ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಭಾರತದ ಆರಂಭಿಕ ಆಟಗಾರ ಕೆಎಲ್ ರಾಹುಲ್ ಭರ್ಜರಿ ಶತಕ ಬಾರಿಸುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ.
1/5ಭಾರತದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸಮನ್ ಕೆ.ಎಲ್ ರಾಹುಲ್ ಗುರುವಾರದಂದು ಇಂಗ್ಲೆಂಡ್‌ನ ಬೆನ್ ಡಕೆಟ್ ಅವರನ್ನು ಹಿಂದಿಕ್ಕಿ 2025ರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆರಂಭಿಕ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
2/5
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ರಾಹುಲ್ 100 (197 ಎಸೆತ) ಗಳಿಸಿದರು, ಇದು ಅವರ 11ನೇ ಟೆಸ್ಟ್ ಶತಕವಾಗಿದೆ.ಈ ಪ್ರದರ್ಶನದೊಂದಿಗೆ,ಡಕೆಟ್‌ರ 602 ರನ್‌ಗಳ ದಾಖಲೆಯನ್ನು ಹಿಂದಿಕ್ಕುವ ಮೂಲಕ ಅಗ್ರಸ್ತಾನಕ್ಕೆರಿದ್ದಾರೆ.
3/5ಈ ವರ್ಷ ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯುತ್ತಮ ಫಾರ್ಮ್ ನಲ್ಲಿರುವ ಕೆ.ಎಲ್.ರಾಹುಲ್ ಲೀಡ್ಸ್‌ನಲ್ಲಿ 137 ರನ್ ಮತ್ತು ಲಾರ್ಡ್ಸ್‌ನಲ್ಲಿ 100 ರನ್ ಜೊತೆಗೆ ಮ್ಯಾಂಚೆಸ್ಟರ್‌ನಲ್ಲಿ 90 ರನ್‌ಗಳ ನಿರ್ಣಾಯಕ ಇನ್ನಿಂಗ್ಸ್ ಆಡಿ ಭಾರತಕ್ಕೆ ಡ್ರಾ ಸಾಧಿಸಲು ಸಹಕಾರಿಯಾಗಿದ್ದರು. ಇವೆಲ್ಲವೂ ಭಾರತಕ್ಕೆ ಗೆಲುವು ತಂದಿಲ್ಲದಿದ್ದರೂ, ರಾಹುಲ್‌ರ ಸ್ಥಿರತೆ ಅವರನ್ನು ಈ ವರ್ಷದ ಅತ್ಯುತ್ಕೃಷ್ಟ ಆರಂಭಿಕ ಆಟಗಾರರಲ್ಲಿ ಒಬ್ಬರನ್ನಾಗಿ ಮಾಡಿದೆ.
4/52025 ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆರಂಭಿಕ ಆಟಗಾರರು:
ಕೆಎಲ್ ರಾಹುಲ್ (ಭಾರತ) - 625 ರನ್
ಬೆನ್ ಡಕೆಟ್ (ಇಂಗ್ಲೆಂಡ್) - 602 ರನ್
ಯಶಸ್ವಿ ಜೈಸ್ವಾಲ್ (ಭಾರತ) - 479 ರನ್
ಉಸ್ಮಾನ್ ಖವಾಜ್ (ಆಸ್ಟ್ರೇಲಿಯಾ) - 461 ರನ್
ಜ್ಯಾಕ್ ಕ್ರಾಲಿ (ಇಂಗ್ಲೆಂಡ್) - 414 ರನ್
5/5ಜೈಸ್ವಾಲ್ ತಮ್ಮ ಇನ್ನಿಂಗ್ಸ್‌ನಲ್ಲಿ ಆಕರ್ಷಕ ಶಾಟ್‌ಗಳ ಮೂಲಕ ಗಮನ ಸೆಳೆದರೂ, ಜೇಡನ್ ಸೀಲ್ಸ್‌ರ ಬೌಲಿಂಗ್‌ನಲ್ಲಿ ಶಾಯ್ ಹೋಪ್‌ಗೆ ಕ್ಯಾಚ್ ನೀಡಿ ಔಟಾದರು. ಒಟ್ಟಾರೆಯಾಗಿ, ರಾಹುಲ್‌ರ ಸ್ಥಿರ ಪ್ರದರ್ಶನ ಮತ್ತು ತಂಡದ ಆರಂಭಿಕ ಜೊತೆಗೂಡಿಕೆ ಭಾರತಕ್ಕೆ ಈ ಟೆಸ್ಟ್‌ನಲ್ಲಿ ಮೇಲುಗೈ ಸಾಧಿಸುವ ಭರವಸೆಯನ್ನು ನೀಡಿದೆ.ರಾಹುಲ್ ಈ ವರ್ಷ ಒಟ್ಟಾರೆ ಟೆಸ್ಟ್ ರನ್‌ಗ ಳಿಸಿದವರ ಪಟ್ಟಿಯಲ್ಲಿ ಶುಭ್ಮನ್ ಗಿಲ್ ಮತ್ತು ಜಿಂಬಾಬ್ವೆಯ ಸೀನ್ ವಿಲಿಯಮ್ಸ್‌ರ ನಂತರ ಮೂರನೇ ಸ್ಥಾನದಲ್ಲಿದ್ದಾರೆ.