8ನೇ ವೇತನ ಆಯೋಗ ಜಾರಿ ಬೆನ್ನಲ್ಲೇ ಮತ್ತೊಂದು ಮಹತ್ವದ ಆದೇಶ : 18 ತಿಂಗಳ ಡಿಎ ಅರಿಯರ್ಸ್ ಬಗ್ಗೆ ಸರ್ಕಾರದ ಘೋಷಣೆ

ಕೊರೊನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ  18 ತಿಂಗಳವರೆಗೆ ಈ ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರವನ್ನು ತಡೆಹಿಡಿಯಲಾಗಿತ್ತು. ಇದೀಗ ಬಾಕಿ ಡಿಎ ಬಗ್ಗೆ ಸರ್ಕಾರ ಮಹತ್ವದ ಮಾಹಿತಿ ನೀಡಿದೆ.  

1 /7

8ನೇ ವೇತನ ಆಯೋಗದ ಅಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರು  ಹಲವಾರು ಬದಲಾವಣೆಗಳನ್ನು ಕಾಣಲಿದ್ದಾರೆ. ನೌಕರರು ಮತ್ತು ಪಿಂಚಣಿದಾರರ ಬಹುನಿರೀಕ್ಷಿತ ಬೇಡಿಕೆಗಳು ಈ ಬಾರಿ ಈಡೇರುವ ನಿರೀಕ್ಷೆಯಿದೆ.

2 /7

ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು (ಸಾರ್ವಜನಿಕ ವಲಯದ ನೌಕರರು ಸೇರಿದಂತೆ) ತುಟ್ಟಿ ಭತ್ಯೆಯನ್ನು ಪಡೆಯುತ್ತಾರೆ. ವರ್ಷಕ್ಕೆ ಎರಡು ಬಾರಿ ಇದನ್ನು ಪರಿಷ್ಕರಿಸಲಾಗುತ್ತದೆ. ಸರ್ಕಾರಿ ಪಿಂಚಣಿದಾರರಿಗೆ ತುಟ್ಟಿ ಪರಿಹಾರ ನೀಡಲಾಗುತ್ತದೆ.    

3 /7

ಕೊರೊನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ  18 ತಿಂಗಳವರೆಗೆ ಡಿಎ ಮತ್ತು ಡಿಆರ್ ಅನ್ನು ತಡೆಹಿಡಿಯಲಾಗಿತ್ತು. ಈ  ಬಾಕಿ ಡಿಎಯನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಿ ನೌಕರರು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದಾರೆ. 

4 /7

ಇದೀಗ ಈ ಬಾಕಿ ಹಣ ಬಿಡುಗಡೆ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಯಲ್ಲಿ  ಸ್ಪಷ್ಟ ಉತ್ತರ ನೀಡಿದ್ದಾರೆ. 

5 /7

ಕೇಂದ್ರ ಸರ್ಕಾರಿ ನೌಕರರಿಗೆ ಬಾಕಿ ಇರುವ 18 ತಿಂಗಳ ತುಟ್ಟಿ ಭತ್ಯೆ ಮತ್ತು ತುಟ್ಟಿ ಪರಿಹಾರವನ್ನು ಬಿಡುಗಡೆ ಮಾಡಲು ಸರ್ಕಾರ ಗಡುವು ನಿಗದಿಪಡಿಸಿದೆಯೇ ಎನ್ನುವ ಪ್ರಶ್ನೆಗೆ ಈ ಬಗ್ಗೆ ಯಾವುದೇ ನಿರ್ದಿಷ್ಟ ಗಡುವನ್ನು ನಿರ್ಧರಿಸಲಾಗಿಲ್ಲ ಎಂದು ಸಚಿವರು ಹೇಳಿದ್ದಾರೆ. 

6 /7

2020 ರಲ್ಲಿ ಸಾಂಕ್ರಾಮಿಕ ರೋಗದ ಪ್ರತಿಕೂಲ ಆರ್ಥಿಕ ಪರಿಣಾಮ ಮತ್ತು ಸರ್ಕಾರ ತೆಗೆದುಕೊಂಡ ಕಲ್ಯಾಣ ಕ್ರಮಗಳಿಗಾಗಿ ಒದಗಿಸಲಾದ ನಿಧಿಗಳು 2020-21ರ ಆರ್ಥಿಕ ವರ್ಷವನ್ನು ಮೀರಿ ಹಣಕಾಸಿನ ಸೋರಿಕೆಗೆ ಕಾರಣವಾಗಿವೆ. ಆದ್ದರಿಂದ, ಬಾಕಿ  ಡಿಎ/ಡಿಆರ್  ಬಿಡುಗಡೆ ಕಾರ್ಯಸಾಧ್ಯವಿಲ್ಲ ಎಂದು ಹೇಳಿದ್ದಾರೆ.   

7 /7

ಏರುತ್ತಿರುವ ಬೆಲೆ ಏರಿಕೆ ಮತ್ತು ಹಣದುಬ್ಬರವನ್ನು ನಿಯಂತ್ರಿಸಲು, ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಮತ್ತು ತುಟ್ಟಿ ಪರಿಹಾರ ನೀಡಲಾಗುತ್ತದೆ. ಇವುಗಳನ್ನು ಪ್ರತಿ ಆರು ತಿಂಗಳಿಗೊಮ್ಮ ಅಂದರೆ , ಜನವರಿ ಮತ್ತು ಜುಲೈ ತಿಂಗಳುಗಳಲ್ಲಿ ಪರಿಷ್ಕರಿಸಲಾಗುತ್ತದೆ.