಿಸಿದ ಕೆಲವೊಂದು ಹೆಸರುಗಳು ಮತ್ತು ಅದರ ಅರ್ಥವನ್ನು ನೀಡಿದ್ದೇವೆ. ಇಂತಹ ಹೆಸರನ್ನಿಟ್ಟರೆ ಸಾಕ್ಷಾತ್ ಪರಮೇಶ್ವರನೇ ಜೊತೆ ನಿಂತ ಸಮಾನವಾಗುತ್ತದೆ.
ತರ್ಷ್: ಇದ ಗಂಡು ಮಗುವಿಗೆ ಇಡಬಹುದಾದ ಹೆಸರಾಗಿದ್ದು, ಬಹಳ ವಿಶಿಷ್ಟವಾಗಿದೆ. ತರ್ಷ್ ಎಂಬ ಹೆಸರಿನ ಅರ್ಥ ಹಾರೈಕೆ ಮತ್ತು ಅದೃಷ್ಟದ ನಕ್ಷತ್ರ. ನಿಮ್ಮ ಮಗು ಅದೃಷ್ಟವಂತರಾಗಿ ಶ್ರೀಮಂತರಾಗಿ ಇರಬೇಕೆಂದು ಇಚ್ಛಿಸಿದ್ದರೆ ಈ ಹೆಸರನ್ನು ಇಡಬಹುದು.
ಮಯಾಂಕ್: ಮಯಾಂಕ್ ಕೂಡ ಗಂಡು ಮಗುವಿನ ಹೆಸರು. ಇದರ ಅರ್ಥ ಅದೃಷ್ಟವಂತ, ಶುದ್ಧ ಮತ್ತು ಪ್ರಾಮಾಣಿಕ.
ರುದ್ರಂ: ಪರಮೇಶ್ವರನ ಮತ್ತೊಂದು ಹೆಸರೇ ರುದ್ರಂ. ಈ ಹೆಸರನ್ನು ನಿಮ್ಮ ಮಗುವಿಗೆ ಇಟ್ಟರೆ ಅದೃಷ್ಟದ ಬೆಂಬಲ ಸದಾ ಇರುತ್ತದೆ ಅಂತೆಯೇ ಶಿವನ ಅಭಯ ಇರುತ್ತದೆ ಎಂದು ಹೇಳಲಾಗುತ್ತದೆ.
ಶ್ರೀತನ್: ಮಗುವಿನ ಹೆಸರು 'ಶ್ರ್' ಅಕ್ಷರದಿಂದ ಪ್ರಾರಂಭವಾಗುತ್ತಿದ್ದರೆ, ಶ್ರೀತನ್ ಎಂದು ಹೆಸರಿಡಬಹುದು. ಶ್ರೀತನ್ ಎಂಬ ಹೆಸರಿನ ಅರ್ಥ ಸುಂದರ ಮತ್ತು ಅದೃಷ್ಟ. ಭಗವಾನ್ ವಿಷ್ಣುವನ್ನು ಶ್ರೀತನ್ ಎಂದೂ ಕರೆಯುತ್ತಾರೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.