Salman Khan marriage: ಬಾಲಿವುಡ್‌ನ ಬಾಕ್ಸ್‌ಆಫೀಸ್ ಸುಲ್ತಾನ ಅಂತಾನೇ ಫೇಮಸ್ ಆಗಿರೋ ನಟ ಸಲ್ಮಾನ್ ಖಾನ್ ಅವರು ತಮ್ಮ ಡೇಟಿಂಗ್ ವದಂತಿಗಳ ಕಾರಣದಿಂದ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ ನಟ ಸಲ್ಮಾನ್ ಖಾನ್ 59 ವರ್ಷ ವಯಸ್ಸಾದರೂ ಕೂಡ ಮದುವೆಯಾಗದೆ ಉಳಿದಿರುವ ಕಾರಣವನ್ನು ಅವರ ತಂದೆ ಸಲೀಂ ಖಾನ್ ಬಿಚ್ಚಿಟ್ಟಿದ್ದಾರೆ.
1/5ಬಾಲಿವುಡ್‌ನ ಬಾಕ್ಸ್‌ಆಫೀಸ್ ಸುಲ್ತಾನ ಅಂತಾನೇ ಫೇಮಸ್ ಆಗಿರೋ ನಟ ಸಲ್ಮಾನ್ ಖಾನ್ ಅವರು ತಮ್ಮ ಡೇಟಿಂಗ್ ವದಂತಿಗಳ ಕಾರಣದಿಂದ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ ನಟ ಸಲ್ಮಾನ್ ಖಾನ್ 59 ವರ್ಷ ವಯಸ್ಸಾದರೂ ಕೂಡ ಮದುವೆಯಾಗದೆ ಉಳಿದಿರುವ ಕಾರಣವನ್ನು ಅವರ ತಂದೆ ಸಲೀಂ ಖಾನ್ ಬಿಚ್ಚಿಟ್ಟಿದ್ದಾರೆ.
2/5ಸಲೀಂ ಖಾನ್ ಅವರು ಮಾತನಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನಟ ಸಲ್ಮಾನ್ ಖಾನ್ ಅವರ ತಂದೆ ತಮ್ಮ ಮಗ ಇನ್ನೂ ಮದುವೆಯಾಗದೆ ಉಳಿದಿರಲು ಕಾರಣವೇನು ಅನ್ನೋದನ್ನ ರಿವೀಲ್ ಮಾಡಿದ್ದಾರೆ.
3/5ನನ್ನ ಪುತ್ರ ಸಲ್ಮಾನ್ ಖಾನ್ ಮಗ್ದ ಮನಸ್ಸು ಹೊಂದಿದ್ದಾನೆ. ಆತ ಸುಲಭವಾಗಿ ಸಂಬಂಧದೊಳಗೆ ಸಿಲುಕಿಹಾಕಿಕೊಳ್ಳುತ್ತಾನೆ. ಆದರೆ ಅವನಿಗೆ ಮದುವೆಯಾಗಲು ಧೈರ್ಯವಿಲ್ಲ. ಏಕೆಂದರೆ ನನ್ನ ಮಗ ತುಂಬಾ ಸರಳ ಸ್ವಭಾವ ಹೊಂದಿದ್ದಾನೆ ಮತ್ತು ಅತೀಬೇಗನೆ ಎಲ್ಲರ ಕಡೆಗೆ ಆಕರ್ಷಿತನಾಗುತ್ತಾನೆ. ತಾನು ಮದುವೆಯಾಗುವ ಹೆಣ್ಣು ತನ್ನ ತಾಯಿಯಂತೆ ಕುಟುಂಬವನ್ನು ನಿರ್ವಹಿಸಬಹುದೇ ಎಂಬ ಅನುಮಾನ ಅವನಿಗೆ ಸದಾ ಇದ್ದೇ ಇರುತ್ತದೆ ಎಂದು ಹೇಳಿದ್ದಾರೆ.
4/5ಸಲ್ಮಾನ್ ಖಾನ್ ತನ್ನ ಪತ್ನಿ ಮತ್ತು ತಾಯಿಯಂತೆ ಪತ್ನಿ-ಮಕ್ಕಳನ್ನು ನೋಡಿಕೊಳ್ಳಬೇಕು ಹಾಗೂ ಮಕ್ಕಳಿಗೆ ಊಟವನ್ನು ತಯಾರಿಸಬೇಕು, ಅವರು ತಯಾರಾಗಲು ಸಹಾಯ ಮಾಡಬೇಕು, ಮನೆಯ ಕೆಲಸವನ್ನು ಮಾಡಿಕೊಂಡು ಹೋಗಬೇಕೆಂದು ಬಯಸುತ್ತಾನೆ. ಇಂದಿನ ಕಾಲದಲ್ಲಿ ಇದು ಸುಲಭವಲ್ಲ ಎಂದಿದ್ದಾರೆ.
5/5ಇಷ್ಟು ವರ್ಷಗಳಲ್ಲಿ ನಟ ಸಲ್ಮಾನ್ ಖಾನ್ ಅವರು ಸೋಮಿ ಅಲಿ, ಸಂಗೀತ ಬಿಜಲಾನಿ, ಐಶ್ವರ್ಯ ರೈ, ಕತ್ರೀನಾ ಕೈಫ್, ಯೂಲಿಯಾ ವಂತೂರ್ ಅವರ ಜೊತೆ ಸಂಬಂಧ ಹೊಂದಿದ್ದರಾದರೂ, ಇವರ್ಯಾರನ್ನು ಮದುವೆಯಾಗಿಲ್ಲ. ಸಲ್ಲುಮಿಯಾ ಅವರು ಮದುವೆಯಾಗದೆ ಸಿಂಗಲ್ ಆಗಿರುವ ಹಿಂದಿನ ಸತ್ಯವನ್ನು ಸ್ವತಃ ಅವರ ತಂದೆ ಬಿಚ್ಚಿಟ್ಟಿದ್ದಾರೆ. ಈಗಾಗಲೇ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.