26 ಬಾರಿ ವಿಶ್ವಕಪ್ ಗೆದ್ದ ಭಾರತದ ಏಕೈಕ ಆಟಗಾರ ಯಾರೆಂದು ಗೊತ್ತಾ? ತಿಳಿದರೆ ಶಾಕ್ ಆಗೋದು ಗ್ಯಾರಂಟಿ
ಭಾರತದ ಓರ್ವ ಆಟಗಾರ 26ನೇ ಬಾರಿ ವಿಶ್ವಕಪ್ ಗೆದ್ದಿದ್ದಾನೆ. ಅಷ್ಟಕ್ಕೂ ನಾವಿಂದು ಮಾತನಾಡುತ್ತಿರುವುದು ಕ್ರಿಕೆಟ್ ಬಗ್ಗೆ ಅಲ್ಲ. ಬದಲಾಗಿ ಭಾರತದ ಸ್ಟಾರ್ ಕ್ಯೂ ಆಟಗಾರ ಪಂಕಜ್ ಅಡ್ವಾಣಿ ಬರೆದಿರುವ ಇತಿಹಾಸದ ಬಗ್ಗೆ.
ಮಂಗಳವಾರ ನಡೆದ ಐಬಿಎಸ್‌ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್’ನ ಫೈನಲ್’ನಲ್ಲಿ ಸೌರವ್ ಕೊಠಾರಿ ಅವರನ್ನು ಸೋಲಿಸಿ, 26ನೇ ಬಾರಿಗೆ ಐಬಿಎಸ್‌ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್’ಶಿಪ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಪಂಕಜ್ 2005 ರಲ್ಲಿ ತಮ್ಮ ಮೊದಲ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿದ್ದರು. ಆ ಬಳಿಕ ದೀರ್ಘ ಸ್ವರೂಪದಲ್ಲಿ ಒಂಬತ್ತು ಬಾರಿ ಪ್ರಶಸ್ತಿಯನ್ನು ಗೆದ್ದ ಹೆಗ್ಗಳಿಕೆ ಪಂಕಜ್ ಅವರದ್ದು.
ಇನ್ನೊಂದೆಡೆ ಪಾಯಿಂಟ್ ಸ್ವರೂಪದಲ್ಲಿ ಎಂಟು ಬಾರಿ ಚಾಂಪಿಯನ್ ಆಗಿದ್ದಾರೆ. ಇದಲ್ಲದೇ ಒಮ್ಮೆ ವಿಶ್ವ ಟೀಮ್ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ಗೆಲ್ಲುವಲ್ಲಿಯೂ ಯಶಸ್ವಿಯಾಗಿದ್ದರು. ಅಡ್ವಾಣಿ ಈ ಹಿಂದೆ ಸೆಮಿಫೈನಲ್’ನಲ್ಲಿ ಭಾರತದ ರೂಪೇಶ್ ಶಾ ಅವರನ್ನು 900-273 ಅಂಕಗಳಿಂದ ಸೋಲಿಸಿದ್ದರು. ಕೊಠಾರಿ ಸೆಮಿಫೈನಲ್’ನಲ್ಲಿ ಧ್ರುವ್ ಸಿತ್ವಾಲಾ ಅವರನ್ನು 900-756 ಅಂಕಗಳಿಂದ ಸೋಲಿಸಿದ್ದರು.
ಪಂಕಜ್ ಸೆಮಿಫೈನಲ್’ನಲ್ಲೂ ಅದ್ಭುತ ಪ್ರದರ್ಶನ ನೀಡಿದ್ದರು. ವಿಶ್ವ ಬಿಲಿಯರ್ಡ್ಸ್ ಮತ್ತು ಸ್ನೂಕರ್’ನಲ್ಲಿ 26 ಬಾರಿ ಚಾಂಪಿಯನ್ ಆಗಿರುವ ಪಂಕಜ್, ಸೆಮಿಫೈನಲ್’ನಲ್ಲಿ ರೂಪೇಶ್ ಶಾ ಅವರನ್ನು ಸೋಲಿಸಿದರು. ಇದರೊಂದಿಗೆ ಫೈನಲ್‌ಗೆ ಲಗ್ಗೆ ಇಟ್ಟಿದ್ದರು.
ಪಂಕಜ್ ಅಡ್ವಾಣಿ ಅವರ ಈವರೆಗಿನ ವೃತ್ತಿಜೀವನ ಅತ್ಯುತ್ತಮವಾಗಿದೆ ಎಂಬುದು ಗಮನಾರ್ಹ. 1999 ರಲ್ಲಿ ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಪ್ರವೇಶ ಮಾಡಿದರು. ಇಂಗ್ಲೆಂಡ್’ನಲ್ಲಿ ನಡೆದ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್’ನಲ್ಲಿ ಪಂಕಜ್ ಭಾಗವಹಿಸಿದ್ದರು. 2005 ರಲ್ಲಿ IBSF ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದರು. ಗ್ರ್ಯಾಂಡ್ ಡಬಲ್ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಭಾರತಕ್ಕೆ ಚಿನ್ನದ ಪದಕವನ್ನೂ ಗೆದ್ದುಕೊಟ್ಟಿದ್ದಾರೆ.
2010ರ ಏಷ್ಯನ್ ಗೇಮ್ಸ್’ನಲ್ಲಿ ಪಂಕಜ್ ಚಿನ್ನದ ಪದಕ ಪಡೆದಿದ್ದ ಅವರು ಸಿಂಗಲ್ಸ್’ನಲ್ಲಿ ಭಾಗವಹಿಸಿದ್ದರು. ಇದಕ್ಕೂ ಮುನ್ನ 2006ರ ಏಷ್ಯನ್ ಗೇಮ್ಸ್’ನಲ್ಲಿ ಚಿನ್ನ ಗೆದ್ದಿದ್ದರು. ಇದನ್ನು ದೋಹಾದಲ್ಲಿ ಆಯೋಜಿಸಲಾಗಿತ್ತು.