ಗುರುವಿನ ಸ್ಥಾನವು ಎಲ್ಲಾ ರಾಶಿಯವರ ಜೀವನದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಸಂಪತ್ತಿನ ಬೆಳವಣಿಗೆ, ವಿಸ್ತರಣೆ, ಜ್ಞಾನ ಮತ್ತು ಆಧ್ಯಾತ್ಮಿಕತೆಯವರೆಗೆ ಹೊಸ ಆಯಾಮಗಳಿಗೆ ಬಾಗಿಲು ತೆರೆಯುತ್ತದೆ.
1/7ತುಲಾ ರಾಶಿ : ಗುರುವು ನಿಮ್ಮ ಏಳನೇ ಮನೆಯಲ್ಲಿ ವಿಶೇಷ ಸ್ಥಾನದಲ್ಲಿ ಸಾಗಲಿದ್ದಾರೆ. ಈ ಸಂಚಾರವು ವೈವಾಹಿಕ ಜೀವನದಲ್ಲಿ ಸುಖದ ಹೊನಲನ್ನು ಹರಿಸುವುದು. ಸಂಗಾತಿಯೊಂದಿಗಿನ ಸಂಬಂಧವು ಸುಧಾರಿಸುವುದು.
2/7ವೃಶ್ಚಿಕ ರಾಶಿ : ಆರೋಗ್ಯದ ಬಗ್ಗೆ ಜಾಗರೂಕರಾಗಿರಿ, ಆದರೆ ಸಾಮಾನ್ಯವಾಗಿ, ಈ ಅವಧಿಯು ಕೆಲಸದಲ್ಲಿ ಯಶಸ್ಸನ್ನು ತಂದುಕೊಡುತ್ತದೆ. ಹಣಕಾಸಿನ ತೊಂದರೆ ನಿವಾರಣೆಯಾಗುವುದು.
3/7ಧನು ರಾಶಿ: ಗುರುವು ಮಕ್ಕಳು, ಶಿಕ್ಷಣ, ಸೃಜನಶೀಲತೆ ಮತ್ತು ಪ್ರೀತಿಗೆ ಸಂಬಂಧಿಸಿದ ವಿಶೇಷ ಸ್ಥಾನದಲ್ಲಿ ಸಾಗಲಿದ್ದಾರೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗುವುದು. ಮಕ್ಕಳ ಸಾಧನೆ ಸಂತಸ ತರುವುದು. ಪ್ರೇಮ ಸಂಬಂಧಗಳು ಸಿಹಿಯಾಗಿರುತ್ತವೆ. ಸೃಜನಶೀಲ ಪ್ರಯತ್ನಗಳಲ್ಲಿ ಯಶಸ್ಸು ಕಾಣುವಿರಿ.
4/7ಮಕರ ರಾಶಿ : ಕುಟುಂಬ ವಿಷಯಗಳಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ. ತಾಯಿಯೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ. ಮನೆ ಅಥವಾ ವಾಹನವನ್ನು ಖರೀದಿಸುವ ಸಾಧ್ಯತೆಗಳಿವೆ. ಕುಟುಂಬ ಜೀವನದಲ್ಲಿ ಸಮತೋಲನ ಮತ್ತು ಶಾಂತಿ ಇರುತ್ತದೆ.
5/7ಕುಂಭ ರಾಶಿ : ಸಹೋದರ ಸಹೋದರಿಯರಿಂದ ಬೆಂಬಲ ಸಿಗುವುದು. ಸಣ್ಣ ಪ್ರವಾಸಗಳು ಯಶಸ್ವಿಯಾಗುತ್ತವೆ. ಹೊಸ ಆಲೋಚನೆಗಳು ಹುಟ್ಟಿಕೊಳ್ಳುವುದು. ಹೊಸ ಮತ್ತು ಪ್ರಮುಖ ಉದ್ಯೋಗಾವಕಾಶಗಳು ಲಭಿಸುವುದು.
6/7ಮೀನ ರಾಶಿ : ಆರ್ಥಿಕ ಲಾಭದ ಸಾಧ್ಯತೆ ಹೆಚ್ಚಾಗಿದೆ. ಕುಟುಂಬದೊಂದಿಗೆ ಸಂವಹನ ಹೆಚ್ಚಾಗುತ್ತದೆ. ಈ ಸಮಯದಲ್ಲಿ ನಿಮ್ಮ ಮಾತಿನ ಬಗ್ಗೆ ಜಾಗರೂಕರಾಗಿರಬೇಕು. ಆರ್ಥಿಕ ಲಾಭ ಮತ್ತು ಉತ್ತಮ ಹೂಡಿಕೆ ಅವಕಾಶಗಳನ್ನು ಆನಂದಿಸುವಿರಿ.
7/7ಸೂಚನೆ : ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಮೀಡಿಯಾ ಇದನ್ನು ಅನುಮೋದಿಸುವುದಿಲ್ಲ.